ಮುರುಘೇಂದ್ರ ಶ್ರೀಗಳ ಪುಣ್ಯಸ್ಮರಣೋತ್ಸವ, ಸಾಧಕರಿಗೆ ಸನ್ಮಾನ

KannadaprabhaNewsNetwork |  
Published : Nov 22, 2025, 03:15 AM IST
ಹುನಗುಂದ ಪಟ್ಟಣದ ಗಚ್ಚಿನಮಠದ ಅಮರೇಶ್ವರ ದೇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಾಂತಯ್ಯ ಗಚ್ಚಿನಮಠ,  ಶೇಖರಪ್ಪ ಬಾದವಾಡಗಿ ಇದ್ದರು. | Kannada Prabha

ಸಾರಾಂಶ

ಹುನಗುಂದ: ಪಟ್ಟಣದ ಶ್ರೀ ಗಚ್ಚಿನಮಠದಲ್ಲಿ ಮುರುಘೇಂದ್ರ ಮಹಾಸ್ವಾಮಿಗಳ 60ನೇ ಪುಣ್ಯಸ್ಮರಣೋತ್ಸವ, ವಿಶೇಷ ಉಪನ್ಯಾಸ, ಸಾಧಕರಿಗೆ ಸನ್ಮಾನ ಮತ್ತು ಅಯ್ಯಾಚಾರ ,ಲಿಂಗದೀಕ್ಷಾ ಹಾಗೂ ಮಹಾಶಿವಶರಣೆ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಚರಿತ್ರೆಯ ಕಾರ್ಯಕ್ರಮ ನ.24 ರಿಂದ ಡಿ.4 ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ನಡೆಯಲಿದೆ.

ಹುನಗುಂದ: ಪಟ್ಟಣದ ಶ್ರೀ ಗಚ್ಚಿನಮಠದಲ್ಲಿ ಮುರುಘೇಂದ್ರ ಮಹಾಸ್ವಾಮಿಗಳ 60ನೇ ಪುಣ್ಯಸ್ಮರಣೋತ್ಸವ, ವಿಶೇಷ ಉಪನ್ಯಾಸ, ಸಾಧಕರಿಗೆ ಸನ್ಮಾನ ಮತ್ತು ಅಯ್ಯಾಚಾರ ,ಲಿಂಗದೀಕ್ಷಾ ಹಾಗೂ ಮಹಾಶಿವಶರಣೆ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಚರಿತ್ರೆಯ ಕಾರ್ಯಕ್ರಮ ನ.24 ರಿಂದ ಡಿ.4 ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ನಡೆಯಲಿದೆ.

ಪಟ್ಟಣದ ಗಚ್ಚಿನಮಠದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರೇಶ್ವರ ದೇವರು, ಅಮೀನಗಡದ ಗಚ್ಚಿನಮಠದ ಪ್ರಭುಶಂಕರೇಶ್ವರ ಶಂಕರರಾಜೇಂದ್ರ ಸ್ವಾಮೀಜಿ, ಕನಕಗಿರಿಯ ಸುವರ್ಣಗಿರಿ ಸಂಸ್ಥಾನಮಠ ಡಾ.ಚನ್ನಮಲ್ಲ ಸ್ವಾಮೀಜಿ, ಬಿಲ್ ಕೆರೂರನ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ನೆರವೇರಿಸುವರು. ಕರ್ನಾಟಕ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಎಸ್.ಆರ್. ನವಲಿಹಿರೇಮಠ, ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಂಗಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಜಾತ್ರಾ ಸಮೀತಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರವಚನಕಾರ ಗಣೇಶ ಶಾಸ್ತ್ರಿಗಳು, ಹಾರ್ಮೋನಿಯಂ ಹನುಮಂತಕುಮಾರ ಮೇಟಿ, ತಬಲಾ ವಾದಕ ಸಿದ್ದೇಶಕುಮಾರ ಲಿಂಗನಬಂಡಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಡಿ.4ರಂದು ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಇಲಕಲ್ಲನ ಚಿತ್ತರಗಿ ಸಂಸ್ಥಾನ ಪೀಠದಗುರುಮಹಾಂತ ಸ್ವಾಮೀಜಿ, ಕಮತಗಿಯ ಹೊಳೆಹುಚ್ಚೇಶ್ವರ ಸಂಸ್ಥಾನ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಮಹಾಂತಯ್ಯ ಗಚ್ಚಿನಮಠ ಮಾತನಾಡಿ, ಈ ವರ್ಷ 10 ದಿನಗಳು ನಿರಂತರ ಕಾರ್ಯಕ್ರಮ ನಡೆಯಲಿದ್ದು, ಆದ್ದರಿಂದ ಮಠದ ಸದ್ವಕ್ತರು ಹಾಗೂ ನಗರದ ಎಲ್ಲ ಜನರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೊಳಿಸಬೇಕೆಂದರು. ಶೇಖರಪ್ಪ ಬಾದವಾಡಗಿ, ಸಾಂತಪ್ಪ ಹೊಸಮನಿ, ಅರುಣೋದಯ ದುದ್ಗಿ, ಮಹೇಶ ಬೆಳ್ಳಿಹಾಳ, ಬಿ.ಸಿ. ಅಂಗಡಿ, ಗಿರಿಮಲ್ಲಪ್ಪ ಹಳಪೇಟಿ, ಶಿವಪ್ಪ ಯಡಹಳ್ಳಿ, ಮಹಾಂತೇಶ ತೆಗ್ಗಿನಮಠ, ಸುರೇಶ ಹಳಪೇಟಿ ಸೇರಿದಂತೆ ಇತರರು ಇದ್ದರು.

PREV

Recommended Stories

ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ಸಕಲ ವ್ಯವಸ್ಥೆ
ಸಿಎಸ್‌ಆರ್ ₹200 ಕೋಟಿ ಅನುದಾನಡಿ 211 ಕೊಠಡಿ ನಿರ್ಮಾಣ