ಮೂಲ್ಕಿ: ರೇಂಜರ್ಸ್‌, ರೋವರ್ಸ್ ಘಟಕ ಉದ್ಘಾಟನೆ

KannadaprabhaNewsNetwork |  
Published : Sep 09, 2024, 01:32 AM IST
ಮೂಲ್ಕಿ ಶ್ರೀ ನಾರಾಯಣ ಗುರು ಶಾಲೆ ಗುರು ಜ್ಯೋತಿ ಬನ್ನ ರೇಂಜರ್ಸ್‌ಮತ್ತು ರೋವರ್ಸ್ ಘಟಕದ ಉದ್ಘಾಟನೆ | Kannada Prabha

ಸಾರಾಂಶ

ಮೂಲ್ಕಿ ಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜಿನಲ್ಲಿ ರೋವರ್ಸ್‌ ಮತ್ತು ರೇಂಜರ್ನ್ ಘಟಕ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ನೀರು, ಬೆಂಕಿ, ಗಾಳಿ ಇಲ್ಲದಂತಹ ಕ್ಲಿಷ್ಟಕರ ಪರಿಸರದಲ್ಲಿ ಬಾಳಿ ಬದುಕಬೇಕಾದರೆ ವಿದ್ಯಾರ್ಥಿಗಳು ಸ್ಕೌಟಿಂಗ್ ನಲ್ಲಿ ಭಾಗವಹಿಸಬೇಕು ಎಂದು ಭಾರತ್ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಮೂಲ್ಕಿ ಅಧ್ಯಕ್ಷ ಸರ್ವೋತ್ತಮ ಅಂಚನ್ ಹೇಳಿದರು .ಮೂಲ್ಕಿ ಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜಿನಲ್ಲಿ ನಡೆದ ಬನ್ನಿ, ರೋವರ್ಸ್‌ ಮತ್ತು ರೇಂಜರ್ನ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ದಕ್ಷಿಣ ಕನ್ನಡದ ಕಾರ್ಯದರ್ಶಿ ಪ್ರತಿಮ್‌ ಕುಮಾರ್ ಅವರು ಭಾರತ್ ಸ್ಕೌಟ್ ಮತ್ತು ಗೈಡ್ ಕೇವಲ ಕೆಲವೇ ಮಕ್ಕಳಿಗೆ ಸೀಮಿತ ಅಲ್ಲ ಒಂದು ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಆಗ ಮಾತ್ರ ಸ್ಕೌಟ್ ಮತ್ತು ಗೈಡ್ ನ ವಿಚಾರಗಳು ಎಲ್ಲರ ಮನಮುಟ್ಟುತ್ತವೆ. ಶಿಕ್ಷಣ ಎಂದರೆ ಕೇವಲ ಪಠ್ಯ ಕಲಿಕೆ ಮಾತ್ರವಲ್ಲ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಯಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಸಂಚಾಲಕ ಹರೀಂದ್ರ ಸುವರ್ಣ ವಹಿಸಿದ್ದು ಭಾರತ್ ಸ್ಕೌಟ್ ಗೈಡ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್, ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಾಲಚಂದ್ರ ಸನಿಲ್, ಆಡಳಿತ ಮಂಡಳಿ ಸದಸ್ಯ ಯೋಗೀಶ್ ಕೋಟ್ಯಾನ್, ಸಂಸ್ಥೆಯ ಆಡಳಿತಾಧಿಕಾರಿ ಮಂಜುಳಾ, ಪ್ರಾಂಶುಪಾಲ ಯತೀಶ್ ಅಮೀನ್, ಮುಖ್ಯೋಪಾಧ್ಯಾನಿ ಗೀತಾ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ತಯಾರಿಸಿದ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಪ್ರದರ್ಶಿಸಲಾಯಿತು. ಪ್ರಾಂಶುಪಾಲ ಯತೀಶ್ ಅಮೀನ್ ಸ್ವಾಗತಿಸಿದರು. ರೇಂಜರ್ಸ್ ಲೀಡರ್ ವಂದನ ವಂದಿಸಿದರು. ರೋವರ್ಸ್‌ ಲೀಡರ್ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...