20 ರಂದು ನಗರಸಭೆ ಕಟ್ಟಡ ಉದ್ಘಾಟನೆ

KannadaprabhaNewsNetwork |  
Published : Jan 11, 2025, 12:47 AM IST
ಯಾದಗಿರಿ ನಗರಸಭೆ ನೂತನ ಕಟ್ಟಡವನ್ನು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

Municipal Council building to be inaugurated on the 20th

-ಪೌರಾಡಳಿತ ಸಚಿವ ರಹಿಂಖಾನ್‌ ಅವರಿಂದ ಸುಸಜ್ಜಿತ, ಭವ್ಯ ಕಟ್ಟಡ ಉದ್ಘಾಟನೆ

-ಕೊನೆಯ ಹಂತದ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ನಗರಸಭೆ ಅಧ್ಯಕ್ಷ ಲಲಿತಾ ಅನಪುರ

----

ಕನ್ನಡಪ್ರಭ ವಾರ್ತೆ ಯಾದಗಿರಿ

ನೂತನ ನಗರಸಭೆ ಕಟ್ಟಡದ ಉದ್ಘಾಟನೆಗೆ ಮೂಹೂರ್ತ ನಿಗದಿಯಾಗಿದೆ. ಸುಸಜ್ಜಿತ ಮತ್ತು ಲಿಫ್ಟ್ ಸೌಲಭ್ಯ ಹೊಂದಿರುವ ಭವ್ಯ ಕಟ್ಟಡದ ಉದ್ಘಾಟನೆಗೆ 20ರಂದು ದಿನಾಂಕ ನಿಗದಿಗೊಳಿಸಲಾಗಿದೆ ಎಂಬ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ತಿಳಿಸಿದ್ದಾರೆ.

ನಗರಸಭೆ ಸರ್ವ ಸದಸ್ಯರ ಸಭೆ ಹಾಗೂ ಅಧಿಕಾರಿಗಳ ಪೂರ್ವಭಾವಿಯಾಗಿ ನೂತನ ಕಟ್ಟಡದ ವೀಕ್ಷಿಸಿ ಬಳಿಕ ಮಾತನಾಡಿದ ಅವರು, ಅಲ್ಲಿನ ಮುಗಿದಿರುವ ಮತ್ತು ಉಳಿದ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪೌರಾಡಳಿತ ಸಚಿವ ರಹಿಂಖಾನ್ ಕಟ್ಟಡ 20 ರಂದು ಕಟ್ಟಡ ಉದ್ಘಾಟಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಸೇರಿದಂತೆಯೇ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ನಗರಸಭೆ ಅಧಿಕಾರಿಗಳ ಸಭೆ ನಡೆಸಿರುವ ಅವರು, ಜಿಲ್ಲೆಯಲ್ಲಿ ಮಾದರಿ ಕಟ್ಟಡ ಇದಾಗಿದ್ದು, ಯಾವುದೇ ಲೋಪ ಆಗದಂತೆಯೆ ಯಶಸ್ಸಿಗೊಳಿಸಬೇಕೆಂದು ಅವರು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.

ನಗರಸಭೆ ಉಪಾಧ್ಯಕ್ಷೆ ರೂಕಿಯಾ ಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ, ಉಪಾದಕ್ಷರಾದ ರುಕಿಯಾ ಬೇಗಂ ಮತ್ತು ನಗರಸಭೆ ಸದಸ್ಯರು ಇದ್ದರು.

-----

ಫೋಟೊ: ಯಾದಗಿರಿ ನಗರಸಭೆ ನೂತನ ಕಟ್ಟಡವನ್ನು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ವೀಕ್ಷಣೆ ಮಾಡಿದರು.

10ವೈಡಿಆರ್8

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!