ಸಂಗೀತಕ್ಕಿದೆ ಮನಸು ಮುದಗೊಳಿಸುವ ಶಕ್ತಿ: ಕಲ್ಲಯ್ಯಜ್ಜ ಕೋನಾಪುರ

KannadaprabhaNewsNetwork |  
Published : Jan 10, 2024, 01:45 AM ISTUpdated : Jan 10, 2024, 03:18 PM IST
೦೯ವೈಎಲ್‌ಬಿ೩:ಯಲಬುರ್ಗಾ ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಈಶ್ವರ ದೇವಸ್ಥಾನದಲ್ಲಿ  ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮವನ್ನು  ವೇದಮೂರ್ತಿ ಕಲ್ಲಯ್ಯಜ್ಜ ಕೋನಾಪೂರ ಉದ್ಘಾಟಿಸಿದರು | Kannada Prabha

ಸಾರಾಂಶ

ಇಂದಿನ ಯುವ ಪೀಳಿಗೆ ಸಾಂಪ್ರದಾಯಿಕ ಸಂಗೀತದಿಂದ ಬಹಳ ದೂರ ಬಂದಿದ್ದು, ವಿದೇಶಿ ಸಂಗೀತಕ್ಕೆ ಮಾರು ಹೋಗುತ್ತಿದ್ದಾರೆ. ಇಂತಹವುಗಳಿಂದಾಗಿ ನಮ್ಮ ಸಂಗೀತ ಕೇಳುಗರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಪ್ರತಿಯೊಬ್ಬರು ಸಂಗೀತ ಆಲಿಸುವ ಮೂಲಕ ಆಸಕ್ತಿ ಹುಟ್ಟಿಸುವ ಕಾರ್ಯವಾಗಬೇಕಿದೆ.

ಯಲಬುರ್ಗಾ: ಸಂಗೀತ ಆಲಿಸುವುದರಿಂದ ಮನಸ್ಸು ಹಗುರವಾಗುತ್ತದೆ. ಸಂಗೀತಕ್ಕೆ ಮನಸ್ಸನ್ನು ಮುದಗೊಳಿಸುವ ಶಕ್ತಿ ಇದೆ ಎಂದು ಕಲ್ಲಯ್ಯಜ್ಜ ಕೋನಾಪುರ ಹೇಳಿದರು.

ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಅಲೆಮಾರಿ ಬುಡಕಟ್ಟು ಸಮಾಜ ಕುಷ್ಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಯೋಜನೆಯಡಿ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಲಾವಿದರಿಂದ ಸಂಗೀತ ಕ್ಷೇತ್ರ ಶ್ರೀಮಂತವಾಗಿದೆ ಎಂದರು.

ಇಂದಿನ ಯುವ ಪೀಳಿಗೆ ಸಾಂಪ್ರದಾಯಿಕ ಸಂಗೀತದಿಂದ ಬಹಳ ದೂರ ಬಂದಿದ್ದು, ವಿದೇಶಿ ಸಂಗೀತಕ್ಕೆ ಮಾರು ಹೋಗುತ್ತಿದ್ದಾರೆ. ಇಂತಹವುಗಳಿಂದಾಗಿ ನಮ್ಮ ಸಂಗೀತ ಕೇಳುಗರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಪ್ರತಿಯೊಬ್ಬರು ಸಂಗೀತ ಆಲಿಸುವ ಮೂಲಕ ಆಸಕ್ತಿ ಹುಟ್ಟಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಸಂಗೀತ ಕಲಾವಿದ ಶರಣಪ್ಪ ಚೆನ್ನದಾಸರ ಸಂಗಡಗರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಚಂದ್ರವ್ವ, ದ್ರಾಕ್ಷಾಯಣಿ ಬನ್ನಿಕೊಪ್ಪ, ದುರಗೇಶ ಪೂಜಾರ, ಮೈಬೂಬಸಾಬ, ಸೈಯದಸಾಬ, ರೇಣುಕಾ ಹಟ್ಟಿ, ಶರಣಪ್ಪ ತಳವಾರ, ಹನುಮಮ್ಮ ದಾಸರ, ಹುಲಿಗೆಮ್ಮ ಹಗೇದಾಳ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...