ಮೂಲ್ಕಿ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ, ಧಾರ್ಮಿಕ ಸಭೆ

KannadaprabhaNewsNetwork |  
Published : Oct 01, 2025, 01:01 AM IST
ಮೂಲ್ಕಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಧಾರ್ಮಿಕ ಸಭೆ  | Kannada Prabha

ಸಾರಾಂಶ

ಹಿಂದೂ ಯುವ ಸೇನೆ ಮೂಲ್ಕಿ ಹಾಗೂ ಮಹಿಳಾ ಮಂಡಳಿ ಘಟಕದ ಆಶ್ರಯದಲ್ಲಿ ಮೂಲ್ಕಿ ಬಸ್ ನಿಲ್ದಾಣದ ಬಳಿಯ ಶಿವಾಜಿ ಮಂಟಪದಲ್ಲಿ 27ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ನಡೆಯುತ್ತಿದೆ.

ಮೂಲ್ಕಿ: ಯುವ ಜನಾಂಗ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಸ್ಕಾರಯುತ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸೇವಾ ಸಂಸ್ಥೆಗಳು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಒತ್ತು ನೀಡುವ ಕಾರ್ಯ ಮಾಡಬೇಕೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.ಹಿಂದೂ ಯುವ ಸೇನೆ ಮೂಲ್ಕಿ ಹಾಗೂ ಮಹಿಳಾ ಮಂಡಳಿ ಘಟಕದ ಆಶ್ರಯದಲ್ಲಿ ಮೂಲ್ಕಿ ಬಸ್ ನಿಲ್ದಾಣದ ಬಳಿಯ ಶಿವಾಜಿ ಮಂಟಪದಲ್ಲಿ ನಡೆಯುತ್ತಿರುವ 27ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಉದ್ಯಮಿ ಜಗನ್ನಾಥ್ ಪೂಜಾರಿ ಬರ್ಕೆ ಮನೆ ಶಿಮಂತೂರು, ಸಾಮಾಜಿಕ ಕಾರ್ಯಕರ್ತ ಪೇಚು ಯಾನೆ ಪ್ರಸಾದ್ ಪೂಜಾರಿ ಹಾಗೂ ಕರಾಟೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಆದಿಶ್ ಅವರನ್ನು ಗೌರವಿಸಲಾಯಿತು.ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಉದ್ಯಮಿ ರಂಜನ್ ಬಿ. ಶೆಟ್ಟಿ, ಶಿವಶಕ್ತಿ ಕಿಲ್ಪಾಡಿ ಬಂಡಸಾಲೆ, ಡಾ.ಶ್ರೀವತ್ಸ ಉಪಾಧ್ಯಾಯ ಕೊಲಕಾಡಿ, ಮೂಲ್ಕಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹರ್ಷರಾಜ ಶೆಟ್ಟಿ, ವೈದ್ಯ ಡಾ. ಚಂದ್ರಶೇಖ‌ರ್ ಬಲೆಪು, ಕೊಳಚಿ ಕಂಬಳ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ಅಧ್ಯಕ್ಷ ಚರಣ್, ಹಿಂದು ಯುವ ಸೇನೆ ಅಧ್ಯಕ್ಷ ಸಂತೋಷ್ ಶೆಟ್ಟಿ ಹೆಜಮಾಡಿ, ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಸಾಂಸ್ಕೃತಿಕ ಕಾರ್ಯದರ್ಶಿ ಶಂಕರ್ ಪಡಂಗ ಸ್ವಾಗತಿಸಿದರು. ದಿನೇಶ್ ಕೊಲ್ನಾಡು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ