ನ. 1ರಿಂದ ಕವೀಸಂದಿಂದ ಸಂಗೀತ, ನಾಟಕ, ಸನ್ಮಾನ

KannadaprabhaNewsNetwork |  
Published : Oct 31, 2025, 02:30 AM IST
ವವವ | Kannada Prabha

ಸಾರಾಂಶ

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ನವೆಂಬರ್‌ನಲ್ಲಿ ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದಿಂದ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನ. 1ರಿಂದ 30ರ ವರೆಗೆ ಒಂದು ತಿಂಗಳ ಕಾಲ ಸಂಗೀತ, ನೃತ್ಯ, ನಾಟಕ, ಸಾಧಕರಿಗೆ ಸನ್ಮಾನ, ಧರೆಗೆ ದೊಡ್ಡವರು ಕಾರ್ಯಕ್ರಮಗಳನ್ನು ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ನ. 1ರ ಬೆಳಗ್ಗೆ 9ಕ್ಕೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ, ನಂತರ ನಾಡೋಜ ಡಾ. ಪಾಪು ಭವನದಲ್ಲಿ ತಿಂಗಳ ಕಾರ್ಯಕ್ರಮ ಚಾಲನೆಗೊಳ್ಳಲಿದೆ. ತದನಂತರ ಸಂಘದ ಗೌರವ ಉಪಾಧ್ಯಕ್ಷರಾಗಿ ನೇಮಕೊಂಡ ಡಾ. ಅಜಿತ ಪ್ರಸಾದ, ಕೆ.ಬಿ. ನಾವಲಗಿಮಠ, ಡಾ. ಪಾಂಡುರಂಗ ಪಾಟೀಲ, ಡಾ. ತಮಿಳ ಸೆಲ್ವಿ, ಶ್ರೀನಿವಾಸ ವಾಡಪ್ಪಿ ಅವರನ್ನು ಸನ್ಮಾನಿಸಲಾಗುವುದು. ಡಾ. ವೀರಣ್ಣ ರಾಜೂರ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ನ. 1ರಂದು ಧರೆಗೆ ದೊಡ್ಡವರು ಕಾರ್ಯಕ್ರಮವನ್ನು ಚಿಂತಕ ಪ್ರೊ. ಗಣೇಶ ದೇವಿ ಉದ್ಘಾಟಿಸುವರು. ನ. 1ರಿಂದ 20ರ ವರೆಗೆ ನಿತ್ಯವೂ ಸಂಜೆ 5.30ಕ್ಕೆ ಸಂಗೀತ, ಜನಪದ ಮತ್ತು ನೃತ್ಯ ಹೀಗೆ 20 ದಿನಗಳ ಕಾಲ ಒಂದೊಂದು ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ 15 ಜನ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಸಂಘದ ಕಾರ್ಯಕ್ರಮಗಳ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಸಂಘದ ಸಹಕಾರದಿಂದ ಗದಗ, ಹಾವೇರಿ, ಧಾರವಾಡ ಮತ್ತು ಕಾರವಾರ ಜಿಲ್ಲೆಗಳಲ್ಲಿ ಹೆಚ್ಚೇವು ಕನ್ನಡದ ದೀಪ ಕಾರ್ಯಕ್ರಮ ನ. 10ರಂದು ''''''''ಮಕ್ಕಳ ರಾಜ್ಯೋತ್ಸವ'''''''' ಸಹ ಹಮ್ಮಿಕೊಂಡಿದ್ದಾಗಿ ತಿಳಿಸಿದರು.

ವಿವಿಧ ಕ್ಷೇತ್ರಗಳ 15 ಜನ ಸಾಧಕರ ಜತೆ ನಿತ್ಯ 300 ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಸಂವಾದ ನಡೆಯಲಿದೆ. ಇನ್ನು, ನ. 21ರಿಂದ 30ರ ವರೆಗೆ ನಿತ್ಯ ಸಂಜೆ 5.30ಕ್ಕೆ ರಂಗ ಚಿಂತನೆ, ಕಲಾ ಸನ್ಮಾನ ಮತ್ತು ನಾಟಕ ಪ್ರದರ್ಶನಗಳು ಜರುಗಲಿವೆ. ನಾಟಕೋತ್ಸವದಲ್ಲಿ ಎರಡು ಮಕ್ಕಳ ನಾಟಕ ಸೇರಿ ಒಟ್ಟು 11 ನಾಟಕಗಳು ಪ್ರದರ್ಶನಗೊಳ್ಳಲಿವೆ. ಒಂದು ತಿಂಗಳ ಈ ನಾಡಹಬ್ಬದಲ್ಲಿ ಕನ್ನಡಭಿಮಾನಿಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಡಾ. ಸಂಜೀವ ಕುಲಕರ್ಣಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ಡಾ.ಜಿನದತ್ತ ಹಡಗಲಿ, ಶಂಕರ ಕುಂಬಿ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾತೃ ಸಂಸ್ಥೆಯಾಗಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ರಾಜ್ಯ ಸರ್ಕಾರದಿಂದ ಶಾಶ್ವತ ಅನುದಾನ ಪಡೆದಿಲ್ಲ. ಹೀಗಾಗಿ, ಕಾರ್ಯಚಟುವಟಿಕೆಗಳನ್ನು ರಾಜ್ಯಾದ್ಯಂತ ನಿರಂತರವಾಗಿ ವಿಸ್ತಾರ ಹಾಗೂ ಎಲ್ಲ ಜಿಲ್ಲೆಗಳಲ್ಲೂ ಶಾಖೆಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಇಷ್ಟಾಗಿಯೂ ಧಾರವಾಡ ಜಿಲ್ಲೆ ಹೊರತುಪಡಿಸಿ ರಚನಾತ್ಮಕ ಕನ್ನಡದ ಕಾರ್ಯಗಳನ್ನು ಮಾಡುತ್ತಿದೆ. ಉತ್ತರ ಕರ್ನಾಟಕ ಭಾಗದ ಶಾಸಕರು ಈ ಬಗ್ಗೆ ಕಾಳಜಿ ವಹಿಸದೇ ಇರುವುದು ಸಂಘದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ