ಇದು ಭಾರತೀಯರು ಸಂಭ್ರಮಿಸುವ ಸಂತಸದ ಸಮಯ

KannadaprabhaNewsNetwork |  
Published : Aug 16, 2025, 02:01 AM IST
53 | Kannada Prabha

ಸಾರಾಂಶ

ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂಬ ಧೀರ ನುಡಿಗಳು, ಬ್ರಿಟಿಷ್ ಸಾಮ್ರಾಜ್ಯ ನಡುಗಿಸಿ ಚೂರಾಗಿದ್ದ ಭಾರತವನ್ನು ಒಂದುಗೂಡಿಸಿದವು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಗುಲಾಮಗಿರಿಯ ದಾಸ್ಯದ ಕತ್ತಲಿನಿಂದ ಬೆಳಕಿನೆಡೆಗೆ ಹೆಜ್ಜೆ ಇಟ್ಟ ಸ್ವಾತಂತ್ರ್ಯ ದಿನ ನಮಗೆ ಬರಿ ದಿನಾಂಕವಲ್ಲ, ಇದು ಕೋಟ್ಯಾಂತರ ಭಾರತೀಯರು ಸಂಭ್ರಮಿಸುವ ಸಂತಸದ ಸಮಯ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಪ್ರಾಣ ತ್ಯಾಗ ಮತ್ತು ಜೀವದಾನ ಮಾಡಿದ ಸಾವಿರಾರು ಮಂದಿ ಹೋರಾಟಗಾರರು ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಅವರು ಸದಾ ಸ್ಮರಣೀಯ ಎಂದರು.

ಮಹಾತ್ಮ ಗಾಂಧಿಯವರ ಅಸಹಕಾರ, ಉಪ್ಪಿನ ಮತ್ತು ಚಲೇಜಾವ್ ಚಳವಳಿಗಳು, ಬಾಲಗಂಗಾಧರ್ ತಿಲಕ್ ಅವರ ಸ್ವರಾಜ್ಯ ನನ್ನ ಹಕ್ಕು ಘೋಷಣೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರಕ್ತ ಕೊಡಿ ನಾನು ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂಬ ಧೀರ ನುಡಿಗಳು, ಬ್ರಿಟಿಷ್ ಸಾಮ್ರಾಜ್ಯ ನಡುಗಿಸಿ ಚೂರಾಗಿದ್ದ ಭಾರತವನ್ನು ಒಂದುಗೂಡಿಸಿದವು ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ರಾಜ್ಯದ ಪಾತ್ರವೂ ಅಪಾರವಾಗಿದ್ದು, ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೋರಾಟ ಸದಾ ಸ್ಮರಣೀಯವೆಂದು ನೆನೆಸಿಕೊಂಡರು.

ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪಟ್ಟಣದ ಬಸವೇಶ್ವರ ಬಡಾವಣೆಯ ಜೀವಾ ಆರ್ಥೋ ಕೇರ್ ನ ಡಾ. ಕೆ.ಆರ್. ಗೌತಮ್, ಪೌರ ಕಾರ್ಮಿಕ ಪಳನಿ, ಪ್ರಗತಿ ಪರ ರೈತ ಶಿವಣ್ಣೇಗೌಡ, ನಿವೃತ್ತ ಯೋಧ ಗೋವಿಂದ ಮತ್ತು ಮೀನುಗಾರಿಕೆ ಪ್ರವೀಣ ಪುಟ್ಟನಾಯಕ ಅವರನ್ನು ಶಾಸಕರು ಗೌರವಿಸಿದರು.

ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನೆರೆದಿದ್ದವರಿಗೆ ಮನರಂಜನೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಿಂದ ಪಟ್ಟಣದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಹಾಸನ ಮೈಸೂರು ರಸ್ತೆಯ ಮೂಲಕ ಬಯಲು ರಂಗ ಮಂದಿರದವರೆಗೆ ಆಕರ್ಷಕ ಮೆರವಣಿಗೆ ನಡೆಸಿ ಗಮನ ಸೆಳೆಸಿದರು.

ಪುರಸಭೆ ಅಧ್ಯಕ್ಷ ಡಿ. ಶಿವುನಾಯಕ್, ಉಪಾಧ್ಯಕ್ಷೆ ಪಲ್ಲವಿ ಆನಂದ್, ಸದಸ್ಯರಾದ ಶಂಕರಸ್ವಾಮಿ, ಪ್ರಕಾಶ್, ಸಿ. ಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್. ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಮೇಶ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಜಿಪಂ ಮಾಜಿ ಸದಸ್ಯ ಜಿ. ರಾಮೇಗೌಡ, ತಾಲೂಕು ಕುಂಬಾರರ ಸಂಘದ ಮಾಜಿ ಅಧ್ಯಕ್ಷ ತಿಮ್ಮಶೆಟ್ಟಿ, ಮುಖಂಡರಾದ ಶ್ರೀನಿವಾಸ್, ಆದರ್ಶ, ಮಹದೇವ್, ಚಂದ್ರು, ತಾಪಂ ಇಒ ವಿ.ಪಿ. ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್. ರಮೇಶ್, ಬಿಇಒ ಆರ್. ಕೃಷ್ಣಪ್ಪ, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಶಿರಸ್ತೇದಾರ್ ಅಸ್ಲಾಂಬಾಷಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಟ್ಟಣದ ವಿವಿದ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ