ಶ್ರೀ ನರಸಿಂಹ ಸ್ತೋತ್ರ-ಮಂತ್ರದೀಪಿಕಾ ಗ್ರಂಥ ಲೋಕಾರ್ಪಣೆ

KannadaprabhaNewsNetwork |  
Published : Nov 22, 2026, 02:45 AM IST
ಮೂಲ್ಕಿ ವೆಂಕಟರಮಣ ದೇವಳದಲ್ಲಿ ಶ್ರೀ ನರಸಿಂಹ ಸ್ತೋತ್ರ-ಮಂತ್ರದೀಪಿಕಾ  ಸಂಸ್ಕೃತ ಮತ್ತು ಕನ್ನಡ ಲಿಪಿಯ ಗ್ರಂಥ ಲೋಕಾರ್ಪಣೆ  | Kannada Prabha

ಸಾರಾಂಶ

ಮೂಲ್ಕಿ ಶ್ರೀವ್ಯಾಸಮಹರ್ಷಿ ವಿದ್ಯಾಪೀಠದಿಂದ ಪ್ರಕಾಶಿತಗೊಂಡ ಶ್ರೀ ನರಸಿಂಹ ಸ್ತೋತ್ರ-ಮಂತ್ರದೀಪಿಕಾ ಎಂಬ ಸಂಸ್ಕೃತ ಮತ್ತು ಕನ್ನಡ ಲಿಪಿಯ ಗ್ರಂಥಗಳನ್ನು ದೇವಳದ ಶ್ರೀ ಕಾಲಭೈರವ ದರ್ಶನದಲ್ಲಿ ಶ್ರೀ ದೇವರಿಗೆ ಸಮರ್ಪಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.

ಮೂಲ್ಕಿ: ಮೂಲ್ಕಿ ಶ್ರೀವ್ಯಾಸಮಹರ್ಷಿ ವಿದ್ಯಾಪೀಠದಿಂದ ಪ್ರಕಾಶಿತಗೊಂಡ ಶ್ರೀ ನರಸಿಂಹ ಸ್ತೋತ್ರ-ಮಂತ್ರದೀಪಿಕಾ ಎಂಬ ಸಂಸ್ಕೃತ ಮತ್ತು ಕನ್ನಡ ಲಿಪಿಯ ಗ್ರಂಥಗಳನ್ನು ದೇವಳದ ಶ್ರೀ ಕಾಲಭೈರವ ದರ್ಶನದಲ್ಲಿ ಶ್ರೀ ದೇವರಿಗೆ ಸಮರ್ಪಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭ ಗ್ರಂಥ ಸಂಗ್ರಾಹಕರಾದ ಶ್ರೀ ವ್ಯಾಸಮಹರ್ಷಿ ಸಂಸ್ಕೃತ ವೇದಪಾಠ ಶಾಲೆಯ ಅಧ್ಯಾಪಕ ವೇದಮೂರ್ತಿ ಕಾಗಾಲ ನವೀನ ಜನಾರ್ದನ ಭಟ್ಟ, ಶ್ರೀಕ್ಷೇತ್ರದ ಪರ್ಯಾಯ ಅರ್ಚಕ ಸಂಪಿಗೆಮನೆ ವಿಶ್ವನಾಥ ಭಟ್, ಅರ್ಚಕ ವೇದಮೂರ್ತಿ ಪದ್ಮನಾಭ ಭಟ್, ದೇವಳದ ಟ್ರಸ್ಟಿಗಳಾದ ಅತುಲ್ ಕುಡ್ವಾ,ನರೇಂದ್ರ ಕಾಮತ್, ಪ್ರಭಂದಕ ನಾಗೇಶ್ ಪೈ ಉಪಸ್ಥಿತರಿದ್ದರು. ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವಿಜಯೀಂದ್ರ ಅಧ್ಯಯನ ಕೇಂದ್ರದಿಂದ ಮೂಲ್ಕಿ ಶಾಂಭವಿ ನರಸಿಂಹ ಕುಡ್ವಾ ಮೇಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ ಸಹಕಾರದೊಂದಿಗೆ ಗ್ರಂಥ ರಚನೆಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನದಲ್ಲಿ ವಸತಿ, ಊಟೋಪಹಾರ ಸಮರ್ಪಕವಾಗಿರಲಿ
ಅಧಿವೇಶನದಲ್ಲಿ ಉಕ ಸಮಸ್ಯೆಗಳ ಚರ್ಚೆಗೆ ಆದ್ಯತೆ