ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ಮೇ 20ರಂದು ಕನ್ನಡಪ್ರಭದಲ್ಲಿ ‘ಇರುವುದು ಗ್ರಂಥಾಲಯ ಬರುವುದು ದುರ್ನಾತʼ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಪಣೀಂದ್ರ ಅವರು ಜೂ.9 ರಂದು ಮೇಲ್ಕಂಡ ಮೂವರು ಅಧಿಕಾರಿಗಳ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು,ಪ್ರಕರಣದ ಪ್ರತಿವಾದಿಗಳಾಗಿ ಪರಿಗಣಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದ್ದು, ಅಲ್ಲದೆ ಬರುವ ಜು.13ಕ್ಕೆ ವಿಚಾರಣೆ ನಿಗದಿಪಡಿಸಿ ಆದೇಶ ಹೊರಡಿಸಿದ್ದರು. ಉಪ ಲೋಕಾಯುಕ್ತರ ಆದೇಶದ ಪ್ರಕಾರ ಕನ್ನಡಪ್ರಭ ಪತ್ರಿಕೆ ಜೂ.10ರಂದು ‘ಗುಂಡ್ಲುಪೇಟೆ ಲೈಬ್ರರಿ ಸುತ್ತ ಅಶುಚಿ: ಲೋಕಾಯುಕ್ತ ಸುಮೋಟೊ ಕೇಸುʼ ಎಂದು ವರದಿ ಪ್ರಕಟಿಸಿ ಅಧಿಕಾರಿಗಳಿಗೆ ಎಚ್ಚರಿಸುವ ಕೆಲಸ ಮಾಡಿತ್ತು. ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಎಸ್.ಸರವಣ ಇಲ್ಲಿನ ಗ್ರಂಥಾಲಯದ ಮುಂದಿದ್ದ ಪಾಸ್ಟ್ ಫುಡ್ ಹಾಗೂ ಮಾಂಸಾಹಾರ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದವರ ಮನವೊಲಿಸಿ ಪೆಟ್ಟಿಗೆ ಅಂಗಡಿಗಳನ್ನು ಸ್ಥಳಾಂತರ ಗೊಳಿಸುವ ಮೂಲಕ ಮೈಸೂರು- ಊಟಿ ಹೆದ್ದಾರಿಯ ಫುಟ್ ಪಾತ್ ನಲ್ಲಿ ಸಾರ್ವಜನಿಕರು ಹಾಗೂ ಪಾದಚಾರಿಗಳು ಸರಾಗವಾಗಿ ನಡೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.-----
ಗುಂಡ್ಲುಪೇಟೆ: ಸಾರ್ವಜನಿಕ ಗ್ರಂಥಾಲಯದ ಮುಂದಿನ ಗೂಡಂಗಡಿಗಳು ಲೋಕಾಯುಕ್ತರು ಮಧ್ಯ ಪ್ರವೇಶಿಸಿದ ಬಳಿಕ ತೆರವಾದದ್ದು ನಿಜಕ್ಕೂ ದುರಂತ ವಿಷಯವೇ ಸರಿ. ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೆಲಸ ಮಾಡಿದರೆ ಲೋಕಾಯುಕ್ತರ ಎಂಟ್ರಿ ಕೊಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ರಾಜಕಾರಣಿಗಳ ಹಿಂಬಾಲಕರ ಮಾತಿಗೆ ಅಧಿಕಾರಿಗಳು ಮರುಳಾಗದೆ ಗೂಡಂಗಡಿಗಳ ತೆರವುಗೊಳಿಸಿದ್ದರೆ ಲೋಕಾಯುಕ್ತರು ಮಧ್ಯ ಪ್ರವೇಶಿಸುವ ಅಗತ್ಯವೇ ಇರಲಿಲ್ಲ. ಪಟ್ಟಣದ ಕೆಆರ್‌ಸಿ ರಸ್ತೆ, ಕಾಂಗ್ರೆಸ್ ಕಚೇರಿ ರಸ್ತೆ, ಟಿ.ಬಿ.ರಾಜರತ್ನಮ್ಮ ರಸ್ತೆ, ಹಳೆ ಆಸ್ಪತ್ರೆ ರಸ್ತೆಗಳಲ್ಲೂ ವಾಹನಗಳು ಸರಾಗ ಹೋಗಲು ಪುರಸಭೆ ಹಾಗೂ ಪೊಲೀಸರು ಇನ್ನಾದರೂ ಅವಕಾಶ ಮಾಡಿ ಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಪ ಲೋಕಾಯುಕ್ತರ ಸೂಚನೆ ಹಾಗೂ ಅವಧಿಯೊಳಗೆ ಗ್ರಂಥಾಲಯದ ಮುಂದಿದ್ದ ಮಾಂಸಾಹಾರದಂಗಡಿ ಹಾಗೂ ಪಾಸ್ಟ್ ಫುಡ್ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಕೈಗೊಂಡ ಕ್ರಮದ ವರದಿಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಲಾಗುವುದು. ಸಾರ್ವಜನಿಕರ ಆರೋಗ್ಯ ಹಾಗೂ ಓದುವರಿಗೆ ಪ್ರಶಾಂತ ವಾತಾವರಣ ನಿರ್ಮಿಸಿ ಕೊಡುವುದು ಪುರಸಭೆಯ ಕರ್ತವ್ಯ.
-----
-ಎಂ.ಶೈಲಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ