ಬ್ಯಾಡಗಿಯ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರಾಗಿ ಮುಕ್ತಿಯಾರ್ ಆಯ್ಕೆ

KannadaprabhaNewsNetwork |  
Published : Jul 02, 2025, 11:49 PM IST
ಬ್ಯಾಡಗಿಯ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ನೂತನ ನಿರ್ದೇಶಕ ಮಂಡಳಿ. | Kannada Prabha

ಸಾರಾಂಶ

ಅಧ್ಯಕ್ಷ ಸ್ಥಾನಕ್ಕೆ ಮುಕ್ತಿಯಾರ ಹಾಗೂ ಅಬ್ದುಲ್ ಸಮ್ಮದ ಬೆಳವಿಗಿ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಮುಕ್ತಿಯಾರ್ 8 ಮತ ಪಡೆದರೆ ಅಬ್ದುಲ್ ಸಮ್ಮದ ಬೆಳೋಗಿ ಕೇವಲ 3 ಮತಗಳನ್ನು ಪಡೆದು ಪರಾಭವಗೊಂಡರು.

ಬ್ಯಾಡಗಿ: ಅಂಜುಮನ್ಎ ಇಸ್ಲಾಂ ಸಂಸ್ಥೆಯ ನಿರ್ದೇಶಕ ಮಂಡಳಿಯ 2025ರಿಂದ 2028ರ ಅವಧಿಗೆ ನೂತನ ಅಧ್ಯಕ್ಷರಾಗಿ ಮುಕ್ತಿಯಾರ್ ಅಹ್ಮದ್ ಮುಲ್ಲಾ ಉಪಾಧ್ಯಕ್ಷರಾಗಿ ಆರ್.ಜೆ. ಮುಲ್ಲಾ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮುಕ್ತಿಯಾರ ಹಾಗೂ ಅಬ್ದುಲ್ ಸಮ್ಮದ ಬೆಳವಿಗಿ ನಾಪಪತ್ರ ಸಲ್ಲಿಸಿದ್ದು, ಇದರಲ್ಲಿ ಮುಕ್ತಿಯಾರ್ 8 ಮತ ಪಡೆದರೆ ಅಬ್ದುಲ್ ಸಮ್ಮದ ಬೆಳೋಗಿ ಕೇವಲ 3 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದು, ಆರ್.ಜೆ. ಮುಲ್ಲಾ 7 ಮತ ಪಡೆದು ಅಬ್ದುಲ್ ಸಮ್ಮದ ಬೆಳೋಗಿ ಅವರನ್ನು ಹಿಂದಿಕ್ಕಿದರು.

ಎರಡನೇ ಬಾರಿ ಅಧ್ಯಕ್ಷರಾಗಿ ಮುಕ್ತಿಯಾರ್: ಕಳೆದ ಅವಧಿಯಲ್ಲಿ(2021- 2024) ಡಾ. ಸೌದಾಗರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕೊನೆಯ ಒಂದೂವರೆ ವರ್ಷದ ಅವಧಿಗೆ ಮುಕ್ತಿಯಾರ್ ಮುಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ಧಾರೆ. ಕಾರ್ಯದರ್ಶಿಯಾಗಿ ಮಂಜೂರಅಲಿ ಹಕೀಮ, ಖಜಾಂಚಿಯಾಗಿ ಶಫಿವುಲ್ಲಾ ಮುಲ್ಲಾ ಅಂತಿಮವಾಗಿ ಆಯ್ಕೆಯಾದರು.

11 ಜನ ನಿರ್ದೇಶಕರ ಆಯ್ಕೆ: ಇದಕ್ಕೂ ಮುನ್ನ ನಡೆದ 11 ಜನ ನಿರ್ದೇಶಕರ ಚುನಾವಣೆಯಲ್ಲಿ 40 ಜನ ಆಕಾಂಕ್ಷಿಗಳು ಸ್ಪರ್ಧಿಸಿದ್ದು, ಒಟ್ಟು 1591 ಮತಗಳ ಪೈಕಿ 1479 ಮತ ಚಲಾವಣೆಗೊಂಡವು. ಅಂತಿಮವಾಗಿ ಮಹಬೂಬ ಅಗಸನಳ್ಳಿ(719), ಅಬ್ದುಲ್ ಸಮದ ಬೆಳೋಗಿ(685) ಶಫಿವುಲ್ಲಾ ಮುಲ್ಲಾ(595), ಆರ್.ಜೆ. ಮುಲ್ಲಾ(551), ಮುಕ್ತಿಯಾರ ಮುಲ್ಲಾ(525) ನಜೀರ ಆಹಮದ್ ಶೇಖ್(520), ನವೀದ ಶಿಡೇನೂರ(510) ಮಹ್ಮದಗೌಸ್ ಬಡಿಗೇರ(502), ಮಂಜೂರಅಲಿ ಹಕೀಮ(478) ನಜರುಲ್ಲಾ ನದಾಫ್(473), ಅಬ್ದುಲ್ ಖಾದರ್ ಮುದ್ಗಲ್(458) ಮತ ಪಡೆದು ನಿರ್ದೇಶಕ ಮಂಡಳಿಗೆ ಆಯ್ಕೆಯಾದರು.

ಮೂವರಿಗೆ ಸೋಲು: ಕಳೆದ ಬಾರಿ ನಿರ್ದೇಶಕರಾಗಿದ್ದು ಮರುಆಯ್ಕೆ ಬಯಸಿದ್ದ 7 ಜನರಲ್ಲಿ ಮಜೀದ ಮುಲ್ಲಾ, ಮಹ್ಮದ್ ರಫೀಕ್ ಬೆಳಗಾಂವ, ಶಫೀ ಮುಲ್ಲಾ ಸೋಲನ್ನು ಅನುಭವಿಸಿದರೆ, ಮಂಜೂರಲಿ ಹಕೀಮ, ಮುಕ್ತಿಯಾರ್ ಮುಲ್ಲಾ (ಇಬ್ಬರು ಹ್ಯಾಟ್ರಿಕ್ ಗೆಲುವು) ನವೀದ್ ಶಿಡೇನೂರ, ಅಬ್ದುಲ್ ಸಮದ ಬೆಳೋಗಿ ಗೆಲುವು ಸಾಧಿಸಿದರು.

ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಚುನಾವಣಾಧಿಕಾರಿ ಮಕ್ಬೂಲ್ ಪಾಶಾ ಅಭಿನಂದನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವೇಕಾನಂದರು ಭಾರತೀಯರ ಚೈತನ್ಯ: ಮಲ್ಲಿಕಾರ್ಜುನ್
ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಡೀಸಿ