ಮೂಲ್ಕಿ: ಜೀರ್ಣೋದ್ಧಾರಗೊಂಡು ಏ.7ರಿಂದ 12ರವರೆಗೆ ಬ್ರಹ್ಮಕಲಶ ನಡೆಯುವ ಸುಮಾರು 800 ವರ್ಷಕ್ಕಿಂತಲೂ ಅಧಿಕ ಇತಿಹಾಸ ಇರುವ ಕುಂಜತ್ತಬೈಲ್ ಕೊಂರ್ಗಿಬೈಲ್ ನ ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಇನಾಯತ್ ಆಲಿ ಭೇಟಿ ನೀಡಿದರು. ಜೀರ್ಣೋದ್ಧಾರ ಪ್ರಯುಕ್ತ ನೂತನವಾಗಿ ನಿರ್ಮಿಸುತ್ತಿರುವ ಸಭಾಭವನ ಹಾಗೂ ಅನ್ನಛತ್ರ ಸಂಕೀರ್ಣದ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಸಂದರ್ಭ ದೇವಳದ ವತಿಯಿಂದ ಆಮಂತ್ರಣ ಪತ್ರ ನೀಡಲಾಯಿತು. ದೇವಸ್ಥಾನ ನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ನರೇಶ್ ರೈ ದೆಪ್ಪುಣಿಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಠ್ಠಲ್ ಆಳ್ವ, ಕೂಳೂರು ಬೀಡು ಅಶೀಶ್ ಬಳ್ಳಾಲ್, ಮನಪಾ ಮಾಜಿ ಮೇಯರ್ ಹರಿನಾಥ್, ಕರ್ನಾಟಕ ಆಹಾರ ಅಯೋಗದ ಸದಸ್ಯ ಸುಮಂತ್ ರಾವ್, ಮನಪಾ ಮಾಜಿ ಸದಸ್ಯರಾದ ಅನಿಲ್ ಕುಮಾರ್, ದೀಪಕ್ ಪೂಜಾರಿ, ಯುವ ಕಾಂಗ್ರೆಸ್ ಮುಖಂಡರಾದ ಗಿರೀಶ್ ಆಳ್ವ, ರೂಪೇಶ್ ರೈ, ರೆಹಮಾನ್ ಖಾನ್, ಕುಂಜತ್ತಬೈಲ್ ವಾರ್ಡ್ ಅಧ್ಯಕ್ಷ ಹುಸೈನ್ ರಿಯಾಝ್, ನೇಮಿರಾಜ ಶೆಟ್ಟಿ ಪಕ್ಕಳ, ಶೇಖರ ಕೋಟ್ಯಾನ್, ದಯಾನಂದ ಶೆಟ್ಟಿ, ದಿನೇಶ್ ಕೊಂರ್ಗಿಬೈಲ್, ಇಬ್ರಾಹಿಂ ಅತ್ರಬೈಲ್, ಲತೀಫ್, ಅಶೋಕ ಮತ್ತಿತರರು ಉಪಸ್ಥಿತರಿದ್ದರು.