ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಸೋಮವಾರದಿಂದ ಆಯೋಜಿಸಿರುವ 29ನೇ ಸಂಗೀತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ಮೇಲೆ ಬದುಕಲು ಪಡಿಪಾಟಲು ಪಡುತ್ತಿರುವ ಮನುಷ್ಯ ಬೇರೆ ಗ್ರಹಗಳಿಗೂ ಹೋಗುವಷ್ಟು ಮುಂದುವರೆದಿದ್ದಾನೆ. ಎಷ್ಟು ವಿಚಿತ್ರ. ನಮ್ಮಲ್ಲಿ ಐದು ಜ್ಞಾನೇಂದ್ರೀಯಗಳಿವೆ. ಐದು ಕರ್ಮೇಂದ್ರೀಯಗಳಿವೆ. ಇವುಗಳ ಜೊತೆ ಕೃತಕ ಬುದ್ಧಿಮತ್ತೆ ಕೂಡ ಕೆಲಸ ಮಾಡುತ್ತಿದೆ. ಆದರೆ, ಮನುಷ್ಯ ತನ್ನೊಳಗೆ ತಾನು ತೊಡಗಿಸಿಕೊಳ್ಳಬೇಕು. ಸಂಗೀತದ ತರಂಗಗಳಿಂದ ಇದು ಸಾಧ್ಯವಿದೆ. ಜೊತೆಗೆ ತನ್ನನ್ನು ತಾನು ಅರ್ಥ ವಾಡಿಕೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ ಎಂದರು.ವಿಜ್ಞಾನದಿಂದ ಅನುಕೂಲದಷ್ಟೇ ಅನಾನುಕೂಲವೂ ಇದೆ. ಇದಕ್ಕೆ ಮನುಷ್ಯ ತನ್ನನ್ನು ತಾನು ಅರ್ಥವಾಡಿಕೊಳ್ಳುವುದೇ ಪರಿಹಾರ. ಸಂಗೀತದಿಂದ ಮನುಷ್ಯ ತನ್ನ ಸಮಸ್ಯೆಯಿಂದ ಹೊರಬಹುದು ಎಂದು ಅವರು ತಿಳಿಸಿದರು.
ಜೆಎಸ್‌ಎಸ್ ಸಂಗೀತೋತ್ಸವ ಭಾರತೀಯ ಸಂಗೀತ ಕಲೆಯನ್ನು ಅನನ್ಯವಾಗಿ ಪೋತ್ಸಾಹಿಸುತ್ತದೆ. ಸಂಗೀತ ಭಾರತದ ಕಾಲಾತೀತವಾದ ಸಮೃದ್ಧಿಯ ಸಂಕೇತ ಎಂದರು.
ಬಳಿಕ ಸುರತ್ಕಲ್ ನ ಕಲಾಪೋಷಕ ಹಾಗೂ ಸಂಘಟಕ ಪಿ. ನಿತ್ಯಾನಂದ ರಾವ್ ಅವರಿಗೆ ಸಂಗೀತ ಸೇವಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ವಿದ್ವಾನ್ ಡಾ.ರಾ. ವಿಶ್ವೇಶ್ವರನ್ ವೀಣೆ, ಕೆ.ವಿ. ಪ್ರಸಾದ್ ಮೃದಂಗ ಹಾಗೂ ಜಿ.ಎಸ್. ರಾವಾನುಜನ್ ಅವರ ಘಟಂ ಸಹಕಾರದಲ್ಲಿ ಸಂಗೀತ ರಸದೌತಣ ಉಣಬಡಿಸಿತು.