ಹಳೆ ದ್ವೇಷಕ್ಕೆ ಕೊಲೆ: 12 ಮಂದಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Apr 10, 2025, 01:00 AM IST
ಕೆ ಕೆ ಪಿ ಸುದ್ದಿ 03 :  ಹನ್ನೆರಡು ಮಂದಿಗೆ ಜೀವಾವಧಿ ಶಿಕ್ಷೆ.  | Kannada Prabha

ಸಾರಾಂಶ

ಈ ಕೊಲೆ ಪ್ರಕರಣದಲ್ಲಿ ಪೊಲೀಸರು 17 ಮಂದಿ ವಿರುದ್ದ ಆರೋಪ ಪಟ್ಟಿ ದಾಖಲಿಸಿದ್ದರು. 5 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಕನಕಪುರ

ಹುಣಸನಹಳ್ಳಿ ಬಾರ್ ಮುಂದೆ ಹಾಡುಗಲೆ ಲಾಂಚು ಮಚ್ಚುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ ಪ್ರಕರಣದಲ್ಲಿ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಎನ್. ಕುಮಾರ್ ಆದೇಶ ನೀಡಿದ್ದಾರೆ.

ಮಾದೇಶ್, ಶಿವಕುಮಾರ್, ಲೋಕೇಶ್, ಕಾರ್ತಿಕ್, ವೇಣುಕುಮಾರ್, ದಿಲೀಪ್‌ರಾಜ್, ರಾಮಚಂದ್ರ, ಗುರಪ್ಪ, ರಘು, ಶರಥ, ಹರೀಶ್, ಸುರೇಶ್ ಸೇರಿ 12 ಮಂದಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಆಪಾಧಿತರು ಎಂದು ಗುರುತಿಸಲಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾದ 12 ಮಂದಿ ಆಪಾದಿತರಿಗೆ ತಲಾ ಒಂದು ಲಕ್ಷ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.

ಈ ಕೊಲೆ ಪ್ರಕರಣದಲ್ಲಿ ಪೊಲೀಸರು 17 ಮಂದಿ ವಿರುದ್ದ ಆರೋಪ ಪಟ್ಟಿ ದಾಖಲಿಸಿದ್ದರು. 5 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈ 5 ಜನರ ವಿಚಾರಣೆ ತಡವಾಗಿದ್ದು, ತೀರ್ಪು ಬಾಕಿ ಇದೆ. ತಲೆಮರೆಸಿಕೊಂಡಿದ್ದ ಆರೋಪಿಗಳಾದ ಬಂಡೆ ಮಹೇಶ್, ಮಮತ ಮುನಿಸ್ವಾಮಿ, ವೆಂಕಟೇಶ್, ವಿನಯಪ್ರಸಾದ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬರು ಮೃತಪಟ್ಟಿದ್ದು, ಇನ್ನುಳಿದವರನ್ನು ಹಿಡಿದು ತಂದಿರುವ ಪೋಲಿಸರು ಇವರ ವಿಚಾರಣೆ ನಡೆಸುತ್ತಿದ್ದಾರೆ ಓಟ್ಟು 16 ಮಂದಿ ಪೈಕಿ 12 ಮಂದಿ ಜೈಲುವಾಸ ಉಳಿದ 4 ಮಂದಿ ತೀರ್ಪು ಬಾಕಿ ಇದೆ.

ಘಟನೆ ವಿವರ:

ಹಳೆ ದ್ವೇಷಕ್ಕೆ ತಾಲೂಕಿನ ಕೋಡಿಹಳ್ಳಿ ಹೋಬಳಿಯ ತಮಿಳುನಾಡು ಗಡಿ ಹುಣಸನಹಳ್ಳಿ ಗ್ರಾಮ ದ ಕಿಟ್ಟಿ ಬಾರ್ ಅಂಡ್ ರೇಸ್ಟೋರೆಂಟ್ ಬಳಿ 28-08-21 ರಂದು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆ, ಅಂಚಟ್ಟಿ ತಾಲೂಕಿನ ಹುಲಿಬಂಡೆ ಗ್ರಾಮದ ಶಂಕರ್ ನನ್ನು ಲಾಂಗ್ ಮಚ್ಚುಗಳಿಂದ ಹಾಡುಹಗಲೇ ಕೊಚ್ಚಿ ಕೊಲೆ ಮಾಡಿದ್ದರು.

ಕೊಲೆ ಮಾಡಿದ ಆರೋಪಿಗಳು ಹುಣಸಹಳ್ಳಿ ಗ್ರಾಮದಿಂದ ಕನಕಪುರಕ್ಕೆ ಬರುವ ಮಾರ್ಗದ ಕುರುಪೇಟೆ ಬಳಿ ಪೋಲಿಸರ ಬಲೆಗೆ ಬಿದ್ದಿದ್ದರು. ಇಲ್ಲಿಂದ ಆರಂಭವಾದ ಈ ಪ್ರಕರಣದ ತನಿಖೆ ಉಸ್ತುವಾರಿವಸಿದ್ದ ವೃತ್ತ ನಿರೀಕ್ಷಕ ಟಿಟಿ ಕೃಷ್ಣ ಅವರು ಕೊಲೆಗೆ ಸಹಕಾರ ನೀಡಿದ ಒಳಸಂಚು ರೂಪಿಸಿದ ಒಟ್ಟು 17 ಮಂದಿ ವಿರುದ್ದ ಆರೋಪಪಟ್ಟಿ (ಚಾರ್ಜ್ ಸೀಟ್) ಸಲ್ಲಿಕೆ ಮಾಡಿದ್ದರು.

ಕನಕಪುರ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ಸರಕಾರಿ ಅಭಿಯೋಜಕರಾದ ಎಂ.ಕೆ. ರೂಪಲಕ್ಷ್ಮಿ ವಾದ ಮಂಡಿಸಿದ್ದರು. ಆರೋಪಿಗಳ ಪರವಾಗಿ ಬೆಂಗಳೂರಿನ ಹೆಸರಾಂತ ವಕೀಲ ಬಾಲನ್ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಕೆ ಕೆ ಪಿ ಸುದ್ದಿ 03 : ಹನ್ನೆರಡು ಮಂದಿಗೆ ಜೀವಾವಧಿ ಶಿಕ್ಷೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌