ಮೂಲ್ಕಿಯಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ

KannadaprabhaNewsNetwork |  
Published : Nov 14, 2026, 02:45 AM IST
ಮೂಲ್ಕಿಯಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ | Kannada Prabha

ಸಾರಾಂಶ

ಮೂಲ್ಕಿ ತಾಲೂಕಿನ ಶಿಮಂತೂರು, ಅತಿಕಾರಿಬೆಟ್ಟು ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ನಿರಂತರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳ್ಳುತ್ತಿರುವ ಬಗ್ಗೆ, ಕಚೇರಿಯ ದೂರವಾಣಿಯಲ್ಲಿ ಉಡಾಫೆ ಮಾತನಾಡುತ್ತಿರುವ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿಯ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ಜರುಗಿದ ಮೆಸ್ಕಾಂ ಮೂಲ್ಕಿ ಉಪ ವಿಭಾಗದ ಜನ ಸಂಪರ್ಕ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಮೂಲ್ಕಿ: ಮೂಲ್ಕಿ ತಾಲೂಕಿನ ಶಿಮಂತೂರು, ಅತಿಕಾರಿಬೆಟ್ಟು ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ನಿರಂತರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳ್ಳುತ್ತಿರುವ ಬಗ್ಗೆ, ಕಚೇರಿಯ ದೂರವಾಣಿಯಲ್ಲಿ ಉಡಾಫೆ ಮಾತನಾಡುತ್ತಿರುವ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿಯ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ಜರುಗಿದ ಮೆಸ್ಕಾಂ ಮೂಲ್ಕಿ ಉಪ ವಿಭಾಗದ ಜನ ಸಂಪರ್ಕ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಶಿಮಂತೂರಿನ ಕಿಶೋರ್‌ ಶೆಟ್ಟಿಯವರು ಮಾತನಾಡಿ, ಶಿಮಂತೂರು ಪರಿಸರದಲ್ಲಿ ವಾರದಲ್ಲಿರೆರಡು ದಿನ ಮಾತ್ರ ವಿದ್ಯುತ್‌ ಇದ್ದು ಉಳಿದ ದಿನಗಳಲ್ಲಿ ವಿದ್ಯುತ್‌ ಸರಬರಾಜು ಇರುವುದಿಲ್ಲ. ಕಚೇರಿಗೆ ದೂರವಾಣೆ ಮಾಡಿದರೆ ಸಿಬಂದಿಯವರು ಉಡಾಫೆ ಮಾತನಾಡುತ್ತಾರೆ. ನೀವು ನಮಗೆ ವಾರದಲ್ಲಿ ಯಾವ ದಿನ ವಿದ್ಯುತ್‌ ಸರಬರಾಜು ಇದೆಯೆಂದು ತಿಳಿಸಿದರೆ ಒಳ್ಳೆಯದಿತ್ತು. ಸಿಬಂದಿಗಳ ಅತಿರೇಕದ ವರ್ತನೆಯನ್ನು ನಿಯಂತ್ರಿಸುವಂತೆ ತಿಳಿಸಿದರು. ಮೂಲ್ಕಿಯ ಕೆ ಎಸ್‌ ರಾವ್‌ ನಗರದ ನವೀನ್‌ ಮಾತನಾಡಿ, ಕಳೆದ ಕೆಲವು ಸಮಯಗಳಿಂದ ವಿದ್ಯುತ್‌ ಕಣ್ಣು ಮುಚ್ಚಾಲೆಯಾಟ ಆಡುತ್ತಿದ್ದು , ದಿನಕ್ಕೆ ಹತ್ತು ಬಾರಿ ಹೋಗಿ ಬರುವುದು ನಡೆಯುತ್ತಿದೆ. ಸಿಬಂದಿಗಳ ನಿರ್ಲಕ್ಷತನದಿಂದ ಈ ರೀತಿಯಾಗುತ್ತಿದೆಯೇ, ನಮಗೆ ಭರವಸೆ ಬೇಡ, ಶಾಶ್ವತ ಪರಿಹಾರ ಬೇಕೆಂದು ಹೇಳಿದರು.

ವಕೀಲ ರವೀಶ್‌ ಕಾಮತ್‌ ಮಾತನಾಡಿ, ಅತಿಕಾರಿಬೆಟ್ಟು ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯುತ್‌ ಸಮಸ್ಯೆಯಿದ್ದು ಸುಮಾರು 70 ಬಾರಿ 1912 ಗೆ ದೂರು ನೀಡಿದ್ದು, ಈವರೆಗೆ ಸರಿಯಾಗಿಲ್ಲ. ಸಮಸ್ಯೆಯನ್ನು ಸರಿಪಡಿಸುವಂತೆ ತಿಳಿಸಿದರು. ಈ ಬಗ್ಗೆ ಮೆಸ್ಕಾಂ ಇಲಾಖೆಯ ಅಧೀಕ್ಷಕ ಇಂಜಿನಿಯರ್‌ ಕೃಷ್ಣರಾಜ್‌ ಮಾತನಾಡಿ ಶಿಮಂತೂರು, ಅತಿಕಾರಿಬೆಟ್ಟು ಸಮಸ್ಯೆ ಬಗ್ಗೆ ಅಲ್ಲಿನ ಟ್ರಾನ್ಸ್‌ ಫಾರ್ಮರ್‌ ವಿದ್ಯುತ್‌ ಲೈನ್‌ ಬಗ್ಗೆ ಪರಿಶೀಲಿಸುವಂತೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರಿಗೆ ತಿಳಿಸಿ, ಹೆಚ್ಚಿನ ಸಿಬಂದಿ ಬೇಕಿದ್ದಲ್ಲಿ ನೀಡುವುದಾಗಿ ಹೇಳಿದರು.

ಕಿನ್ನಿಗೋಳಿ ಪರಿಸರದಲ್ಲಿ ಲೋ ವೋಲ್ತೇಜ್‌ ಬಗ್ಗೆ ಕಿನ್ನಿಗೋಳಿಯ ಗ್ರಾಹಕರು, ಕಿಲ್ಪಾಡಿಯ ಗೋಪಿನಾಥ ಪಡಂಗ, ಮತ್ತಿತರ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು. ಮೆಸ್ಕಾಂ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್‌ ಅಭಿಷೇಕ್‌, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ರಾಮಕೃಷ್ಣ ಐತಾಳ್‌, ಮೂಲ್ಕಿ ಉಪ ವಿಭಾಗದ ಸಹಾಯಕ ಇಂಜಿನಿಯರ್‌ ಉಪೇಂದ್ರನಾಥ್‌ ಕೆ, ಹಿರಿಯ ಸಹಾಯಕಿ ಆಶಾ, ಮೂಲ್ಕಿ ವಿಭಾಗದ ಸೆಕ್ಷನ್‌ ಆಫೀಸರ್‌ ಕೃಷ್ಣಪ್ಪ, ಕಿನ್ನಿಗೋಳಿಯ ಸೆಕ್ಷನ್‌ ಆಫೀಸರ್‌ ದಾಮೋದರ್‌ ಜೆ ಪಿ,ಹಳೆಯಂಗಡಿಯ ಸೆಕ್ಷನ್‌ ಆಫೀಸರ್‌ ಪ್ರವೀಣ್‌ ಬಿ, ಮೂಲ್ಕಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಆಲ್ವಿನ್‌ ಕ್ಲೆಮೆಂಟ್‌, ಮೆಸ್ಕಾಂ ಮೂಲ್ಕಿಯ ಸಲಹಾ ಸಮಿತಿ ಸದಸ್ಯ ಧರ್ಮಾನಂದ ಶೆಟ್ಟಿಗಾರ್‌ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ