ಮುಂಡರಗಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

KannadaprabhaNewsNetwork |  
Published : Sep 14, 2025, 01:04 AM IST
ಪೋಟೋ ಇದೆ. | Kannada Prabha

ಸಾರಾಂಶ

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 137ನೇ ಜನ್ಮ ದಿನೋತ್ಸವದ ಅಂಗವಾಗಿ ಸೆ. 14ರಂದು ಬೆಳಗ್ಗೆ 11 ಗಂಟೆಗೆ ಮುಂಡರಗಿಯಲ್ಲಿ ಜರುಗಲಿರುವ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಶಿಕ್ಷಕ, ಉಪನ್ಯಾಸರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮುಂಡರಗಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 137ನೇ ಜನ್ಮ ದಿನೋತ್ಸವದ ಅಂಗವಾಗಿ ಸೆ. 14ರಂದು ಬೆಳಗ್ಗೆ 11 ಗಂಟೆಗೆ ಮುಂಡರಗಿಯಲ್ಲಿ ಜರುಗಲಿರುವ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಶಿಕ್ಷಕ, ಉಪನ್ಯಾಸರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮಕ್ತುಂಪುರ ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ವಿ.ಆರ್. ಕುರುಡಗಿ, ಮಾರುತಿ ನಗರದ ಸ.ಕಿ.ಪ್ರಾ.ಶಾಲೆ ಶಿಕ್ಷಕ ಚೇತನದಾಸು ಪವಾರ, ಬಿದರಹಳ್ಳಿ ಸ.ಹಿ.ಪ್ರಾ.ಶಾಲೆ ಶಿಕ್ಷಕ ಮಾಲತೇಶ ವರ್ದಿ, ಹಿರೇವಡ್ಡಟ್ಟಿ ಸ.ಕಿ.ಪ್ರಾ.ಉ.ಶಾಲೆ ಶಿಕ್ಷಕ ರವಿ ಕನ್ನಳ್ಳಿ, ಗುಮ್ಮಗೋಳ ಸ.ಹಿ.ಪ್ರಾಶಾಲೆ ಶಿಕ್ಷಕ ಹರ್ಷ ಜೋಗಿನ, ಡಸ ರಾಮೇನಹಳ್ಳಿಯ ಸ.ಹಿ.ಪ್ರಾ.ಶಾಲೆ ಶಿಕ್ಷಕ ಕೆ.ಆರ್.ಯತ್ನಟ್ಟಿ, ಕೊರ್ಲಹಳ್ಳಿ ಸ.ಕಿ.ಪ್ರಾ.ಶಾಲೆ ಶಿಕ್ಷಕಿ ಎಸ್.ಎಸ್.ತೆಗ್ಗಿನಮಠ, ಕೊರ್ಲಹಳ್ಳಿ ಸ.ಕಿ.ಪ್ರಾ.ಹೆ.ಮ.ಶಾಲೆ ಶಿಕ್ಷಕ ಬಿ.ಎಲ್.ಚನ್ನಪ್ಪಗೌಡ್ರ ಆಯ್ಕೆಯಾಗಿದ್ದಾರೆ.

ಕಲಕೇರಿ ಸ.ಹಿ.ಪ್ರಾ.ಹೆ.ಮ.ಶಾಲೆ ಶಿಕ್ಷಕಿ ಎ.ಎಂ.ಮಡಿವಾ‍ಳರ, ಹಿರೇವಡ್ಡಟ್ಟಿ ಸ.ಹಿ.ಪ್ರಾ.ಹೆ.ಮಾ.ಶಾಲೆ ಶಿಕ್ಷಕ ಬಿ.ಎ.ಬೋಧಲೇಖಾನ್, ಪೇಠಾಲೂರು ಸ.ಮಾ.ಹಿ.ಪ್ರಾ.ಶಾಲೆ ಶಿಕ್ಷಕ ಬಿ.ಎಸ್.ತುರಕಾಣಿ, ಮುಂಡರಗಿ ಸ.ಹಿ.ಪ್ರಾ.ಶಾಲೆ ಕೋಟೆ 1ರ ಶಿಕ್ಷಕಿ ಆರ್.ಎಂ.ತಳವಾರ, ರಾಮೇನಹಳ್ಳಿ ಎಂ.ಎಸ್. ಸ.ಹಿ.ಪ್ರಾ.ಶಾಲೆ ಶಿಕ್ಷಕ ಪಿ.ಎಂ.ಲಾಂಡೆ, ಚುರ್ಚಿಹಾಳ ಸ.ಹಿ.ಪ್ರಾ.ಶಾಲೆ ಶಿಕ್ಷಕ ಕುಮಾರ ಕೊಗಂಟಿ, ಮುಂಡರಗಿ ಸ.ಹಿ.ಪ್ರಾ.ಶಾಲೆ ಕೋಟೆ 1ರ ಶಿಕ್ಷಕಿ ಎಸ್.ಎಚ್.ಇಮ್ರಾಪೂರ ಆಯ್ಕೆಯಾಗಿದ್ದಾರೆ.

ಪ್ರೌಢ ವಿಭಾಗದಿಂದ ಬರದೂರು ಸ.ಪ್ರೌ.ಶಾಲೆಯ ಶಿಕ್ಷಕಿ ಮಲ್ಲಿಕಾ ನಾಯಕ, ಹಳ್ಳಿಗುಡಿ ಸ.ಪ್ರೌ.ಶಾಲೆ ಶಿಕ್ಷಕಿ ಎಂ.ಎ.ಲಾಲಮಿಯಾ, ಹೆಸರೂರ ಸ.ಪ್ರೌ.ಶಾಲೆ ಶಿಕ್ಷಕ ಮಲ್ಲಪ್ಪ ನಾಟೀಕರ್, ಅನುದಾನಿತ ವಿಭಾಗದಿಂದ ಕಪ್ಪತಗಿರಿ ಶ್ರೀ ಮಲ್ಲಿಕಾರ್ಜುನ ಕ.ಹಿ.ಪ್ರಾ.ಶಾಲೆಯ ಶಿಕ್ಷಕ ಚೆನ್ನಬಸಯ್ಯ ಮುಧೋಳ, ಮುಂಡರಗಿ ಎಂ.ಎಸ್.ಡಂಬಳ ಪ್ರೌಢಶಾಲೆಯ ಶಿಕ್ಷಕ ಬಿ.ಡಿ.ಹಳ್ಳಿಗುಡಿ, ಮುಂಡರಗಿ ಜ.ಅ.ಪ್ರೌಢ ಶಾಲೆ ಉಪ ಪ್ರಾಚಾರ್ಯ ಎಸ್.ಸಿ.ಚಕ್ಕಡಿಮಠ ಆಯ್ಕೆಯಾಗಿದ್ದಾರೆ.

ಅನ್ನದಾನೀಶ್ವರ ಮಠದಿಂದ ನೀಡುವ ಶಿಕ್ಷಕ ಪ್ರಶಸ್ತಿಗೆ ಹಾರೋಗೇರಿ ಸ.ಹಿ.ಪ್ರಾ.ಶಾಲೆ ಮುಖೋಪಾಧ್ಯಾಯ ಎಸ್.ವಿ.ಪಾಟೀಲ, ಚಿಕ್ಕವಡ್ಡಟ್ಟಿ ಸ.ಪ್ರೌ.ಶಾಲೆ ಶಿಕ್ಷಕ ನರಸಿಂಹ ನಾಯ್ಕ, ಕಲಾ ಸಿರಿ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಡಂಬಳ ಸ.ಹಿ.ಪ್ರಾ.ಉ.ಶಾಲೆ ಶಿಕ್ಷಕಿ ಸುಸನ್ನಾ ಕನವಳ್ಳಿ ಆಯ್ಕೆಯಾಗಿದ್ದಾರೆ. ಅಂಗನವಾಡಿ ವಿಭಾಗದಿಂದ ಹಾರೋಗೇರಿ ಅಂಗನವಾಡಿಯ ಸರೋಜಾ ಅಂಗಡಿ, ಮುಂಡರಗಿ ಅಂಗನವಾಡಿಯ ವಿಜಯಲಕ್ಷ್ಮಿ ಪೋಚಗೊಂಡರ್ ಆಯ್ಕೆಯಾಗಿದ್ದಾರೆ.

ಮುಂಡರಗಿ ಕ.ರಾ.ಬೆಲ್ಲದ ಮಹಾವಿದ್ಯಾಲಯದ ಡಾ.ವನಜಾಕ್ಷಿ ಭರಮಗೌಡ್ರ, ಜ.ಅನ್ನದಾನೀಶ್ವರ ಪ.ಪೂ.ಕಾಲೇಜಿನ ಪ್ರಾ.ಪ್ರಕಾಶ ಕಲ್ಲನಗೌಡರ, ಬಾಗೇವಾಡಿ ಸಿಆರ್ಪಿ ಮುರುಗಯ್ಯ ಮುರುಡೂರಮಠ, ಮುಂಡರಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯ ಜೈ ಬುನ್ನಿಸಾ ನಮಾಜಿ ಆಯ್ಕೆಯಾಗಿದ್ದಾರೆಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣೀಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ