ಕಡೂರು ಸಮಗ್ರ ಅಭಿವೃದ್ಧಿಗೆ ಪುರಸಭೆ ಆಡಳಿತ ಮಂಡಳಿ ಸನ್ನದ್ಧ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Aug 22, 2025, 12:00 AM IST
21ಕೆಕೆಡಿಯು  1. | Kannada Prabha

ಸಾರಾಂಶ

ಕಡೂರುಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆ ಆಡಳಿತ ಮಂಡಳಿ ಸದಾ ಸನ್ನದ್ಧವಾಗಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆ ಆಡಳಿತ ಮಂಡಳಿ ಸದಾ ಸನ್ನದ್ಧವಾಗಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಗುರುವಾರ ಪುರಸಭಾ ನಿಧಿ ₹13 ಲಕ್ಷ ವೆಚ್ಚದಲ್ಲಿ ಪಟ್ಟಣದ 12ನೇ ವಾರ್ಡಿನಲ್ಲಿ ಯು.ಬಿ. ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. 2011 ಸಾಲಿನಲ್ಲಿ ಈ ರಸ್ತೆ ಕುರಿತು ಗೊಂದಲವಿದ್ದಕಾರಣ ರೈಲ್ವೆಯವರು ಕಾಂಪೊಂಡ್ ಹಾಕಿದ್ದರು. ಆ ಸಂದರ್ಭದಲ್ಲಿ ವೈ.ಎಸ್ .ವಿ. ದತ್ತ ಅವರು ಶಾಸಕರಾಗಿದ್ದು ರೈಲ್ವೆ ನಿಲ್ದಾಣಕ್ಕೆ ತೆರಳಲು ಹಾಕಿದ್ದ ಕಾಂಪೌಂಡನ್ನು ತೆರವುಗೊಳಿಸಿದಾಗ ವಿವಾದ ಕೋರ್ಟ್ ಗೆ ಹೋಗಿತ್ತು. ಆದರೆ ಜನ ಸರಿ ರಾತ್ರಿಯಲ್ಲೂ ಓಡಾಡಲು ಅನುಕೂಲವಾಗುತ್ತದೆ ಎಂದು ನಾನು ಸದಸ್ಯ ಮನು ತೀರ್ಮಾನಿಸುವ ಮೂಲಕ ಪುರಸಭಾ ನಿಧಿಯಿಂದ ₹13ಲಕ್ಷ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ನಮ್ಮ ಶಾಸಕ ಕೆ.ಎಸ್. ಆನಂದ್ ಅವರು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಇದೀಗ ಪುರಸಭೆಯು ಜನರ ತೆರಿಗೆ ಹಣದಿಂದ ಈ ಕಾರ್ಯ ನಡೆಯುತ್ತಿದೆ. ತಾವು ಸೇರಿದಂತೆ ಪುರಸಭೆ ಉಪಾಧ್ಯಕ್ಷರು, ಸದಸ್ಯರು ಅಧಿಕಾರಿಗಳು ಸೇರಿ ಹುಡುಕಿ ಅಭಿವೃದ್ದಿಯ ಕೆಲಸ ಮಾಡುತ್ತಿದ್ದೇವೆ ಎಂದರು.ಪುರಸಭೆಯಿಂದ ಈ ರಸ್ತೆಗೆ ಹೈಮಾಸ್ಟ್ ದೀಪ ಹಾಕಿದ್ದು ಮತ್ತಷ್ಟು ದೀಪ ಅಳವಡಿಸಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಹೇಳಿ. ಬಸವೇಶ್ವರ ವೃತ್ತದಲ್ಲಿ ಬಸ್ ನಿಲ್ದಾಣ ಮಾಡಲಾಗುತ್ತಿದ್ದು ಶೀಘ್ರದಲ್ಲೇ ಇದು ಲೋಕಾರ್ಪಣೆ ಆಗಲಿದೆ ಎಂದರು.

12ನೇ ವಾರ್ಡಿನ ಸದಸ್ಯ ಮರುಗುದ್ದಿ ಮನು ಮಾತನಾಡಿ, ನಮ್ಮ ವ್ಯಾಪ್ತಿಗೆ ಬರುವ ಮತ್ತು ಸುಮಾರು 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಗೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ವೈಯಕ್ತಿಕ ಆಸಕ್ತಿವಹಿಸಿ ಇಂದು ಅವರ ನೇತೃತ್ವದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬಹಳ ವರ್ಷಗಳ ಬಳಿಕ ಈ ಕಾಮಗಾರಿಗೆ ಮಹೂರ್ತ ಕೂಡಿ ಬಂದಿದೆ. ಹಾಗಾಗಿ ಅಧ್ಯಕ್ಷರಿಗೆ ಪಟ್ಟಣದ ನಾಗರಿಕರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೋವಿಂದರಾಜು, ಸಂದೇಶ್ ಕುಮಾರ್, ಮಾಜಿ ಸದಸ್ಯ ಚಿನ್ನರಾಜು, ಪುರಸಭೆ ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಕದಂಬ ವೆಂಕಟೇಶ್, ಇಂಜಿನಿಯರ್ ಲೋಕೇಶ್ , ಗಿರೀಶ್, ಸಿಬ್ಬಂದಿ ತಿಮ್ಮಯ್ಯ, ಪ್ರೇಂ, ಸಾರ್ವಜನಿಕರು ಉಪಸ್ಥಿತರಿದ್ದರು.

21ಕೆಕೆಡಿಯು1.

ಕಡೂರು ಪುರಸಭೆಯಿಂದ ಪಟ್ಟಣದ ಯು.ಬಿ.ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ನಿರ್ಮಾಣಕ್ಕೆ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಚಾಲನೆ ನೀಡಿದರು. ವಾರ್ಡಿನ ಸದಸ್ಯ ಮರುಗುದ್ದಿ ಮನು, ಗೋವಿಂದರಾಜು ಮತ್ತಿತರರು ಇದ್ದರು..

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ