ಮಸೀದಿ ಮುಂದೆಯೇ ಯುವಕನ ಕೊಲೆ ನೋವಿನ ಸಂಗತಿ

KannadaprabhaNewsNetwork |  
Published : Aug 11, 2025, 12:33 AM IST
10ಕೆಪಿಎಲ್8:ಕೊಪ್ಪಳ ನಗರದಲ್ಲಿ ಇತ್ತಿಚ್ಚೇಗೆ ಕೊಲೆಯಾದ ಯುವಕ ಗವಿಸಿದ್ದಪ್ಪ ಮನೆಗೆ ಶಾಸಕ ಯತ್ನಾಳ ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ  ಭೇಟಿ ನೀಡಿ ಸಾಂತ್ವಾನ ಹೇಳಿದರು. | Kannada Prabha

ಸಾರಾಂಶ

ಹಿಂದೂ ಎನ್ನುವ ಕಾರಣಕ್ಕೆ ಹುಡುಕಿ ಹೊಡೆದಿದ್ದಾರೆ. ಕೊಲೆ ಮಾಡಿದ ವ್ಯಕ್ತಿ ರೀಲ್ಸ್‌ನಲ್ಲಿ ಗಾಂಜಾ ಹೊಗೆ ಬಿಟ್ಟಿರುವುದು ಗೊತ್ತಾಗಿದೆ

ಕೊಪ್ಪಳ: ಹಿಂದೂ ಯುವಕನ ಕೊಲೆ ಮಸೀದಿ ಮುಂದೆ ಆದರೂ ಮಸೀದಿಯಲ್ಲಿ ನಮಾಜ್‌ ಮಾಡುತ್ತಿದ್ದರು ಎನ್ನುವುದು ನೋವಿನ ಸಂಗತಿ. ಹಿಂದೂ ಎಂಬ ಕಾರಣಕ್ಕೆ ಹೀಗೆ ಹೊಡೆದಿರುವುದು ದುಃಖದ ಸಂಗತಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಕೊಲೆಯಾದ ಯುವಕ ಗವಿಸಿದ್ದಪ್ಪ ಮನೆಗೆ ಭೇಟಿ ನೀಡಿದ ಅವರು, ಕೊಲೆಯಾಗಿರುವ ಹಿಂದೂ ಯುವಕನಿಗೆ ಬಸನಗೌಡ ಯತ್ನಾಳ ಬಗ್ಗೆ ಅಭಿಮಾನ ಇತ್ತು. ಹಿಂದೂ ಎಂಬ ವಿಚಾರಕ್ಕೋಸ್ಕರ ಅವನನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರು, ಪ್ರೀತಿ ಮಾಡುವ ನಾಟಕ ಮಾಡಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಮಸೀದಿಯ‌ ಮುಂದೆ ಯಾಕೆ ಕೊಂದರು?

ಮಸೀದಿ ಮುಂದೆಯೇ ಹಿಂದೂ ಯುವಕನನ್ನು ಯಾಕೆ ಕೊಂದರು? ಪ್ರೀತಿಸಿದ ಯುವತಿಯನ್ನು ಕೊಲ್ಲಲಿಲ್ಲ ಎಂದು ಪ್ರಶ್ನಿಸಿದ ಅವರು, ಕೊಲೆ, ಪ್ರೀತಿ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಹಿಂದೂ ಎನ್ನುವ ಕಾರಣಕ್ಕೆ ಹುಡುಕಿ ಹೊಡೆದಿದ್ದಾರೆ. ಕೊಲೆ ಮಾಡಿದ ವ್ಯಕ್ತಿ ರೀಲ್ಸ್‌ನಲ್ಲಿ ಗಾಂಜಾ ಹೊಗೆ ಬಿಟ್ಟಿರುವುದು ಗೊತ್ತಾಗಿದೆ ಎಂದರು.

ಕೊಲೆಯಾದ ಹಿಂದೂ ಯುವಕನ ಕುಟುಂಬಕ್ಕೆ ಸರ್ಕಾರ ನೌಕರಿ, ₹50 ಲಕ್ಷ ಪರಿಹಾರ ನೀಡಬೇಕು. ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಅಧಿಕಾರಿಗೆ ಸರ್ಕಾರ ₹೨೫ ಲಕ್ಷ ಪರಿಹಾರ ಕೊಟ್ಟಿದೆ. ಈಗ ಮುಸ್ಲಿಂ ಯುವಕ, ಯುವತಿ ಸೇರಿ ಹಿಂದೂ ಯುವಕನನ್ನು ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.

ಮಸೀದಿ ಮುಂದೆ ಲಾಂಗ್ ಹಿಡಿದು ಹಿಂದೂ ಯುವಕನ ಕೊಲೆ ಮಾಡಲಾಗಿದೆ ಎಂದು ಹೆತ್ತ ತಾಯಿಯೇ ಹೇಳುತ್ತಿದ್ದಾಳೆ. ಪ್ರೀತಿ ಮಾಡಿದ ಮುಸ್ಲಿಂ ಯುವತಿಯನ್ನು ಏಕೆ ಕೊಲೆ ಮಾಡಲಿಲ್ಲ? ಹಿಂದೂ ಯುವಕ ಮಾತ್ರ ಕೊಲೆಯಾಗುತ್ತಾನೆ ಎಂದರೆ ಹೇಗೆ? ಎಂದು ಆ ಹೆತ್ತವರು ನೋವಿನಿಂದ ಹೇಳಿದ್ದಾರೆ ಎಂದರು.

PREV

Recommended Stories

ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ: ಇಂದು ಮತ್ತೆ ಉತ್ಖನನ?