ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಸಂಗೀತೋತ್ಸವ

KannadaprabhaNewsNetwork |  
Published : May 14, 2026, 12:30 AM IST
13ಎಚ್ಎಸ್ಎನ್4 : ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿರುವ ದೇವತಾ ಮಂದಿರ.  | Kannada Prabha

ಸಾರಾಂಶ

ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 23ನೇ ವಾರ್ಷಿಕ ಸಂಗೀತೋತ್ಸವವು ಮೇ 20ರಿಂದ ಮೇ 24ರವರೆಗೆ ಗ್ರಾಮದ ರಾಮ ಮಂದಿರದಲ್ಲಿ ನಡೆಯಲಿದೆ ಎಂದು ರುದ್ರ ಪಟ್ಟಣ ಸಂಗೀತೋತ್ಸವ ಟ್ರಸ್ಟ್ ಸಮಿತಿ ಅಧ್ಯಕ್ಷ ಸಂಗೀತ ವಿದ್ವಾಂಸ ಆರ್‌. ಕೆ. ಪದ್ಮನಾಭ್ ತಿಳಿಸಿದ್ದಾರೆ. ಮೇ 22ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಮಹಾರಾಜಪುರಂ ಎಸ್. ಗಣೇಶ್ ವಿಶ್ವನಾಥನ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ. ಬಿ.ಕೆ.ರಘು ಪಿಟೀಲು, ಫಣೀಂದ್ರ ಭಾಸ್ಕರ್ ಮೃದಂಗ, ಬಿ.ಎಸ್.ರಘನಂದನ್ ಘಟ. ಮಧ್ಯಾಹ್ನ 4.15ಕ್ಕೆ ಕಲಾಂಬಿಕಾ ಸಹೋದರಿಯರಿಂದ ಯುಗಳ ಗಾಯನ.

ಕನ್ನಡಪ್ರಭ ವಾರ್ತೆ ರಾಮನಾಥಪುರ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 23ನೇ ವಾರ್ಷಿಕ ಸಂಗೀತೋತ್ಸವವು ಮೇ 20ರಿಂದ ಮೇ 24ರವರೆಗೆ ಗ್ರಾಮದ ರಾಮ ಮಂದಿರದಲ್ಲಿ ನಡೆಯಲಿದೆ ಎಂದು ರುದ್ರ ಪಟ್ಟಣ ಸಂಗೀತೋತ್ಸವ ಟ್ರಸ್ಟ್ ಸಮಿತಿ ಅಧ್ಯಕ್ಷ ಸಂಗೀತ ವಿದ್ವಾಂಸ ಆರ್‌. ಕೆ. ಪದ್ಮನಾಭ್ ತಿಳಿಸಿದ್ದಾರೆ. ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದ ರಾಮ ಮಂದಿರದಲ್ಲಿ ಮೇ 20ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. 10.15ಕ್ಕೆ ರಶ್ಮಿ ಹರಿಪ್ರಸಾದ್ ಅವರಿಂದ ಭರತನಾಟ್ಯ, 10.45ಕ್ಕೆ ಮಾ. ಬಿ.ಕೆ. ಅತ್ರಿಕೌಶಿಕ್ ಅವರಿಂದ ತ್ಯಾಗರಾಜ ವಿರಚಿತ ಪ್ರಹ್ಲಾದ ವಿಜಯ ಗೇಯ ನಾಟಕ ಕುರಿತುಪ್ರವಚನ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1.15 ರವರೆಗೆ ಮಾ. ಬಿ. ಕೆ.ಅದ್ವಿಕ್ ಕೌಶಿಕ್ ವೈಲಿನ್, ನೆಲೆಮನೆಯ ಕು. ಆರ್. ಐಶಾನಿ ಭರತನಾಟ್ಯ, ಧನ್ಯತಾ ವಿ. ಸರ್ತೂರ್ ಗಾಯನ, ಎಂ.ಡಿ. ಅರ್ಜುನ್ ವೈಲಿನ್, ಪವನ್ ಮಾಧವ್ ಮೃದಂಗ, ಮಾ. ಅರ್ಣವ್ ಹರೀಶ್ ಕೌಶಿಕ್ ಗಾಯನ, ಧ್ರುವ ಸಿ. ಲಕ್ಕವಳ್ಳಿ ವೈಲಿನ್, ಮಾ. ಅನ್ಶುಮಾನ್ ಹರೀಶ್ ಕೌಶಿಕ್ ಮೃದಂಗ. ಮಧ್ಯಾಹ್ನ 4.45 ಕ್ಕೆ ಜಿ.ಸೂರ್ಯ ಗಾಯನ, ಪೃಥ್ವಿ ಭಾಸ್ಕರ್ ಪಿಟೀಲು, ಪ್ರಣವ್ ಸುಬ್ರಹ್ಮಣ್ಯ ಮೃದಂಗ. ಸಂಜೆ 6.30 ಕ್ಕೆ ವಿದ್ವಾನ್ ಜಿ. ಯೋಗವಂದನ ಅವರಿಂದ ವೀಣಾವಾದನ, ಅದಿತಿ ಕೃಷ್ಣ ಪ್ರಕಾಶ್ ಪಿಟೀಲು, ಸ್ಮಿತಾ ಶ್ರೀಕಿರಣ್ ಕೊಳಲು, ದೀಪಿಕಾ ಶ್ರೀನಿವಾಸನ್ ಮೃದಂಗ, ಭಾಗ್ಯಲಕ್ಷ್ಮಿ ಕೃಷ್ಣ ಮೋರ್ಚಿಂಗ್ ಸಾತ್ ನೀಡುವರು. ಮೇ 21ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಟಿ. ಎಸ್. ಪಟ್ಟಾಭಿರಾಮ ಪಂಡಿತ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ. ಟಿ. ಕೆ. ರಾಮಾನುಜಾಚಾರ್ಯಲು ಪಿಟೀಲು, ಎಚ್.ಎಸ್.ಸುಧೀಂದ್ರ ಮೃದಂಗ, ಆರ್‌. ಓಂಕಾರ್‌ ಘಟ. ಮಧ್ಯಾಹ್ನ 4.15 ಕ್ಕೆ ಎಸ್ .ಕೆ. ಹೃಷಿಕೇಶ್ ಭಾರದ್ವಾಜ್ ಅವರಿಂದ ಗಾಯನ. ಸಿ. ವಿ.ಶೃತಿ ಪಿಟೀಲು, ಬಿ.ಜೆ.ಶ್ರೀನಿವಾಸ್ ಮೃದಂಗ, ಸುಮುಖ್ ಕಾರಂತ್ ಖಂಜಿರ. ಸಂಜೆ 6.30ಕ್ಕೆ ವಿದ್ವಾಂಸರಾದ ಎಚ್. ವಿ. ರಘುರಾಮ್, ಎಂ. ವಿ. ವಿಶ್ವಜಿತ್, ಎಸ್. ಆರ್‌. ಕಾರ್ತೀಕೇಯ ಅವರಿಂದ ಪಿಟೀಲು ತ್ರಯ. ಎ. ರೇಣುಕಾ ಪ್ರಸಾದ್ ಮೃದಂಗ, ಎ.ಎಸ್.ಎನ್. ಸ್ವಾಮಿ ಖಂಜಿರ, ಶರತ್ ಕೌಶಿಕ್ ಘಟ. ಮೇ 22ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಮಹಾರಾಜಪುರಂ ಎಸ್. ಗಣೇಶ್ ವಿಶ್ವನಾಥನ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ. ಬಿ.ಕೆ.ರಘು ಪಿಟೀಲು, ಫಣೀಂದ್ರ ಭಾಸ್ಕರ್ ಮೃದಂಗ, ಬಿ.ಎಸ್.ರಘನಂದನ್ ಘಟ. ಮಧ್ಯಾಹ್ನ 4.15ಕ್ಕೆ ಕಲಾಂಬಿಕಾ ಸಹೋದರಿಯರಿಂದ ಯುಗಳ ಗಾಯನ. ನಳಿನಾ ಮೋಹನ್ ಪಿಟೀಲು, ಮೈಸೂರು ರಾಧೇಶ್ ಮೃದಂಗ, ಶಮಿತ್ ಎಸ್. ಗೌಡ ಘಟ. ಸಂಜೆ 6.30ಕ್ಕೆ ಆದಿತ್ಯ ಮಾಧವನ್ ಗಾಯನ, ಕೇಶವ ಮೋಹನ್ ಕುಮಾರ್‌ ಪಿಟೀಲು, ಸಿ. ಚಲುವರಾಜ್ ಮೃದಂಗ, ಜಿ.ಎಸ್.ರಾಮಾನುಜನ್ ಘಟ. ಮೇ 23ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಎ.ಎಸ್. ಮುರಳಿ ಗಾಯನ. ಚಾರುಲತಾ ರಾಮಾನುಜಂ ಪಿಟೀಲು, ಆನೂರ್ ಅನಂತಕೃಷ್ಣ ಶರ್ಮ ಮೃದಂಗ, ಬಿ.ಎಸ್.ಪುರುಷೋತ್ತಮ್ ಖಂಜಿರ. ಮಧ್ಯಾಹ್ನ 4.15ಕ್ಕೆ ಹೃದಯ - ಹೃದಯವಂತಿಕೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರೊಂದಿಗೆ ಸಂದರ್ಶನ. 4.55 ಕ್ಕೆ ಹೆಚ್. ದುಂಡಿರಾಜ್ ಮತ್ತು ವೈ.ವಿ. ಗುಂಡೂರಾವ್ ಅವರಿಂದ ಹಾಸ್ಯ ಸಿಂಚನ. ಸಂಜೆ 6 ಕ್ಕೆ ಸಭಾ ಕಾರ್ಯಕ್ರಮ. ಜಗದಾನಂದಕಾರಕ ಮತ್ತು ಎಂದರೋ ಮಹಾನುಬಾವುಲು ಕೃತಿಗಳ ಗೋಷ್ಠಿ ಗಾಯನ. ಮೈಸೂರಿನ ಉದ್ಯಮಿ ಡಾ. ಜಗನ್ನಾಥ ಶಣೈ ಅಧ್ಯಕ್ಷತೆಯಲ್ಲಿ ಸಂಗೀತ ಕಲಾರತ್ನ, ಮೃದಂಗ ವಿದ್ವಾಂಸ ಎ. ವಿ. ಆನಂದ್ ಅವರಿಗೆ ನಾಚಾರಮ್ಮ ಪ್ರಶಸ್ತಿ ಹಾಗೂ ಲಯಕಲಾ ಸ್ಪರ್ಶಮಣಿ ಬಿರುದು ಪ್ರದಾನ. ಮೇ 24 ಬೆಳಿಗ್ಗೆ 9ಕ್ಕೆ ರಥೋತ್ಸವ, ನಾಮ ಸಂಕೀರ್ತನೆ. 10.30ಕ್ಕೆ ವಿದ್ವಾನ್ ಡಾ. ಮೈಸೂರು ಎಂ. ಮಂಜುನಾಥ್ ಮತ್ತು ಕು. ಮಾಳವಿ ಮಂಜುನಾಥ್ ಅವರಿಂದ ಯುಗಳ ಪಿಟೀಲು. ಟ್ರಿಚ್ಚಿ ಹರಿಕುಮಾರ್ ಮೃದಂಗ, ಜಿ. ಮಡಿಪಾಕ್ಕಮ್ ಎ. ಮುರಳಿ ಘಟ ಸಾತ್ ನೀಡುವರು. ಈ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಅಗಮಿಸಿ ಕಾರ್ಯಕ್ರಮ ಯಶಸ್ವಿಗೋಳಿಸಿ ಸಹಕಾರ ನೀಡುವಂತೆ ವಿದ್ವಾನ್ ಆರ್‌. ಕೆ. ಪದ್ಮನಾಭ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ ಕಾರ್ಮಿಕರ ಪತ್ತೆಗೆ ಕ್ರಮವಹಿಸಲು ನ್ಯಾಯಾಧೀಶರ ಸೂಚನೆ
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ವಿಶ್ವ ಅಮ್ಮಂದಿರ ದಿನ