ಅಭಿವೃದ್ಧಿ ಹರಿಕಾರ ದೂರದೃಷ್ಟಿಯ ನೇತಾರ ಮುನಿಯಪ್ಪ

KannadaprabhaNewsNetwork |  
Published : Jan 19, 2026, 02:00 AM IST
ವಿಜೆಪಿ ೧೮ವಿಜಯಪುರ ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಮತ್ತು ಕಾಂಗ್ರೆಸ್ ಮುಖಂಡರು | Kannada Prabha

ಸಾರಾಂಶ

ವಿಜಯಪುರ: ಪಟ್ಟಣದಲ್ಲಿ ೫೦ ಕೋಟಿ ರು. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಅಭಿವೃದ್ಧಿಯ ಹರಿಕಾರ ದೂರ ದೃಷ್ಟಿಯ ನೇತಾರ ದೇವನಹಳ್ಳಿ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಹೇಳಿದರು

ವಿಜಯಪುರ: ಪಟ್ಟಣದಲ್ಲಿ ೫೦ ಕೋಟಿ ರು. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಅಭಿವೃದ್ಧಿಯ ಹರಿಕಾರ ದೂರ ದೃಷ್ಟಿಯ ನೇತಾರ ದೇವನಹಳ್ಳಿ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಸಂಚರಿಸುವ ರಸ್ತೆಯಲ್ಲಿರುವ ಕೆರೆಯ ಏರಿಯ ಅಗಲೀಕರಣ ಕಾಮಗಾರಿ ಆರಂಭವಾಗಿದೆ. ಎರಡೂ ಕಡೆಗಳಲ್ಲಿ ಮೋರಿಗಳ ನಿರ್ಮಾಣಕ್ಕೆ ೧೧.೩೦ ಕೋಟಿಗೆ ಟೆಂಡರ್ ಆಗಿದೆ. ಮೂರು ವಾರಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಚಂದೇನಹಳ್ಳಿಯಿಂದ ಪುರದ ಮಾರ್ಗವಾಗಿ ಚಿಕ್ಕನಹಳ್ಳಿಯವರೆಗೂ ಹಾಗೂ ಹೊಲೇರಹಳ್ಳಿಯಿಂದ ವೆಂಕಟಗಿರಿಕೋಟೆಯವರೆಗೆ ೯.೫೦ ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದೆ. ಪಟ್ಟಣದ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಲು ೨ ಕೋಟಿ ವೆಚ್ಚದಲ್ಲಿ ಕ್ರೀಯಾಯೋಜನೆ ತಯಾರಾಗಿದೆ. ದೇವನಹಳ್ಳಿ ರಸ್ತೆಯ ಟೋಲ್ ಗೇಟ್‌ನಿಂದ ಶಿಡ್ಲಘಟ್ಟ ಕ್ರಾಸ್‌ವರೆಗೆ, ಸೌಮ್ಯಚನ್ನಕೇಶವಸ್ವಾಮಿ ದೇವಾಲಯದ ರಸ್ತೆ, ಮಂಡಿಬೆಲೆ ರಸ್ತೆಗಳ ಡಾಂಬರೀಕರಣಕ್ಕೆ ಟೆಂಡರ್ ಮಾಡಲಾಗಿದೆ ಎಂದು ಹೇಳಿದರು.

ಶಿವಗಣೇಶ ಸರ್ಕಲ್‌ನಿಂದ ಕೆಇಬಿವರೆಗೂ ೫ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕೆಇಬಿಯಿಂದ ಕೆರೆಕೋಡಿವರೆಗೂ ರಸ್ತೆ ಅಭಿವೃದ್ಧಿ ನಡೆಯಲಿದೆ. ಕೋಲಾರ ಮುಖ್ಯರಸ್ತೆಯಲ್ಲಿ ಜೆ.ವೆಂಕಟಾಪುರದವರೆಗೂ ಸುಮಾರು ೧೧ ಕೋಟಿ ವೆಚ್ಚದಲ್ಲಿ ಕಾಮಗಾರಿ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ. ಪಟ್ಟಣದ ದೊಡ್ಡಮೋರಿಯಿಂದ ನಾಗರಬಾವಿಯವರೆಗೂ ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಾಗಿದೆ. ಒಟ್ಟು ೫೦ ಕೋಟಿ ರೂಪಾಯಿಗಳನ್ನು ರಸ್ತೆಗಳ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ. ಪಟ್ಟಣದ ಕಂಬ ಮತ್ತು ಕಂಬಿ ಮುಕ್ತವಾಗಿ ಮಾಡಲು ಈಗಾಗಲೇ ಕಂಬಗಳ ತೆರವಿಗಾಗಿ ಸರ್ವೆ ಕಾರ್ಯ ಆರಂಭವಾಗಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಮುಂದಿನ ದಿನಗಳಲ್ಲಿ ಶಿವಗಣೇಶ ಸರ್ಕಲ್‌ನಿಂದ- ದೇವನಹಳ್ಳಿ ಮುಖ್ಯರಸ್ತೆಯನ್ನು ನಾಲ್ಕು ಪಥದ ರಸ್ತೆಗಳನ್ನಾಗಿ ಮಾಡುವಂತೆ ಬೇಡಿಕೆ ಸಲ್ಲಿಸಿದ್ದೇವೆ. ವಿಜಯಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ನಿರಂತರವಾಗಿ ಮುಖ್ಯಮಂತ್ರಿಗಳ ಮೇಲೆ ಸಚಿವ ಕೆ.ಹೆಚ್.ಮುನಿಯಪ್ಪ ಒತ್ತಡ ಹೇರುತ್ತಿದ್ದಾರೆ ಎಂದರು.

ಈ ವೇಳೆ ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಹಿರಿಯ ಮುಖಂಡ ಸಂಪತ್ ಕುಮಾರ್, ಪುರಸಭಾ ಸದಸ್ಯರಾದ ಎಂ.ರಾಜಣ್ಣ, ಎಂ.ನಾರಾಯಣಸ್ವಾಮಿ, ಸೈಯದ್ ಎಕ್ಬಾಲ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಎಸ್.ಮಂಜುನಾಥ್, ಅಲ್ಪಸಂಖ್ಯಾತ ವಿಜಯಪುರ ಟೌನ್ ಅಧ್ಯಕ್ಷ ಅಪ್ಜಲ್ ಪಾಷ, ಎಸ್ಸಿ ಘಟಕದ ಅಧ್ಯಕ್ಷ ವೇಣುಗೋಪಾಲ್, ಮುನಿಕೃಷ್ಣಪ್ಪ, ಜಗದೀಶ್, ಹರೀಶ್, ಚಾಂದ್ ಪಾಷ, ವಿ.ಹರೀಶ್, ರಾಜಬಾಬು, ಮಂಜುನಾಥ್, ನಂಜುಂಡಪ್ಪ, ಎ.ಆರ್. ಆಜಾಮ್ ಪಾಷ, ನಯಾಜ್ ಪಾಷ, ಮುನಿವೆಂಕಟಪ್ಪ, ಗಿರೀಶ್, ರಮೇಶ್, ಮುನ್ನಾ, ವೆಂಕಟರಮಣ, ಜಬಿವುಲ್ಲಾ, ಯಾಸಿನ್ ಮೌಲ, ಕೆ.ಎಚ್.ಗೋಪಾಲ್ ಇತರರಿದ್ದರು.

(ಫೋಟೊ ಕ್ಯಾಫ್ಷನ್‌)

ವಿಜಯಪುರದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಹಿರಿಯ ಮುಖಂಡ ಸಂಪತ್ ಕುಮಾರ್, ಪುರಸಭಾ ಸದಸ್ಯರಾದ ಎಂ.ರಾಜಣ್ಣ, ಎಂ.ನಾರಾಯಣಸ್ವಾಮಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ
ಇ-ಆಫೀಸ್ ಬಳಕೆ ರಾಜ್ಯದಲ್ಲೇ ಕಲಬುರಗಿ ನಂಬರ್-1