ಮಸ್ಕಿ ನಾಲೆ ಭರ್ತಿ: ಹಿರೇಹಳಕ್ಕೆ 400 ಕ್ಯುಸೆಕ್ ನೀರು

KannadaprabhaNewsNetwork |  
Published : Jul 20, 2025, 01:18 AM IST
19-ಎಂ ಎಸ್ ಕೆ -01:  | Kannada Prabha

ಸಾರಾಂಶ

ಮಾರಲದಿನ್ನಿ ಸಮೀಪದ ಮಸ್ಕಿ ನಾಲ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಮಸ್ಕಿಯ ಹಿರೇಹಳ್ಳಕ್ಕೆ ಜಲಾಶಯದಿಂದ ನೀರು ಬಿಡಲಾಗಿದ್ದು, ಹಳ್ಳದ ಸಮೀಪದ ಮಾರಲದಿನಿ, ವೆಂಕಟಾಪುರ, ಉದ್ಬಾಳ, ಹುಲ್ಲೂರು, ಬಳಗಾನೂರು, ಬೆಳ್ಳಿಗನೂರು, ಸೇರಿದಂತೆ ಹಳ್ಳದ ಸುತ್ತಮುತ್ತಲಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಾಲೂಕು ಆಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಇಂದರ ಪಾಷ ಚಿಂಚರಕಿ

ಕನ್ನಡಪ್ರಭ ವಾರ್ತೆ ಮಸ್ಕಿ

ಮಾರಲದಿನ್ನಿ ಸಮೀಪದ ಮಸ್ಕಿ ನಾಲ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಮಸ್ಕಿಯ ಹಿರೇಹಳ್ಳಕ್ಕೆ ಜಲಾಶಯದಿಂದ ನೀರು ಬಿಡಲಾಗಿದ್ದು, ಹಳ್ಳದ ಸಮೀಪದ ಮಾರಲದಿನಿ, ವೆಂಕಟಾಪುರ, ಉದ್ಬಾಳ, ಹುಲ್ಲೂರು, ಬಳಗಾನೂರು, ಬೆಳ್ಳಿಗನೂರು, ಸೇರಿದಂತೆ ಹಳ್ಳದ ಸುತ್ತಮುತ್ತಲಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಾಲೂಕು ಆಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಸ್ಕಿ ನಾಲ ಜಲಾಶಯದ ಮೇಲ್ಭಾಗದ ಕುಷ್ಟಗಿ ಹಾಗೂ ಗಜೇಂದ್ರಗಡ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಮಸ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. 29 ಅಡಿ (0.5 ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ನಾಗಲಾಪುರ ಭಾಗದ ಕಡೆಯಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ಜಲಾಶಯವು ಸಂಪೂರ್ಣ ವಾಗಿ ಭರ್ತಿಯಾಗಿದೆ. ಹೆಚ್ಚಿನ ನೀರನ್ನು ಎರಡು ಗೇಟ್ ಗಳ ಮೂಲಕ ಹಳ್ಳಕ್ಕೆ ಬಿಡಲಾಗಿದೆ ಎಂದು ಜಲಾಶಯದ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಸ್ಕಿ ನಾಲ ಜಲಾಶಯ

ತುಂಬಿರುವುದರಿಂದ ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

---------

ಮಸ್ಕಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಮಸ್ಕಿ ಹಿರೇ ಹಳ್ಳಕ್ಕೆ ನೀರು ಬಿಡಲಾಗಿದ್ದು, ಸಾರ್ವಜನಿಕರು ಹಳ್ಳಕ್ಕೆ ಇಳಿಯಬಾರದು ಹಾಗೂ ರೈತರು ತಮ್ಮ ಜಾನುವಾರುಗಳು ಕೂಡ ಇಳಿಯದಂತೆ ಎಚ್ಚರವಹಿಸಬೇಕು.

- ಮಲ್ಲಪ್ಪ ಕೆ. ಯರಗೋಳ ತಹಸೀಲ್ದಾರ್‌ ಮಸ್ಕಿ

-------------

ಮಸ್ಕಿ ನಾಲ ಜಲಾಶಯದ ಮೇಲ್ಬಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ನಾಗಲಾಪುರ ಹಳ್ಳದಿಂದ ಮಸ್ಕಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಜಲಾಶಯ 29 ಅಡಿ ಭರ್ತಿಯಾಗಿದ್ದು, ಆದ್ದರಿಂದ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗಿದೆ.

- ದಾವೂದ್, ಎಂಜಿನಿಯರ್, ಮಸ್ಕಿ ನಾಲ ಜಲಾಶಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು