ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಲು ಪುರಸಭೆ ಸಹಯೋಗ: ವಸಂತ್ ಕುಮಾರ್

KannadaprabhaNewsNetwork |  
Published : Oct 03, 2024, 01:21 AM IST
ತರೀಕೆರೆಯಲ್ಲಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ಸ್ವಚ್ಛತೆಯೇ ದೇವರು. ಸಾರ್ವಜನಿಕರು ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪುರಸಭಾ ಅಧ್ಯಕ್ಷ ವಸಂತ್ ಕುಮಾರ್ ಹೇಳಿದರು.

ತರೀಕೆರೆಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಸ್ವಚ್ಛತೆಯೇ ದೇವರು. ಸಾರ್ವಜನಿಕರು ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪುರಸಭಾ ಅಧ್ಯಕ್ಷ ವಸಂತ್ ಕುಮಾರ್ ಹೇಳಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ 155 ನೇ ಜನ್ಮದಿನಾಚರಣೆ ಅಂಗವಾಗಿ ಲಯನ್ಸ್ ಇಂಟನ್ಯಾಷನಲ್ ಕ್ಲಬ್ ತರೀಕೆರೆ ಹಾಗೂ ಪುರಸಭೆ ಆಶ್ರಯದಲ್ಲಿ ವಾರ್ಡ್ 9 ರ ಎಸ್. ಎಂ.ಏನ್. ಲೇಔಟ್ ನ ಉದ್ಯಾನವನದಲ್ಲಿ ಸ್ವಚ್ಛತೆಯೇ ಸೇವೆ 2024ರ ಅಡಿ ಶ್ರಮದಾನ ಮತ್ತು ಬೃಹತ್ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿ ಇದಕ್ಕೆ ಪುರಸಭೆ ಯಾವಾಗಲೂ ಕೈಜೋಡಿಸುತ್ತದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸಾಯಿಕುಮಾರ್ ಮಾತನಾಡಿ ಸ್ವಚ್ಛತೆಯಲ್ಲಿ ಆರೋಗ್ಯ, ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ಪುರಸಭೆ ಯವರು ಈ ಸೇವೆ ಮಾಡಲು ಅನುಕೂಲಮಾಡಿ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿ ಹಾಡುಗಳನ್ನು ಹಾಡಿ ಕೆಲಸ ಮಾಡುತ್ತಿದ್ದ ಎಲ್ಲರನ್ನೂ ರಂಜಿಸಿದರು.

ಪುರಸಭಾ ಅಧ್ಯಕ್ಷ ವಸಂತ್ ಕುಮಾರ್ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸಾಯಿಕುಮಾರ್ ಎ.ಎಸ್. ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪೌರಕಾರ್ಮಿಕರು, ಪುರಸಭೆ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್, ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಮುರಳಿ ಟಿ.ಎನ್. ನಿರ್ದೇಶಕ ನವೀನ್ ಟಿ.ಎಂ , ರವಿಕುಮಾರ್ ಟಿ.ಡಿ. ಸೋಮಶೇಖರಯ್ಯ, ಟಿ. ಏನ್. ಮುಂತಾದವರು ಭಾಗವಹಿಸಿದ್ದರು.

2ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್‌ ಕ್ಲಬ್, ಪುರಸಭೆಯಿಂದ ಬೃಹತ್ ಸ್ವಚ್ಛತಾ ಅಭಿಯಾನ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್‌ಸ್ಪೆಕ್ಟರ್‌ಗೆ ಜಾನಪದ ಅಕಾಡೆಮಿ ಪ್ರಶಸ್ತಿ!
ರಂಗಮಂಟಪದ ಮೇಲೆ ಮೂಡಿ ಬಂದ ಗುರು–ಶಿಷ್ಯ ಪರಂಪರೆಯ ಜೀವಂತ ರಂಗಾನುಭವ