ಹೊಸಕೋಟೆ: ನಗರಸಭೆ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದರೂ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಅವರು ಜನರ ಸಮಸ್ಯೆ ಆಲಿಸದೆ, ನಗರಸಭೆಗೆ ಬರುವ ನಾಗರಿಕರ ಕೈಗೂ ಸಿಗುವುದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ದಲಿತಪರ ಹೋರಾಟಗಾರ ಕೆಆರ್‌ಬಿ ಶಿವಾನಂದ್ ಆರೋಪಿಸಿದರು.
ಇ ಸ್ವತ್ತಿಗಾಗಿ ಅಲೆದಾಟ: ಸರ್ಕಾರ ಮನೆ ಬಾಗಿಲಿಗೆ ಇ ಖಾತೆ ಎಂದು ಅಭಿಯಾನವನ್ನೆ ಮಾಡಿದರೂ, ಇ ಖಾತೆ ಮಾಡಲು ಜನ ನಗರಸಭೆ ಕಚೇರಿಗೆ ಅಧಿಕಾರಿಗಳು ಅಲ್ಲೋಗಿ ಇಲ್ಲೋಗಿ ಅಂತ ಸುತ್ತಾಡಿಸುತ್ತಾರೆ. ಆದರೆ ಜನ ಅವರ ಸಮಸ್ಯೆ ಯಾರಿಗೆ ಹೇಳಬೇಕು. ನಗರದಲ್ಲಿ 10 ದಿನಕ್ಕೊಮ್ಮೆ ನೀರು ಬರುತ್ತಿದೆ. ನೀರಿನ ಸಮಸ್ಯೆ, ಕಸದ ಸಮಸ್ಯೆ ಹೇಳೋಕೆ ಎರಡು ಮೂರು ತಿಂಗಳಿಂದ ಅಧ್ಯಕ್ಷರೆ ನಾಪತ್ತೆ ಆಗಿದ್ದಾರೆಂದು ದೂರಿದರು.
ಇವ್ರು ಯಾವ ಪಾರ್ಟಿ ಎಂದು ಗೊಂದಲ:ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಇವರನ್ನು ನಂಬಿ ಅಧಿಕಾರ ವಹಿಸಿದ್ದರೆ, ಇವರು ಅಧ್ಯಕ್ಷ ಗಾದಿಯನ್ನು ಸಮರ್ಪಕವಾಗಿ ನಿಭಾಯಿಸದೆ ದ್ರೋಹ ಮಾಡುತ್ತಿದ್ದಾರೆ. ಅಲ್ಲದೆ ನಗರಸಭೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ಇವರು ಈಗ ಬಿಜೆಪಿನೋ, ಕಾಂಗ್ರಸ್ಸೋ, ಜೆಡಿಎಸ್ಸೋ ಯಾವ ಪಕ್ಷದಲ್ಲಿದ್ದಾರೆ ಎಂದು ಜನರಿಗೆ ಗೊಂದಲ ಆಗಿದೆ ಎಂದು ಹೇಳಿದರು.
ಫೋಟೋ: 11 ಹೆಚ್‌ಎಸ್‌ಕೆ 1ಹೊಸಕೋಟೆ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆಆರ್‌ಬಿ ಶಿವಾನಂದ್ ಸುದ್ದಿಘೋಷ್ಠಿಯಲ್ಲಿ ಆರೋಪಿಸಿದರು.