ಮನ ಸೆಳೆಯುವ ಶಕ್ತಿ ಸಂಗೀತಕ್ಕಿದೆ

KannadaprabhaNewsNetwork |  
Published : Sep 21, 2024, 01:52 AM IST
ಚಿತ್ರ 20ಬಿಡಿಆರ್50 | Kannada Prabha

ಸಾರಾಂಶ

ಬೀದರ್‌ನ ಬಸವ ಮುಕ್ತಿ ಮಂದಿರದಲ್ಲಿ ನಡೆದ ಗುರುವಂದನಾ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ.ಪಿ.ವಿಠ್ಠಲರೆಡ್ಡಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಸಂಗೀತಕ್ಕೆ ಮನ ಸೋಲದವರೇ ಇಲ್ಲ, ಮನಸನ್ನು ಸೆಳೆಯುವಂತಹ ಶಕ್ತಿ ಈ ಸಂಗೀತಕ್ಕೆ ಇದೆ ಎಂದು ಬಿವಿಬಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಿ.ವಿಠ್ಠಲರೆಡ್ಡಿ ಹೇಳಿದರು.

ಬುಧವಾರ ಬೀದರ್‌ನ ಬಸವ ಮುಕ್ತಿ ಮಂದಿರದಲ್ಲಿ ಸಿದ್ಧಗಂಗಾ ಶ್ರಿ ಕಲೆ ಮತ್ತು ಸಾಂಸ್ಕೃತಿಕ ಸಂಘ ಮುಸ್ತರಿ ಹಾಗೂ ಸಿದ್ಧಶ್ರೀ ಸಂಗೀತ ಶಾಲೆ ಬೀದರ್‌ ಆಯೋಜಿಸಿದ ಗುರುವಂದನಾ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಥೆ ಮಕ್ಕಳಿಗೆ ಸಂಗೀತ ತರಬೇತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.

ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತದಿಂದ ಮಕ್ಕಳು ಸದಾ ಕ್ರಿಯಾಶೀಲರಾಗಿರುತ್ತಾರೆ. ಓಣಿಗೊಂದು ಸಂಗೀತ ಶಾಲೆಯ ಅವಶ್ಯಕತೆ ಇದೆ ಎಂದು ಹೇಳಿದರು.

ಸಂಗೀತಗಾರ ವಿದ್ವಾನ್ ಗಣೇಶ್ ಅವರು ಶಾಸ್ತ್ರೀಯ ಸಂಗೀತದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಉಪನ್ಯಾಸಕಿ ಹಾಗೂ ಸಂಗೀತ ಶಾಲೆಯ ಶಿಕ್ಷಕಿ ರೇಣುಕಾದೇವಿ ಮಳ್ಳಿಸ್ವಾಮಿಯವರು ಮಾತನಾಡಿ, ಮಕ್ಕಳಿಗೆ ಕರೋಕೆ ಹಾವಳಿಯಿಂದ ದೂರವಾಗಿಸಿ ಶಾಸ್ತ್ರೀಯ ಸಂಗೀತದ, ಅರಿವು ನೀಡಿ ಎಂದು ಹೇಳಿದರು.

ಈ ವೇಳೆ ಬಾಬುರಾವ ದಾನಿ ಮಾತನಾಡಿದರು. ಬೀದರ್‌ನ ಹಿರಿಯ ಕಲಾವಿದರಾದ ರಾಮುಲು ಗಾದಗಿ, ಸಂಘದ ಅಧ್ಯಕ್ಷರಾದ ಮಾರುದ್ರಯ್ಯ ಮಳ್ಳಿ ಸ್ವಾಮಿ, ಅಮೃತ ಗಣೇಶ್. ವಿನಾಯಕ್. ಚನ್ನಬಸವ ನೌಬಾದೆ, ಪವನ್, ಗಣೇಶ್ ಗೋರ್ಟಾ ಹಾಗೂ ಸಂಗೀತ ಶಾಲೆಯ ಮಕ್ಕಳ ಗಾಯನ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಶ್ವೇತಾ ವಿಜಯಕುಮಾರ ಗಾದಗಿ, ಕಸ್ತೂರಿ ಮಾಲಿ ಪಾಟೀಲ್, ಅಂಬಿಕಾ ಬಿರಾದರ್, ಮಂಗಲ, ರಾಕೇಶ್ ಮಳ್ಳಿ, ರವಿ ಕಾಮನಿ, ಆಕಾಶ್ ಕೋಟೆ, ಆಶಾ ಕೋಟೆ, ಬಸವರಾಜ್ ಬಿರಾದಾರ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!