ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಚಿತ ಆರೋಗ್ಯ ಶಿಬಿರ ಯಶಸ್ವಿ

KannadaprabhaNewsNetwork |  
Published : Aug 16, 2025, 02:01 AM IST
40 | Kannada Prabha

ಸಾರಾಂಶ

ಆರೋಗ್ಯ ತಪಾಸಣೆಯ ಎರಡು ದಿನಗಳಲ್ಲಿ 500ಕ್ಕೂ ಹೆಚ್ಚಿನ ಸದಸ್ಯರು ಈ ಒಂದು ಉಚಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಶಿಬಿರದ ಉಪಯೋಗ

ಕನ್ನಡಪ್ರಭ ವಾರ್ತೆ ಮೈಸೂರು ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದಿಂದ ಸದಸ್ಯರಿಗೆ ಆಯೋಜಿಸಿದ್ದ ಎರಡು ದಿನಗಳ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ ನಡೆಯಿತು.ಶಿಬಿರಕ್ಕೆ ಚಾಲನೆ ನೀಡಿದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮನೋಜ್ ಕುಮಾರ್ ಮಾತನಾಡಿ, ಸಹಕಾರಿ ತತ್ವದಡಿ ಸ್ಥಾಪನೆಯಾಗಿ 120 ವರ್ಷದತ್ತ ದಾಪುಗಾಲು ಇಟ್ಟಿರುವ ಈ ಬ್ಯಾಂಕಿನ ಆಡಳಿತ ಮಂಡಳಿಯು ರಚನಾತ್ಮಕ ಕ್ರಿಯಾಶೀಲ ಚಟುವಟಿಕೆ ಮೂಲಕ ಗ್ರಾಹಕರನ್ನು ಆಕರ್ಷಿಸುವ ಮೂಲಕ ಖಾಸಗಿ ಬ್ಯಾಂಕುಗಳನ್ನು ಮೀರಿ ಕಾರ್ಯನಿರ್ವಹಿಸಿ ಪ್ರತಿ ವರ್ಷವೂ ಲಾಭವನ್ನು ಕಾಣಿತ್ತಿದೆ, ಜೊತೆಗೆ ಸದಸ್ಯರಿಗೆ ಅನುಕೂಲವಾಗುವಂತೆ ಆರೋಗ್ಯ ತಪಾಸಣಾ ಕಾರ್ಯ ಶ್ಲಾಘನೀಯ ಎಂದರು.ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕಿನ ಅದ್ಯಕ್ಷ ಜೆ. ಯೋಗೇಶ್ ಮಾತನಾಡಿ, ಆರೋಗ್ಯ ತಪಾಸಣೆಯ ಎರಡು ದಿನಗಳಲ್ಲಿ 500ಕ್ಕೂ ಹೆಚ್ಚಿನ ಸದಸ್ಯರು ಈ ಒಂದು ಉಚಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಶಿಬಿರದ ಉಪಯೋಗ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದೆ ರೀತಿಯಲ್ಲಿ ಇನ್ನು ಹೆಚ್ಚಿನ ಕ್ರಿಯಾಶೀಲತೆಯನ್ನು ಒಳಗೊಂಡ ರಚನಾತ್ಮಕ ಕಾರ್ಯಕ್ರಮ ಹಾಗೂ ಚಟುವಟಿಕೆಗಳನ್ನು ಬ್ಯಾಂಕಿನ ವತಿಯಿಂದ ಹಮ್ಮಿಕೊಳ್ಳಲಾಗುವುದು, ಜೊತೆಗೆ ಸೆ. 14ರಂದು ಮುಂದಿನ ತಿಂಗಳು ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಬ್ಯಾಂಕಿನ 119ನೇ ವಾರ್ಷಿಕ ಮಹಾಸಭೆಯನ್ನು 2024-2025 ನೇ ಸಾಲಿನ ಆಯೋಜಿಸಲಿದ್ದು, ದಯಮಾಡಿ ಎಲ್ಲ ಸರ್ವ ಸದಸ್ಯರು ಖುದ್ದು ಹಾಜರಾಗಿ ಹಾಜರಾತಿ ಪುಸ್ತಕದಲ್ಲಿ ತಮ್ಮ ಸಹಿ ಹಾಕುವುದರ ಮೂಲಕ ಮುಂಬರುವ ಚುನಾವಣೆಗಳಲ್ಲಿ ಅವರ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಉಪಾಧ್ಯಕ್ಷ ಕುಂಬಾರಕೊಪ್ಪಲ್ ರವಿ, ನಿರ್ದೇಶಕರಾದ ಎನ್‌. ಯೋಗಾನಂದ, ಜಿ. ನಿರಂಜನ್‌, ಎಚ್‌. ಹರೀಶ್ ಕುಮಾರ್‌, ರಾಜಕೀಯ ರವಿಕುಮಾರ್, ಆರ್. ಸೋಮಣ್ಣ, ಕೆ. ಗಿರೀಶ್, ಪಡುವಾರಹಳ್ಳಿಯ ಎಂ. ರಾಮಕೃಷ್ಣ, ಸಿ. ಚಂದ್ರಶೇಖರ್, ಪಿ. ರಾಜೇಶ್ವರಿ, ಎಂ. ಪ್ರಮೀಳ ಲೋಕೇಶ್, ಸಿ.ಎಸ್. ರಾಮಕೃಷ್ಣಯ್ಯ, ಮುಖ್ಯಕಾರ್ಯನಿರ್ವಹಕ ಕೆ. ಹರ್ಷಿತ್ ಗೌಡ ಇದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌