: ನಂಬಿಕೆ, ನಿಷ್ಠೆಗಳು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಎತ್ತರಕ್ಕೆ ಬೆಳೆಸಿದ್ದು ಮುಂದೆಯೂ ಕೂಡ ಇದನ್ನು ಕಾಪಾಡಿಕೊಂಡು ಮುಂದುವರಿಯುವಂತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಬಿ .ರಮಾನಾಥ ರೈ ಹೇಳಿದರು.
ಮೂಲ್ಕಿ: ನಂಬಿಕೆ, ನಿಷ್ಠೆಗಳು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಎತ್ತರಕ್ಕೆ ಬೆಳೆಸಿದ್ದು ಮುಂದೆಯೂ ಕೂಡ ಇದನ್ನು ಕಾಪಾಡಿಕೊಂಡು ಮುಂದುವರಿಯುವಂತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಬಿ .ರಮಾನಾಥ ರೈ ಹೇಳಿದರು.
ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಗೆ ಭೇಟಿ ನೀಡಿ ಸೊಸೈಟಿಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಸೊಸೈಟಿಯ ಪರವಾಗಿ ಅಧ್ಯಕ್ಷ ಎಚ್ ವಸಂತ ಬರ್ನಾಡ್ ರಮಾನಾಥ ರೈಯವರನ್ನು ಗೌರವಿಸಿದರು. ಬಂಟ್ವಾಳ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್, ಬಂಟ್ವಾಳ ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಜೊತೆಗಿದ್ದರು. ಸೊಸ್ಯೆಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಪಂಜ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.