ಲಕ್ಷ್ಮೇಶ್ವರ: ತಾಲೂಕಿನ ಮುನಿಯನ ತಾಂಡಾದಿಂದ ಉಂಡೇನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಮತ್ತು ರೈತರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.ತಾಂಡಾದಿಂದ ಉಂಡೇನಹಳ್ಳಿ, ಸೂರಣಗಿ, ಯಲ್ಲಾಪುರ ಗ್ರಾಮಕ್ಕೆ ಈ ರಸ್ತೆ ಸಂಪರ್ಕ ಕಲ್ಲಿಸುತ್ತದೆ. ರಸ್ತೆ ಮಧ್ಯದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಈ ಗುಂಡಿಗಳು ತುಂಬಿಕೊಳ್ಳುತ್ತವೆ. ಆಗ ರಸ್ತೆ ಯಾವುದೋ ಗುಂಡಿ ಯಾವುದೋ ಎಂಬುದು ವಾಹನ ಸವಾರರಿಗೆ ಗೊತ್ತಾಗುವುದೇ ಇಲ್ಲ.
ರಸ್ತೆಯನ್ನು ದುರಸ್ತಿ ಮಾಡಿಸುವಂತೆ ತಾಂಡಾ ನಿವಾಸಿಗಳು ಮತ್ತು ಉಂಡೇನಹಳ್ಳಿ ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಬಂದು ಪರಿಶೀಲಿಸಿ ಹೋಗಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಮುಖಂಡ ಲಕ್ಷ್ಮಣ ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು.ಮುನಿಯನ ತಾಂಡಾ ಮತ್ತು ಉಂಡೇನಹಳ್ಳಿ ಗ್ರಾಮದ ರೈತರು ಈ ರಸ್ತೆ ಮೇಲೆಯೇ ಅವಲಂಬಿತರಾಗಿದ್ದು, ಪ್ರತಿನಿತ್ಯ ಹೊಲಗಳಿಗೆ ಹೋಗಿ ಬರಲು ಮತ್ತು ಫಸಲನ್ನು ತರಲು ಹರ ಸಾಹಸ ಪಡುವಂತಾಗಿದೆ ಎನ್ನುತ್ತಾರೆ ಮಹದೇವಪ್ಪ ಸಕ್ರಪ್ಪ ಲಮಾಣಿ, ನೀಲಪ್ಪ ಲಮಾಣಿ.ರಸ್ತೆ ದುರಸ್ತಿಗಾಗಿ ಗ್ರಾಮ ಪಂಚಾಯ್ತಿಯಿಂದ ಕ್ರಿಯಾಯೋಜನೆ ಸಿದ್ಧಪಡಿಸಿ ತಾಲೂಕು ಪಂಚಾಯ್ತಿಗೆ ಸಲ್ಲಿಸಿದ್ದೇವೆ. ಅಧಿಕಾರಿಗಳೂ ಭೇಟಿ ನೀಡಿ ರಸ್ತೆ ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ ಈವರೆಗಾದರೂ ದುರಸ್ತಿ ಕಾಮಗಾರಿ ಆರಂಭ ಆಗಿಲ್ಲ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ಇಂದ್ರವ್ವ ಲಕ್ಷ್ಮಣ ಲಮಾಣಿ ತಿಳಿಸಿದರು. ಇಂದು ಕಸಾಪ ದತ್ತಿ ಉಪನ್ಯಾಸಮುಂಡರಗಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ತೋಂಟದಾರ್ಯ ಕೋಟೆ ಪ್ರೌಢಶಾಲೆಯ ಆಶ್ರಯದಲ್ಲಿ ದತ್ತಿ ಉಪನ್ಯಾಸ ಹಾಗೂ ಡಿ.ಜಿ. ಹಿರೇಮಠ ವಿರಚಿತ ಭಾವದುಯ್ಯಾಲೆ ಭಾಗ- 1 ಹಾಗೂ 2 ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ಅ. 27ರಂದು ಮಧ್ಯಾಹ್ನ 2.30ಕ್ಕೆ ಪಟ್ಟಣದ ಜೆ.ಟಿ. ಕೋಟೆ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಜರುಗಲಿದೆ.ಭುವನೇಶ್ವರಿ ವಿದ್ಯಾವರ್ಧಕ ಸಮಿತಿ ಅಧ್ಯಕ್ಷ ಸಿ.ಬಿ. ಚನ್ನಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಲಿಂ. ಎಂ.ಬಿ. ಪೂಜಾರ ಗುರುಗಳ ಸ್ಮರಣಾರ್ಥ ದತ್ತಿ ದಾನಿಗಳಾದ ಆರ್.ವೈ. ಸಿರಸಗಿ ಹಾಗೂ ಎಂ.ಬಿ. ಪೂಜಾರ ಅವರ ಶಿಷ್ಯ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.ಧಾರವಾಡ ಪ್ರೊ. ಡಾ. ಸಂಗಮೇಶ ಸವದತ್ತಿಮಠ ಡಿ.ಜಿ. ಹಿರೇಮಠ ವಿರಚಿತ ''''''''ಭಾವದುಯ್ಯಾಲೆ'''''''' ಭಾಗ- 1 ಹಾಗೂ 2 ಕವನ ಸಂಕಲನ ಲೋಕಾರ್ಪಣೆ ಮಾಡಲಿದ್ದಾರೆ.ಕೊಟ್ಟೂರಿನ ವಿಶ್ರಾಂತ ಪ್ರಾಚಾರ್ಯ ಎ.ವಿ. ಅಂಕದ ಕವನ ಸಂಕಲನದ ಕುರಿತು ಮಾತನಾಡಲಿದ್ದಾರೆ. ಬಿಇಒ ಗಂಗಾಧರ ಅಣ್ಣಿಗೇರಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.