ಕನ್ನಡಪ್ರಭ ವಾರ್ತೆ ಬಂಗಾರಪೇಟೆ
೨೭ ಸದಸ್ಯರನ್ನು ಹೊಂದಿರುವ ಬಂಗಾರಪೇಟೆ ಪುರಸಭೆಯಲ್ಲಿ ಕಾಂಗ್ರೆಸ್ ೨೦ ಸದಸ್ಯರನ್ನು ಹೊಂದಿದೆ, ಬಿಜೆಪಿ ೧ ಜೆಡಿಎಸ್ ೨ ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದು, ಎಸ್‌ಸಿಯಿಂದ ಗೆದ್ದಿರುವ ಪುರುಷರಲ್ಲಿ ಗೋವಿಂದ ಒಬ್ಬರೇ ಆಯ್ಕೆಯಾಗಿದ್ದು ಮಹಿಳೆಯರಲ್ಲಿ ಕಳೆದ ಬಾರಿ ಉಪಾಧ್ಯಕ್ಷರಾಗಿದ್ದ ಶಾರಧ ಗೌತಮನಗರದಿಂದ ಆಯ್ಕೆಯಾಗಿದ್ದು, ಆವರೂ ಸಹ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಶಾಸಕರು ಯಾರ ಕಡೆ ಒಲವು ತೋರುವರು ಎಂಬುದು ಕುತೂಹಲ ಮೂಡಿಸಿದೆ.
ಶಾಸಕರ ಆಪ್ತ ಗೋವಿಂದ ಅಧ್ಯಕ್ಷ ಸ್ಥಾದ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದು ಕಡೆ ಶಾರದ ತಮಗೆ ಅವಕಾಶ ನೀಡುವಂತೆ ಶಾಸಕರ ಮೇಲೆ ಒತ್ತಡ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ. ಆದರೂ ಗೋವಿಂದ ಹಾಗೂ ಚಂದ್ರವಾಣಿ ಬಹುತೇಕವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗಿದೆ.ಛಲ ಬಿಡದ ಶಾರದ:ಅಲ್ಲದೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಬೋವಿ ಸಮುದಾಯದವರು ಕಾಂಗ್ರೆಸ್ ಅಭ್ಯರ್ಥಿ ಪರ ನಿಲ್ಲದೆ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಮಲ್ಲೇಶಬಾಬು ಪರ ನಿಂತು ಹೆಚ್ಚಿನ ಮತಗಳನ್ನು ಕ್ಷೇತ್ರದಿಂದ ಕೊಡಿಸಿರುವ ಕೋಪ ಶಾಸಕರಲ್ಲಿರುವುದರಿಂದ ಮತ್ತು ಗೋವಿಂದ ಸಹ ಬೋವಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನ ನೀಡದೆ ಎಸ್‌ಸಿ ಮಹಿಳೆಗೆ ನೀಡದರೆ ಹೇಗೆ ಎಂದು ಚರ್ಚೆ ಶುರುವಾಗಿರುವುದರಿಂದ,ಶಾರದ ರವರು ಇದನ್ನು ಬಳಸಿಕೊಂಡು ಒಂದು ಕೈ ನೋಡೋಣವೆಂದು ತಾಲೀಮು ನೆಡೆಸಿದ್ದಾರೆ. ಅಂತೆಯೇ ಉಪಾಧ್ಯಕ್ಷ ಸ್ಥಾನಕ್ಕೂ ಸದ್ದಿಲ್ಲದೆ ಪೈಕಿ ಕುಂಬಾರಪಾಳ್ಯ ವಾರ್ಡಿನಿಂದ ಆಯ್ಕೆಯಾಗಿರುವ ಚಂದ್ರವಾಣಿ ಮಂಜುನಾಥ್ ಹೆಸರು ಈಗಾಗಲೇ ಅಂತಿಮವಾಗಿರುವುದರಿಂದ ಅವರು ನಿರಾಳರಾಗಿದ್ದಾರೆ.