ನಗರಸಭೆ ವಾರ್ಡ್ 22 ಉಪಚುನಾವಣೆ: ಬಿಜೆಪಿ ಜಯಭೇರಿ

KannadaprabhaNewsNetwork |  
Published : Dec 31, 2023, 01:30 AM IST
ಬಿಜೆಪಿ ಜಯಭೇರಿ | Kannada Prabha

ಸಾರಾಂಶ

ಚಲಾವಣೆಯಾದ ಮತಗಳ ಪೈಕಿ ಬಿಜೆಪಿಯ ತ್ರಿವೇಣಿ ಪವಾರ 872, ಕಾಂಗ್ರೆಸ್‌ ಪಕ್ಷದ ಸುರೇಖಾ ಕಂಬಳಿ 350 ಜೆಡಿಎಸ್‌ನ ಸಂಗೀತಾ ಮಡಿವಾಳರ 69, ಕವಿತಾ ಹುಟ್ಟಿ 113, ರೇಖಾ ಬಾರಾಟಕ್ಕೆ 153 ಪಕ್ಷೇತರ ಹಾಗೂ ನೋಟಾಕ್ಕೆ 7 ಮತಗಳು ಲಭಿಸಿವೆ.

ರಾಣಿಬೆನ್ನೂರು: ಸ್ಥಳೀಯ ನಗರ ಸಭೆ ವಾರ್ಡ್ 22ಕ್ಕೆ ಡಿ.22ರಂದು ನಡೆದ ಉಪಚುನಾವಣೆ ಮತಗಳ ಎಣಿಕೆ ಶನಿವಾರ ನಡೆದಿದ್ದು, ಬಿಜೆಪಿ ಅಭ್ಯರ್ಥಿ ತ್ರಿವೇಣಿ ಪವಾರ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷದ ಸುರೇಖಾ ಅವರನ್ನು 522 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.

ಒಟ್ಟು ಚಲಾವಣೆಯಾದ ಮತಗಳ ಪೈಕಿ ಬಿಜೆಪಿಯ ತ್ರಿವೇಣಿ ಪವಾರ 872, ಕಾಂಗ್ರೆಸ್‌ ಪಕ್ಷದ ಸುರೇಖಾ ಕಂಬಳಿ 350 ಜೆಡಿಎಸ್‌ನ ಸಂಗೀತಾ ಮಡಿವಾಳರ 69, ಕವಿತಾ ಹುಟ್ಟಿ 113, ರೇಖಾ ಬಾರಾಟಕ್ಕೆ 153 ಪಕ್ಷೇತರ ಹಾಗೂ ನೋಟಾಕ್ಕೆ 7 ಮತಗಳು ಲಭಿಸಿವೆ.

ಬಿಜೆಪಿ ವಿಜಯೋತ್ಸವ: ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿ ಬಳಿ ಪರಸ್ಪರ ಗುಲಾಲು ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಶಹರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ನಗರಸಭೆ ಸದಸ್ಯರುಗಳಾದ ನಾಗರಾಜ ಪವಾರ, ಮಲ್ಲಿಕಾರ್ಜುನ ಅಂಗಡಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಪ್ರಭಾವತಿ ತಿಳವಳ್ಳಿ, ಪ್ರಕಾಶ ಪೂಜಾರ, ಪ್ರಕಾಶ ಬುರಡಿಕಟ್ಟಿ, ನಾಗರಾಜ ಅಡ್ಮನಿ, ಹನುಮಂತಪ್ಪ ಹೆದ್ದೇರಿ, ಎಪಿಎಂಸಿ ಮಾಜಿ ಸದಸ್ಯ ಪರಮೇಶ ಗೂಳಣ್ಣನವರ, ಅನಿಲ ಸಿದ್ದಾಳಿ, ಶಿವಯೋಗಿ ಹಳ್ಳಳ್ಳಿ, ರಮೇಶಗುತ್ತಲ, ಮೈಲಪ್ಪ ಗೋಣಿಬಸಮ್ಮನವರ, ಚಂದ್ರಶೇಖರ ಕುಂದಾಪುರ, ಶಿವಕುಮಾರ ಹಾರ್ಕನಾಳ, ಸಂತೋಷ ತೇವರಿ, ಲಿಂಗನಗೌಡ ಪಾಟೀಲ, ಶೇಖಪ್ಪ ನರಸಗೊಂಡರ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ