ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಆರಂಭದಲ್ಲಿ ರೈತರ ಜೀವನಾಡಿ ಕಾವೇರಿಗೆ ನಮಿಸಿ ಕಾವೇರಿಯ ವಿಶೇಷ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಗಾಯಕ ಡಾ.ಕಿಕ್ಕೇರಿ ಇಡೀ ಕಾರ್ಯಕ್ರಮವನ್ನು ರೈತರಿಗೆ ಸಮರ್ಪಿಸಿದರು. ಉಳುವಾ ಯೋಗಿಯ ನೋಡಲ್ಲಿ ಹಾಡನ್ನು ಹಾಡಿ ನೆರೆದಿದ್ದ ಸಾವಿರಾರು ಪ್ರೇಕ್ಷಕರಿಂದಲೂ ಉಳುವಾ ಯೋಗಿಯ ನೋಡಲ್ಲಿ ಎಂದು ಹಾಡಿಸಿ ರೋಮಾಂಚನಗೊಳಿಸಿದರು.
ನಂತರ ಪುರಂದರ ದಾಸರ ದಾರಿ ಯಾವುದಯ್ಯ ವೈಕುಂಠಕೆ ಗೀತೆಯನ್ನು ಹಾಡಿ ಶ್ರೀರಂಗನಾಥರಿಗೆ ಸಮರ್ಪಿಸಿದರು. ಕೋರಿಕೆ ಮೇರೆಗೆ ರಾಷ್ಟ್ರಕವಿ ಕುವೆಂಪು ಅವರ ಸತ್ಯಾವತಾರ ಗೀತೆ ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆಯೊಂದಿಗೆ ವಿಲೀನವಾಯಿತು.ಶಿಶುನಾಳ ಷರೀಫರ ಸುಗ್ಗಿ ಮಾಡೋಣು ಬಾರವ್ವಾ, ದ.ರಾ.ಬೇಂದ್ರೆಯವರ ಒಂದೇ ಒಂದೇ ಕರ್ನಾಟಕ ಒಂದೇ, ಕುರುಡು ಕಾಂಚಾಣ ಕುಣಿಯುತಲಿತ್ತು, ಆನಂದ ಕಂದರ ನಾ ಸಂತಿಗಿ ಹೋಗಿನ್ನಿ, ಮಂಡ್ಯ ಜಿಲ್ಲೆಯ ಹೆಮ್ಮೆಯ ಕವಿ ಕೆಎಸ್.ನರಸಿಂಹ ಸ್ವಾಮಿ ಅವರ ಒಂದಿರುಳು ಕನಸಿನಲಿ, ಮತ್ತಿತರ ಗೀತೆಗಳು ಜನಮನ ಗೆದ್ದಿತು.
ಅ.2ರಂದು ಮಂಡ್ಯ ದಸರಾ
ಪ್ರತಿ ವರ್ಷದಂತೆ ಈ ಬಾರಿಯೂ ಮಂಡ್ಯ ಯೂತ್ ಗ್ರೂಪ್‌ನಿಂದ ಅನಿಲ್ ಆನಂದ್ ಡ್ರೀಮ್ ವರ್ಕ್ಸ್ ಸಹಯೊಗದೊಂದಿಗೆ ಹನ್ನೊಂದನೇ ಬಾರಿಗೆ ಅ.2ರ ವಿಜಯದಶಮಿ ದಿನದಂದು ಮಂಡ್ಯ ದಸರಾ ನಡೆಸಲಾಗುವುದು ಎಂದು ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ತಿಳಿಸಿದ್ದಾರೆ.
ನಾಗರಹೊಳೆಯ ಕಾಡು ಜನರ ನೃತ್ಯ, ಪೊನ್ನಂಪೇಟೆಯ ಎರವರ ಕುಣಿತ, ಕೇರಳದ ಚಂಡೆ, ಭದ್ರಕಾಳಿ ಮತ್ತು ಅಘೋರಿಯ ವೀರಗಾಸೆ, ಮಹಿಳಾ ಕೋಲಾಟ, ಬಂಡೂರು ಕುರಿ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆ, ಡೊಳ್ಳು ಕುಣಿತ, ಕೀಲು ಕುದುರೆ, ಲಗಾನ್ ಬ್ಯಾಂಡ್, ಪಟ ಕುಣಿತ, ಸೋಮನ ಕುಣಿತ, ಶ್ರೀರಂಗಪಟ್ಟಣ ಅಶೋಕ್ ಡ್ರಮ್ಸ್, ಬೆಂಕಿ ಭರಾಟೆ ಮತ್ತಿತರ ತಂಡಗಳು ಮಂಡ್ಯ ದಸರಾ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ. ಆಸಕ್ತ ತಂಡಗಳು 8073229050 ರಕ್ಷಿತ್ ರನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.