ಧಾರವಾಡ:
ಹುಬ್ಬಳ್ಳಿಯ ಇನ್ಫೋಸಿಸ್ ಆವರಣದಲ್ಲಿ ಧಾರವಾಡದ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟಿಸಿದ ಅವರು, ಸಂಗೀತವು ಮನುಷ್ಯನ ಒತ್ತಡ ನಿವಾರಿಸುವ ಅದ್ಭುತ ಕಲೆ. ಪ್ರತಿಯೊಬ್ಬರಲ್ಲೂ ಸಂಗೀತ ಅನುಕರಿಸುವ ಗುಣವಿರುತ್ತದೆ. ಯಾವುದೇ ಒಂದು ಉತ್ತಮ ಸಂಗೀತ ಕೇಳಿದಾಗ, ಅದನ್ನು ಮತ್ತೆ ಮತ್ತೆ ಗುಣ-ಗುಣಿಸುತ್ತಿರುತ್ತೇವೆ. ಈ ಸಂಸ್ಥೆಯಲ್ಲಿ ಉತ್ತಮ ವಾತಾವರಣವಿದ್ದು, ಉತ್ತಮ ಕೇಳುಗರಿದ್ದಾರೆ ಎಂದರು.
ಕಲಾಪೋಷಕ ವಿನಯ ನಾಯಕ ಮಾತನಾಡಿ, ಜಗತ್ತಿನಲ್ಲಿ ಅನೇಕ ಸಾಫ್ಟ್‌ವೇರ್ ಕಂಪನಿಗಳಿವೆ, ಅವುಗಳಲ್ಲಿ ಇನ್ಫೋಸಿಸ್ ಮಾತ್ರ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇದರಿಂದ ಹಿಂದೂಸ್ತಾನಿ ಸಂಗೀತ ಕಲಾವಿದರಿಗೆ ಹೆಚ್ಚೆಚ್ಚು ವೇದಿಕೆಗಳು ನಿರ್ಮಾಣಗೊಂಡು, ಅವರ ಕಲೆ, ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗಲಿದೆ. ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಇನ್ಫೋಸಿಸ್ ಹುಬ್ಬಳ್ಳಿ ಕ್ಯಾಂಪಸ್ ಮುಖ್ಯಸ್ಥ ಅಲ್ಲಭಕ್ಷ ಅಸಾದುಲ್ಲಾ, ಹಿರಿಯ ತಾಂತ್ರಿಕ ವ್ಯವಸ್ಥಾಪಕ ಶಿವಾನಂದ ಕೂಡ್ಲಮಠ, ಪಂ. ಬಾಲಚಂದ್ರ ನಾಕೋಡ ಇದ್ದರು. ಸಂಜನಾ ಶಿವಪೂರಮಠ ನಿರೂಪಿಸಿದರು. ಚೈತನ್ಯಾ ಮೂಲೆ ಪ್ರಾರ್ಥಿಸಿದರು. ರಾಘವೇಂದ್ರ ನಾಕೋಡ ವಂದಿಸಿದರು. ಪ್ರಕಾಶ ಬಾಳಿಕಾಯಿ ವಾದ್ಯಪರಿಕರಗಳನ್ನು ವಿತರಿಸಿದರು. ಖ್ಯಾತ ಗಾಯಕ ಪಂ. ಜಯತೀರ್ಥ ಮೆವುಂಡಿ ಗಾಯನಕ್ಕೆ ತಬಲಾದಲ್ಲಿ ಗುರುರಾಜ ಆಡುಕಳ ಹಾಗೂ ಹಾರ್ಮೊನಿಯಂದಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಿದರು. ಕಲಕೇರಿ ಸಂಗೀತ ವಿದ್ಯಾಲಯ, ವೀರೇಶ್ವರ ಪುಣ್ಯಾಶ್ರಮ, ಗದಗ ಹಾಗೂ ಬಾಲ ಬಳಗ ಶಾಲೆಯ ಯುವ ಕಲಾವಿದರು ಗಾಯನ ಪ್ರಸ್ತುತ ಪಡಿಸಿದರು.