ಕಲಬುರಗಿ: ಇಲ್ಲಿನ ಹಂಸಧ್ವನಿ ಕಲಾನಿಕೇತನದ ಮಕ್ಕಳ ತಬಲಾ ಗುಂಪು ವಾದನ, ಚಳ್ಳಂ ವಾದನ, ಅದರಿಂದ ಹೊರಹೊಮ್ಮಿದ ನಾದಕ್ಕೆ ಸಭಿಕರೆಲ್ಲರೂ ತಲೆದೂಗಿದರು.
ಲಕ್ಷ್ಮೀ ದತ್ತಾತ್ರೇಯ ಪಾಟೀಲ್ ಉದ್ಘಾಟಿಸಿ ಶುಭ ಕೋರಿದರು. ಹಿರಿಯ ಕಲಾವಿದ ಜಯರಾವ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಗದೀಶ್ವರಿ ನಾಸಿ, ಕಿರಣಕುಮಾರ ಕುಲಕರ್ಣಿ, ಸಿದ್ರಮ್ ಸಿಂಧೆ, ಮುರ್ಗೇಶ ಮಠಪತಿ, ಡಾ.ಗುರುರಾಜ ದೇಶಪಾಂಡೆ, ಡಾ.ಮಾಥಂಡ ಕುಲಕರ್ಣಿ, ಚಂದ್ರೀಕಾ ಪರಮೇಶ್ವರ, ನವನೀತ ಯರಗಲ್‍ಮಠ ಇದ್ದರು.
ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಡಾ.ದಯಾನಂದ ಶಾಸ್ತ್ರಿ, ಪ್ರೊ.ಗೊವೀಂದ ಪುಜಾರ, ಲಕ್ಷ್ಮೀಕಾಂತ ಮಾಧವರಾವ ದೇಶಪಾಂಡೆ, ಬಸವಂತಪ್ಪ ಬಿ.ಎಮ್, ಪಂಡಿತ ಜಡೇಶ ಹೂಗಾರ, ವಿಜಯೇಂದ್ರ ಸಗರ್, ಅವಧೂತ ಪಾಟೀಲ್, ರವಿಸ್ವಾಮಿ ಗೋಟೂರ, ಬಸಯ್ಯ ಗುತ್ತೆದಾರ, ಸಂತೋಷ ಅಸಂಗನಾಳ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಿತು.ನಂದಕೂಮಾರ ಕುಲಕರ್ಣಿ ಸ್ವಾಗತಿಸಿದರು. ಸುಧೀಂದ್ರಾಚಾರಿ ನಿರೂಪಿಸಿದರು, ಭಾನುದಾಸ ಕುಲಕರ್ಣಿ ಶಿವಕುಮಾರ ಜಂಗಲದಿನ್ನಿ ಇದ್ದರು. ಅಂದೇ ಸಜೆ ಶ್ರೀಕಾಂತ ಮಾನೆ ತಂಡದವರಿಂದ ತಬಲಾ ಸೋಲೊ, ಸೌಖ್ಯಶ್ರೀ ಭಾನುದಾಸ ಕುಲಕರ್ಣಿ ಗಾಯನ, ವಿದ್ಯಾರ್ಥಿಗಳಿಂದ ಚಳ್ಳಂ, 65 ವಿದ್ಯಾರ್ಥಿಗಳು ಏಕಕಾಲಕ್ಕೆ ತಬಲಾ ನುಡಿಸುವ ವಾದ್ಯವೃಂದ ಕಾರ್ಯಕ್ರಮ, ಡಾ. ರಮೇಶ ಕುಲಕರ್ಣಿ ಇವರ ಸಂಗೀತ ಕಾರ್ಯಕ್ರಮ, ಜಯರಾವ ಕುಲಕರ್ಣಿ ಸಗರ, ಬದರಿ ಮುಡಬಿ ವಾದ್ಯ ವಾದನಗಳು ಹಂಸಧ್ವನಿ ಕಲಾನಿಕೇತನದ ಅದ್ಯಕ್ಷ ರವೀಂದ್ರ ಕುಲಕರ್ಣಿ ಉಸ್ತುವಾರಿಯಲ್ಲಿ ನಡೆದು ಗಮನ ಸೆಳದೆವು.