ಕನ್ನಡಪ್ರಭವಾರ್ತೆ ಹೊಸದುರ್ಗ
ಕೊಲೆ ಆರೋಪದ ಮೇಲೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಕಾರು ಚಾಲಕ ಸೇರಿ ನಾಲ್ವರನ್ನು ಹೊಸದುರ್ಗ ಪೊಲೀಸರು ಬಂದಿಸಿರುವ ಘಟನೆ ಬುಧವಾರ ನಡೆದಿದೆ.ಬಂಧಿತರನ್ನು ಕೊಲೆಯಾದ ವ್ಯಕ್ತಿಯ ಹೆಂಡತಿ ಗಾಯತ್ರಿ (30) , ಕಾರು ಚಾಲಕ ಕಬ್ಬಳ ಗ್ರಾಮದ ಯಶವಂತ್ (28), ಚಿಕ್ಕಮಗಳೂರು ಜಿಲೆಯ ಅಜ್ಜಂಪುರ ತಾಲೂಕು ಗಡೀಹಳ್ಳಿ ಗ್ರಾಮದ ಲೋಹಿತ್ ( 30), ಡಿ.ಮಲ್ಲಾಪುರ ಗ್ರಾಮದ ವೀರಭದ್ರಪ್ಪ (24) ಎಂದು ಗುರುತಿಸಲಾಗಿದೆ.
*ಘಟನೆ ವಿವರ: ಜಾನಕಲ್ ಗ್ರಾಮದ ಪ್ರಸನ್ನ (45) ಕಳೆದ ಮಾ.17ರಂದು ನಾಪತ್ತೆಯಾಗಿದ್ದ, ಈ ಸಂಬಂದ ಹೊಸದುರ್ಗ ಠಾಣೆಯಲ್ಲಿ ಮಾ.21ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. ಮಾ.23ರಂದು ಲಿಂಗದಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು. ಅಂದು ಲಿಂಗದಹಳ್ಳಿ ಪೋಲೀಸರು ಅಪರಿಚಿತ ವ್ಯಕ್ತಿಯ ಅನುಮಾನಸ್ಪದ ಸಾವು ಎಂದು ಕೇಸು ದಾಖಲಿಸಿಕೊಂಡಿದ್ದರು. ಮೃತನ ಬಗ್ಗೆ ಮಾಹಿತಿ ದೊರೆಯದ ಹಿನ್ನಲೆಯಲ್ಲಿ ಪೊಲೀಸರೇ ಅಂತ್ಯಕ್ರಿಯೆ ಮಾಡಿದ್ದರು ಎನ್ನಲಾಗಿದೆ.ಮಾ.23 ರಂದು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಶವದ ಮೇಲಿನ ಬಟ್ಟೆಗಳನ್ನು ನಾಪತ್ತೆ ಪ್ರಕರಣದ ದೂರುದಾರರಾದ ಪ್ರಸನ್ನ ಅವರ ತಂದೆ ಷಣ್ಮುಖಪ್ಪ ಅವರಿಗೆ ತೋರಿಸಿದಾಗ ಇದು ನನ್ನ ಮಗನ ಬಟ್ಟೆಗಳೇ ಎಂದು ಗುರುತಿಸಿದ್ದಾರೆ ಆಗ ಶವದ ಸ್ಥಿತಿಯ ಫೋಟೋ ಗಮನಿಸಿ ನನ್ನ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮತ್ತೆ ದೂರು ನೀಡಿದ್ದಾರೆ, ಈ ದೂರಿನ ಅನ್ವಯ ತನಿಖೆ ಕೈಗೊಂಡ ಹೊಸದುರ್ಗ ಪೊಲೀಸರು ಮೃತನ ಹೆಂಡಿತ ಹಾಗೂ ಇತರೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಿಗೆ ಬಂದಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ತನ್ನ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತ ಪಡಿಸಲಾಗಿದೆ. ಈ ಸಂಬಂದ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೊಸದುರ್ಗದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಗೂಳೀಹಟ್ಟಿ ಶೇಖರ್
ಹೊಸದುರ್ಗದಲ್ಲಿ ಇತ್ತೀಚಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಕೊಲೆ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಮಾಜಿ ಶಾಸಕ ಗೂಳೀಹಟ್ಟಿ ಶೇಖರ್ ಅಸಮಾದಾನ ವ್ಯಕ್ತ ಪಡಿಸಿದ್ದಾರೆ. ಜಾನಕಲ್ ಗ್ರಾಮದ ಪ್ರಸನ್ನ ಕೊಲೆ ಪ್ರಕರಣ ಸಂಬಂದ ಶಾಸಕರ ಕಾರು ಚಾಲಕನ ಬಂದನ ಕುರಿತಂತೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಮಾಜಿ ಶಾಸಕ ಗೂಳೀಹಟ್ಟಿ ಶೇಖರ್, ಘಟನೆ ನಡೆದು ಮೂರ್ನಾಲ್ಕು ತಿಂಗಳಾಗಿದೆ. ಲಿಂಗದಹಳ್ಳಿ ಹಾಗೂ ಹೊಸದುರ್ಗ ಠಾಣೆಗಳು ಅಕ್ಕಪಕ್ಕದ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಬರುತ್ತಿದ್ದು ನಾಪತ್ತೆ ಪ್ರಕರಣ ಹಾಗೂ ಅನಾಮದೇಯ ವ್ಯಕ್ತಿಗಳ ಶವ ಪತ್ತೆಯಾದಾಗ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಈಗಿದ್ದರೂ ಈ ಪ್ರಕರಣದ ಘಟನೆಗಳನ್ನು ಗಮನಿಸಿದರೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಹೊಸದುರ್ಗ ಪೊಲೀಸರು ನಾಪತ್ತೆ ಕೇಸು ದಾಖಲಿಸಿಕೊಂಡು ಸುಮ್ಮನಾಗಿದ್ದರು ಆದರೆ ಲಿಂಗದಹಳ್ಳಿ ಪೊಲೀಸರ ಶ್ರಮದಿಂದ ಈ ಪ್ರಕರಣ ಹೊರಬಿದ್ದದೆ ಎನ್ನಲಾಗುತ್ತಿದೆ. ಅನ್ಯಾಯವಾದವರಿಗೆ ಪೊಲೀಸರು ನ್ಯಾಯ ದೊರಕಿಸಿಕೊಡಬೇಕು ಅದನ್ನು ಬಿಟ್ಟು ಅಪರಾದಿಗಳನ್ನು ರಕ್ಷಿಸುವ ಕೆಲಸ ಮಾಡಬಾರದು ಎಂದರು. ತಾಲೂಕಿನಲ್ಲಿ ಕೆಲ ಪುಂಡರ ಹಟ್ಟಹಾಸ ಹೆಚ್ಚಾಗಿದೆ ಇತ್ತೀಚಿಗೆ ಶಾಸಕರ ಬೆಂಬಲಿಗನೊರ್ವ ಮಹಿಳೆಯೊರ್ವಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆತನ ಮೇಲೆ ಯಾವುದೇ ಕ್ರಮ ಆಗಿಲ್ಲ ಅಲ್ಲದೆ ಈಗ ಶಾಸಕರ ಕಾರು ಚಾಲಕನೇ ಕೊಲೆ ಆರೋಪದಲ್ಲಿ ಬಂಧಿತನಾಗಿದ್ದಾನೆ. ಪುಂಡರು ಮಾಡುವ ಪಂಡಾಟಗಳಿಗೆ ಯಾರೇ ಆಗಲೀ ಪ್ರೋತ್ಸಾಹಿಸಬಾರದು ಎಂದು ಅವರು ತಿಳಿಸಿದರು.(ಪೋಟೋ ಇದೆ ಸರ್).