ಮಹಾನಗರ ಪಾಲಿಕೆಯಿಂದ ಗುತ್ತಿಗೆದಾರರಿಗೆ ಪ್ರತಿ ತಿಂಗಳು ಬಿಲ್‌ ಪಾವತಿ

KannadaprabhaNewsNetwork |  
Published : Jan 02, 2026, 03:30 AM IST
445546 | Kannada Prabha

ಸಾರಾಂಶ

ಸಿವಿಲ್‌ ಹಾಗೂ ಎಲೆಕ್ಟ್ರಿಕಲ್‌ ಗುತ್ತಿಗೆದಾರರಿಗೆ ಪಾಲಿಕೆಯಿಂದ ₹ 138.03 ಕೋಟಿ ಕೊಡುವುದು ಬಾಕಿಯಿದೆ. ಇದರಲ್ಲಿ ₹ 85.07 ಕೋಟಿ ಪಾವತಿಸಲು ನಿರ್ಧರಿಸಿದೆ. ಎಲ್ಲ ಗುತ್ತಿಗೆದಾರರಿಗೆ ಅಂದರೆ ಕಾಮಗಾರಿ ಮುಗಿದ ಅವಧಿಯ ಲೆಕ್ಕದ ಪ್ರಕಾರ ಜೇಷ್ಟತಾ ಆಧಾರದ ಮೇಲೆ ಬಿಲ್‌ ಪಾವತಿಸಲು ನಿರ್ಧರಿಸಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಹೊಸ ವರ್ಷಕ್ಕೆ ಗುತ್ತಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ. ಸಿವಿಲ್‌ ಹಾಗೂ ಎಲೆಕ್ಟ್ರಿಕಲ್‌ ಗುತ್ತಿಗೆದಾರರಿಗೆ ಹೊಸ ವರ್ಷದಲ್ಲಿ ಪ್ರತಿ ತಿಂಗಳು ಇಂತಿಷ್ಟು ಬಿಲ್‌ ಪಾವತಿಸಲು ನಿರ್ಧರಿಸಿದೆ. ಜತೆಗೆ ಯಾವ್ಯಾವ ತಿಂಗಳು ಎಷ್ಟೆಷ್ಟು ಪಾವತಿಸಲಾಗುವುದು ಎಂಬುದನ್ನು ಪ್ರಕಟಿಸಿದೆ.

ಸಿವಿಲ್‌ ಹಾಗೂ ಎಲೆಕ್ಟ್ರಿಕಲ್‌ ಗುತ್ತಿಗೆದಾರರಿಗೆ ಪಾಲಿಕೆಯಿಂದ ₹ 138.03 ಕೋಟಿ ಕೊಡುವುದು ಬಾಕಿಯಿದೆ. ಇದರಲ್ಲಿ ₹ 85.07 ಕೋಟಿ ಪಾವತಿಸಲು ನಿರ್ಧರಿಸಿದೆ. ಎಲ್ಲ ಗುತ್ತಿಗೆದಾರರಿಗೆ ಅಂದರೆ ಕಾಮಗಾರಿ ಮುಗಿದ ಅವಧಿಯ ಲೆಕ್ಕದ ಪ್ರಕಾರ ಜೇಷ್ಟತಾ ಆಧಾರದ ಮೇಲೆ ಬಿಲ್‌ ಪಾವತಿಸಲು ನಿರ್ಧರಿಸಿದೆ.

ಇದರಲ್ಲಿ ಸಿವಿಲ್‌ ವರ್ಕ್‌ನ ₹ 60.77 ಕೋಟಿ, ಸಿವಿಲ್‌ ತುರ್ತು ಕಾಮಗಾರಿ ₹ 5 ಕೋಟಿ, ಎಲೆಕ್ಟ್ರಿಕಲ್‌ ವರ್ಕ್‌ ₹ 4.80 ಕೋಟಿ, ಎಲೆಕ್ಟ್ರಿಕಲ್‌ ತುರ್ತು ಕೆಲಸ ₹ 2.5 ಕೋಟಿ, ಋತುಮಾನದ ಅಗತ್ಯ ಕೆಲಸಗಳಿಗೆ ₹ 12 ಕೋಟಿ ಸೇರಿದಂತೆ ₹ 85.07 ಕೋಟಿ ನೀಡಲಾಗುತ್ತಿದೆ. ಇದರಲ್ಲಿ ಜನವರಿ ₹ 6.41 ಕೋ, ಫೆಬ್ರವರಿ ₹ 6.53 ಕೋಟಿ, ಮಾರ್ಚ್‌ ₹ 6.41 ಕೋಟಿ, ಏಪ್ರಿಲ್‌- ₹ 13.84 ಕೋಟಿ, ಮೇ- ₹ 6.3 ಕೋಟಿ, ಜೂನ್‌ ₹ 6.50 ಕೋಟಿ, ಜುಲೈ ₹ 6.49 ಕೋಟಿ, ಆಗಸ್ಟ್‌ ₹ 6.43 ಕೋಟಿ, ಸೆಪ್ಟೆಂಬರ್‌ ₹ 6.44 ಕೋಟಿ, ಅಕ್ಟೋಬರ್‌ ₹ 6.30 ಕೋಟಿ, ನವೆಂಬರ್‌ ₹ 6.96 ಕೋಟಿ, ಡಿಸೆಂಬರ್‌ ₹ 6.96 ಕೋಟಿ ಪಾವತಿಸಲು ನಿರ್ಧರಿಸಿದೆ.

ಯಾವ ತಿಂಗಳು ಯಾರ ಬಿಲ್‌ ಪಾವತಿಯಾಗುತ್ತದೆ ಎಂಬುದು ಮೊದಲೇ ಗೊತ್ತಾಗುತ್ತದೆ. ಆ ತಿಂಗಳಿನ 5ನೇ ತಾರೀಖಿನೊಳಗೆ ಅವರು ತಮ್ಮ ಜಿಎಸ್‌ಟಿ ಇನ್ವೈಸ್‌ ಸಲ್ಲಿಸಬೇಕು. ಅದಾದ ಬಳಿಕ ಬಿಲ್‌ ಪಾವತಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ತಿಳಿಸಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಬಿಲ್‌ಗಾಗಿ ಪ್ರತಿಭಟನೆ ನಡೆಸುವುದು, ಮುಖಂಡರ ಶಿಫಾರಸುಗಾಗಿ ಅಲೆದಾಡುವುದು ತಪ್ಪುತ್ತದೆ. ಜತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಇದು ಆರೋಗ್ಯಕರ ಬೆಳವಣಿಗೆ ಎಂಬುದು ಗುತ್ತಿಗೆದಾರರ ಅಂಬೋಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು