ಮಲ್ಟಿಪ್ಲೆಕ್ಸ್‌ ಪಾರ್ಕಿಂಗ್‌ ಸುಲಿಗೆಗೆ ಕಡಿವಾಣವಿಲ್ಲ

KannadaprabhaNewsNetwork |  
Published : Sep 18, 2025, 02:00 AM IST
ಪಾರ್ಕಿಂಗ್‌ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರ ಮಂದಿರಗಳಲ್ಲಿ ಎಲ್ಲ ಭಾಷೆಗಳ ಸಿನಿಮಾ ಪ್ರದರ್ಶನಕ್ಕೂ ಗರಿಷ್ಠ ₹200 ಏಕರೂಪ ಟಿಕೆಟ್‌ ದರ (ತೆರಿಗೆ ಹೊರತುಪಡಿಸಿ) ಜಾರಿಗೊಳಿಸಿ ಆದೇಶಿಸಿದೆ. ಆದರೆ, ಸಿನಿಮಾ ಪ್ರೇಕ್ಷಕರು ಮಾತ್ರ ತಮ್ಮ ವಾಹನ ನಿಲುಗಡೆಗೆ ದುಬಾರಿ ಶುಲ್ಕ ಭರಿಸುವಂತಹ ಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರ ಮಂದಿರಗಳಲ್ಲಿ ಎಲ್ಲ ಭಾಷೆಗಳ ಸಿನಿಮಾ ಪ್ರದರ್ಶನಕ್ಕೂ ಗರಿಷ್ಠ ₹200 ಏಕರೂಪ ಟಿಕೆಟ್‌ ದರ (ತೆರಿಗೆ ಹೊರತುಪಡಿಸಿ) ಜಾರಿಗೊಳಿಸಿ ಆದೇಶಿಸಿದೆ. ಆದರೆ, ಸಿನಿಮಾ ಪ್ರೇಕ್ಷಕರು ಮಾತ್ರ ತಮ್ಮ ವಾಹನ ನಿಲುಗಡೆಗೆ ದುಬಾರಿ ಶುಲ್ಕ ಭರಿಸುವಂತಹ ಸ್ಥಿತಿ ಇದೆ.

ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 45ಕ್ಕೂ ಮಾಲ್‌ಗಳಿವೆ. ಈ ಮಾಲ್‌ಗಳ ಪೈಕಿ ಬಹುತೇಕ ಮಲ್ಟಿಪ್ಲೆಕ್ಸ್‌ಗಳು. ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರು ಸಿನಿಮಾ ದರದಷ್ಟೇ ಮೊತ್ತವನ್ನು ಕಾರು ಮತ್ತು ಬೈಕ್‌ ಪಾರ್ಕಿಂಗ್‌ಗೆ ಪಾವತಿಸಬೇಕಾಗಿದೆ. ಮಲ್ಟಿಪ್ಲೆಕ್ಸ್‌ಗಳಿಗಾಗಿ ಪ್ರತ್ಯೇಕ ವಾಹನ ನಿಲುಗಡೆ ಇಲ್ಲದಿದ್ದರೂ ಮಾಲ್‌ಗಳಿಗೆ ಚಿತ್ರಪ್ರದರ್ಶನ ವೀಕ್ಷಿಸಲು ಬರುವವರು ವಾಹನ ನಿಲುಗಡೆಗಾಗಿ ಹೆಚ್ಚಿನ ಶುಲ್ಕ ತೆರಬೇಕಾಗಿದೆ.

ಹೈದರಾಬಾದ್‌, ಚೆನ್ನೈ ಸೇರಿ ದೇಶದ ವಿವಿಧ ನಗರದಲ್ಲಿ ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರಮಂದಿರದಲ್ಲಿ ವಾಹನ ಪಾರ್ಕಿಂಗ್‌ಗೆ ಶುಲ್ಕ ವಿಧಿಸುತ್ತಿಲ್ಲ. ಉಚಿತವಾಗಿಯೇ ಸೌಲಭ್ಯ ಒದಗಿಸಿಕೊಡಬೇಕೆಂದು ಕಾನೂನು ಮತ್ತು ನ್ಯಾಯಾಲಯಗಳು ಆದೇಶಗಳಿದ್ದರೂ ಬೆಂಗಳೂರಲ್ಲಿ ಪಾಲನೆಯಾಗುತ್ತಿಲ್ಲ.

ಬೆಂಗಳೂರಿನ ಬಹುತೇಕ ಮಾಲ್‌ಗಳಲ್ಲಿ ದ್ವಿಚಕ್ರ ವಾಹನಕ್ಕೆ ಕನಿಷ್ಠ ಅವಧಿಗೆ (1ರಿಂದ 2 ಗಂಟೆ) ₹40, ಕಾರುಗಳಿಗೆ ಕನಿಷ್ಠ ಅವಧಿಗೆ ₹60 ದರ ನಿಗದಿಪಡಿಸಲಾಗಿದೆ. ನಂತರ ಪ್ರತಿ ಗಂಟೆಗೆ ಬೈಕ್‌ಗೆ ₹10 ರಿಂದ ₹20, ಕಾರುಗಳಿಗೆ ₹20 ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗಿದೆ. 4 ಗಂಟೆ ನಂತರ ಪ್ರತಿ ಗಂಟೆಗೆ ಕಾರಿಗೆ ಹೆಚ್ಚುವರಿ ₹30 ಪಾವತಿಸಬೇಕು.

ಕಡಿವಾಣಕ್ಕೆ ನೀತಿ ಇಲ್ಲ:

ಮಾಲ್‌ಗಳು ರಾಜಾರೋಷವಾಗಿ ವಾಹನ ಪಾರ್ಕಿಂಗ್‌ ಶುಲ್ಕ ಹೆಸರಿನಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದರೂ ಕಡಿವಾಣ ಹಾಕಲು ಸರ್ಕಾರ ಈವರೆಗೆ ಸೂಕ್ತ ನೀತಿ ಮತ್ತು ನಿಯಂತ್ರಣ ರೂಪಿಸಿಲ್ಲ. ನಗರ ಭೂ ಸಾರಿಗೆ ನಿರ್ದೇಶನಾಲಯ ವಾಹನ ಪಾರ್ಕಿಂಗ್‌ ಕುರಿತು ಎರಡು ನೀತಿ ರೂಪಿಸಿ ಸ್ಥಳೀಯ ಸಂಸ್ಥೆಗೆ (ಬಿಬಿಎಂಪಿಗೆ) ಮೂರ್ನಾಲ್ಕು ವರ್ಷದ ಹಿಂದೆಯೇ ಜಾರಿಗೆ ಕಳುಹಿಸಿಕೊಟ್ಟಿದೆ. ಆದರೆ, ಈವರೆಗೂ ಜಾರಿ ಮಾಡುವ ಪ್ರಯತ್ನಕ್ಕೆ ಪಾಲಿಕೆ ಮುಂದಾಗಿಲ್ಲ.

ತೆರಿಗೆ ವಿನಾಯ್ತಿ ಕೊಟ್ರೂ ದುಬಾರಿ ಶುಲ್ಕ:

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿರುವ ಎಲ್ಲ ಕಟ್ಟಡಗಳ ವಾಹನ ಪಾರ್ಕಿಂಗ್‌ ಸ್ಥಳದ ವಿಸ್ತೀರ್ಣಕ್ಕೆ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ವಿನಾಯಿತಿ ಪಡೆದರೂ ಸಾರ್ವಜನಿಕರಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ವಿನಾಯಿತಿ ನೀಡುವ ಸ್ಥಳೀಯ ಸಂಸ್ಥೆಗಳು ಮಾಲ್‌ಗಳಲ್ಲಿ ವಾಹನ ಪಾರ್ಕಿಂಗ್‌ಗೆ ವಿಧಿಸುವ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು ಅವಕಾಶ ಇದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪ್ರತಿಷ್ಠಿತ ಮಾಲ್‌ನ ವಾಹನ ಪಾರ್ಕಿಂಗ್‌ ಶುಲ್ಕಪಟ್ಟಿ(₹)

ಗಂಟೆಗೆ ದರಬೈಕ್‌ಕಾರು

0-14060

1-26080

2-380100

3-4100130

4-5120160

5-6140190

6-7160220

7-8180250

8-9200300

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಬೀದಿ ನಾಯಿಗಳು ಶೀಘ್ರ ಶೆಲ್ಟರ್‌ಗೆ : ರಾವ್‌
ಸಿದ್ದು ಅಹಿಂದ ಲೀಡರ್‌ ಆಗಿದ್ದರೆ ಪುತ್ರ ಕ್ಷೇತ್ರ ಆಯ್ಕೆ ಏಕೆ?: ಗೌಡ