ಕನ್ನಡಪ್ರಭ ವಾರ್ತೆ ಶಿರಸಿ
ನಂತರ ತಾಪಂ ಇಓ ಚನ್ನಬಸಪ್ಪ ಹಾವಣಗಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಹಿಳೆಯರು ಹಾಗೂ ಯುವಜನರು ಅಣಬೆ ಕೃಷಿಯಂತಹ ಸ್ವಯಂ ಉದ್ಯೋಗಾಧಾರಿತ ತರಬೇತಿಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ದೀಪಕ್ ನಾಯ್ಕ್ ಮಾತನಾಡಿ, ತರಬೇತಿಯಲ್ಲಿ ಅಣಬೆ ಕೃಷಿಯ ಮಹತ್ವ, ಬೆಳೆಯುವ ವಿಧಾನ, ನಿರ್ವಹಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಸಮಗ್ರ ಮಾಹಿತಿ ನೀಡಿದರು.ಸಮಾರೋಪ ಸಮಾರಂಭದಲ್ಲಿ ಸಂಪಖಂಡ ವಲಯದ ಆರ್‌ಎಫ್‌ಓ ಉಷಾ ಕಬ್ಬೆರ್ ತರಬೇತಿ ಪಡೆದವರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಅವರು, ರೋಟರಿ ಕ್ಲಬ್ ಶಿರಸಿ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಜನರಲ್ಲಿ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಶಿರಸಿಯ ಪದಾಧಿಕಾರಿಗಳಾದ ರೋಟರಿ ಕಾರ್ಯದರ್ಶಿ ಹರೀಶ್ ಹೆಗಡೆ, ಖಜಾಂಚಿ ವಿನಾಯಕ ಶೆಟ್ , ಕಾರ್ಯನಿರ್ವಾಹಕ ಕಾರ್ಯದರ್ಶಿ ಸತೀಶ್ ಭಟ್, ಕಿರಣ್ ಭಟ್, ಜಯಮಾಲಾ ನಾಯ್ಕ್, ಶಿಲ್ಪಾ ನಾಯ್ಕ್, ಜಾನ್ಮನೆ ಪಿಡಿಓ ಮಮತಾ ನಾಯ್ಕ್, ಕೆಡಿಪಿ ಸದಸ್ಯ ಅಫ್ರಿದಿ, ಸಂದೀಪ್ ನಾಯ್ಕ್, ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ವಿ.ಎಂ. ಹೆಗಡೆ ಹಣಗಾರ್, ಪಂಚಮುಖಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ನೇತ್ರಾವತಿ ಗೌಡ, ಪದಾಧಿಕಾರಿಗಳು, ರೋಟರಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.