ಭಾರತದಲ್ಲಿ ಸಂಗೀತಕ್ಕೆ ತನ್ನದೇ ಸ್ಥಾನಮಾನವಿದೆ: ಡಾ. ಸುಮಿತ್ರಾ ಕಾಡದೇವರಮಠ

KannadaprabhaNewsNetwork |  
Published : Jan 05, 2026, 02:15 AM IST
4ಡಿಡಬ್ಲೂಡಿ7ಸಿದ್ಧಗಂಗಾ ನಗರದಲ್ಲಿರುವ ವೀಣಾ, ವಾಣಿ ಸಂಗೀತ ಮಹಾವಿದ್ಯಾಲಯದ ಸಂಗೀತ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ರಾಷ್ಟ್ರೀಯ ಸಂಗೀತಕ್ಕೆ ಭಾರತದಲ್ಲಿ ತನ್ನದೇ ಸ್ಥಾನಮಾನ ಇದೆ ಎಂದು ಗದುಗಿನ ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ ಕಾಲೇಜು ವಿಶ್ರಾಂತ ಪ್ರಾಚಾರ್ಯ ಡಾ. ಸುಮಿತ್ರಾ ಕಾಡದೇವರಮಠ ಹೇಳಿದರು.

ಧಾರವಾಡ: ರಾಷ್ಟ್ರೀಯ ಸಂಗೀತಕ್ಕೆ ಭಾರತದಲ್ಲಿ ತನ್ನದೇ ಸ್ಥಾನಮಾನ ಇದೆ ಎಂದು ಗದುಗಿನ ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ ಕಾಲೇಜು ವಿಶ್ರಾಂತ ಪ್ರಾಚಾರ್ಯ ಡಾ. ಸುಮಿತ್ರಾ ಕಾಡದೇವರಮಠ ಹೇಳಿದರು.

ಭಾನುವಾರ ಇಲ್ಲಿಯ ಸಿದ್ಧಗಂಗಾ ನಗರದಲ್ಲಿರುವ ವೀಣಾ, ವಾಣಿ ಸಂಗೀತ ಮಹಾವಿದ್ಯಾಲಯದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತ ಋುಷಿಮುನಿಗಳ, ಸಂತರ ನೆಲೆವೀಡು. ಜಗತ್ತಿಗೆ ಭಾರತ ಶಾಸ್ತ್ರ ಮತ್ತು ವೇದಾಂತಗಳ ದರ್ಶನ ನೀಡಿದೆ. ಜೊತೆಗೆ ಅಧ್ಯಾತ್ಮ ನೀಡಿದೆ. ಮನರಂಜನೆ, ಆನಂದ ದೊರಕುತ್ತದೆ. ಭಾರತದ ಸಂಗೀತ ಮೋದಕ. ಪಾಶ್ಚಾತ್ಯ ಸಂಗೀತ ಮಾರಕ. ಭಾರತದ ಸಂಗೀತ ವಿಕಾಸದ ಹಾದಿ ತೋರಿದರೆ, ಪಾಶ್ಚಾತ್ಯ ಸಂಗೀತ ವಿಕಾರದ ದಾರಿ ತೋರುತ್ತದೆ. ಶಾಸ್ತ್ರ ಹಾಗಲಕಾಯಿ, ನೆಲ್ಲಿಕಾಯಿಯಾದರೆ, ಸಂಗೀತ ಮಾವಿನ ಹಣ್ಣಿನಂತೆ. ಅದು ಎಲ್ಲರಿಗೂ ರುಚಿಕರವಾಗಿರುತ್ತದೆ ಎಂದರು.

ವಿಶ್ವ ಶಾಂತಿ ಹಾಗೂ ದೇಶದ ವಿಕಾಸಕ್ಕೆ ಇಂಥ ಸಂಗೀತ ಕಾರ್ಯಕ್ರಮ ಹೆಚ್ಚು ನಡೆಯಬೇಕು. ಸಂಗೀತಕ್ಕೆ ಸಾಕಷ್ಟು ವರ್ಷಗಳ ಪರಂಪರೆ ಇದೆ. ಮಕ್ಕಳಿಗೆ ಸಂಗೀತ ಕಲಿಸುವುದರಿಂದ ಭಾರತದ ಸಂಸ್ಕೃತಿ ಕಲಿಸಿದಂತಾಗುತ್ತದೆ. ಶಾಲೆಯಲ್ಲಿ ಪಾಠದ ಜೊತೆಗೆ ಮಕ್ಕಳಿಗೆ ಎಲ್ಲ ಪೋಷಕರು ಸಂಗೀತ ಕಲಿಸುವ ಸಂಪ್ರದಾಯ ಬೆಳೆಸಿ ಭಾರತದ ಪರಂಪರೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಕೃಷ್ಣಪ್ಪ ನಾಯಕ, ಚಂದ್ರಶೇಖರ ಮಮದಾಪುರ, ಶರಣಕುಮಾರ ಮೇಡೆದಾರ, ಮೈಥುಲಿ ಮೇಡೆದಾರ, ಉಮಾದೇವಿ ಮಣ್ಣೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ