ನೈತಿಕ ಪೋಲಿಸ್‌ಗಿರಿ ಪ್ರದರ್ಶಿಸಿದ ಮುಸ್ಲಿಂ ಬಾಲಕರು

KannadaprabhaNewsNetwork |  
Published : Feb 04, 2026, 01:15 AM IST
03ಜಿಯುಡಿ1A | Kannada Prabha

ಸಾರಾಂಶ

ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಿಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಇಬ್ಬರನ್ನು ಅಡ್ಡಗಟ್ಟಿದ ಅಪ್ರಾಪ್ತ ಸ್ನೇಹಿತರು ಒಟ್ಟಿಗಿದ್ದ ವೀಡಿಯೋ ತೋರಿಸಿ ಕಿರುಕುಳ ನೀಡಲು ಮುಂದಾಗಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಲ್ಲಿ ಅನ್ಯಕೋಮಿನ ಅಪ್ರಾಪ್ತ ಬಾಲಕರಿಂದ ನಡೆದ ನೈತಿಕ ಪೊಲೀಸ್‌ಗಿರಿ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಸ್ಥಳೀಯರು ಹೇಳಿರುವಂತೆ, ಹಿಂದೂ ಹುಡುಗನೊಂದಿಗೆ ಅನ್ಯಕೋಮಿನ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ವೀಡಿಯೋ ಮಾಡಿದ್ದ ಪುಂಡರು, ಅವರನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ.

ನಾವಿಬ್ಬರೂ ಸ್ನೇಹಿತರೆಂದರೂ ಬಿಡದ ಪುಂಡರು

ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಿಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಇಬ್ಬರನ್ನು ಅಡ್ಡಗಟ್ಟಿದ ಅಪ್ರಾಪ್ತ ಸ್ನೇಹಿತರು ಒಟ್ಟಿಗಿದ್ದ ವೀಡಿಯೋ ತೋರಿಸಿ ಕಿರುಕುಳ ನೀಡಲು ಮುಂದಾಗಿದ್ದರು. ಈ ವೇಳೆ ತಾವಿಬ್ಬರೂ ಒಂದೇ ಊರಿನವರೆಂದೂ, ಸ್ನೇಹಿತರೆಂದೂ ಯುವಕ ಮತ್ತು ಯುವತಿ ಹೇಳಿಕೊಂಡಿದ್ದಾರೆ. ಆದರೂ ಸುಮ್ಮನಾಗದ ಪುಂಡರು ನೈತಿಕ ಪೊಲೀಸ್‌ಗಿರಿ ತೋರಿಸಿದ್ದಾರೆ.

ಏನಿದು ಘಟನೆ:

ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಿಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಪ್ರತಿನಿತ್ಯ ಒಂದೇ ಬಸ್ಸಿನಲ್ಲಿ ಬಂದು ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಂದಿನಂತೆ ಸೋಮವಾರ ಕಾಲೇಜು ಮುಗಿಸಿಕೊಂಡು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಹೋಗುತ್ತಿದ್ದ ಹಿಂದೂ ಮುಸ್ಲಿಂ ಹುಡುಗ ಹುಡುಗಿಯನ್ನು, ಚಿಕ್ಕಬಳ್ಳಾಪುರ ನಗರದ ಇಸ್ಲಾಂಪುರ, ದರ್ಗಾ ಮೊಹಲ್ಲಾ ಮುಸ್ಲಿಂ ಬಾಲಕರು ಹಿಂಬಾಲಿಸಿಕೊಂಡು ವೀಡಿಯೋ ಮಾಡುತ್ತಾ ಅಡ್ಡಗಟ್ಟಿದ್ದಾರೆ. ಮುಸ್ಲಿಂ ಹುಡುಗಿಗೆ ಹಿಂದೂ ಹುಡುಗನ ಜೊತೆ ಯಾಕೆ ಹೋಗ್ತಾ ಇದ್ದೀಯಾ ನಿಮ್ ಅಪ್ಪಗೆ ಪೋನ್ ಮಾಡ್ಕೊಡು ಎಂದು ಬೇದರಿಸಿದ್ದಾರೆ. ಅಲ್ಲದೆ ನಮ್ ಮುಸ್ಲಿಂ ಹುಡುಗಿ ನಿನಗೇನ್ ಆಗ್ಬೇಕು. ಅವಳ ಜೊತೆ ನಿನ್ಯಾಕೆ ಹೋಗ್ತಾ ಇದ್ದೀಯಾ ಅಂತ ಚಾಕು ತೋರಿಸಿ ನೈತಿಕ ಪೋಲಿಸ್ ಗಿರಿ ಮಾಡಿದ್ದಾರೆ. ಅವರಿಬ್ಬರೂ ಸ್ನೇಹಿತರು ಎಂದರೂ ಬಿಡದ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ಬೆದರಿಸಿದ್ದಾರೆಂದು ಯುವಕ ಆರೋಪಿದ್ದಾನೆ. ಅಲ್ಲದೆ ಮುಸ್ಲಿಂ ಯುವತಿ ಅವರ ತಂದೆಗೆ ಪೋನ್ ಮಾಡಿ ಕೊಟ್ಟಿದ್ದು, ಅವರಿಬ್ಬರು ಸ್ನೇಹಿತರು ಅಂತ ಹೇಳಿದ್ರೂ ಸಹ ಬಿಡದ ಮುಸ್ಲಿಂ ಯುವಕರ ನಡು ರಸ್ತೆಯಲ್ಲೆ ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ.

ಹಿಂದೂ ಯುವಕ, ಮುಸ್ಲಿಂ ಯುವತಿ ಸ್ನೇಹಿತರಿಬ್ಬರೂ ಜೊತೆಗೆ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿರುವಾಗ ಜನ ಸಂದಣಿ ಇರುವ ಜಾಗದಲ್ಲೆ ಇಬ್ಬರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿದ್ದಾರೆ. ವೀಡಿಯೋ ಚಿತ್ರೀಕರಣ ಮಾಡುವಾಗ ಅಲ್ಲಿದ್ದ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಂತೆ ಚಾಕುವನ್ನು ತನ್ನ ಸ್ನೇಹಿತನಿಗೆ ಕೊಟ್ಟು ಕಳುಹಿಸಿ, ವೀಡಿಯೋ ಮಾಡದಂತೆ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಕಣ್ಣಾರೆ ಕಂಡ ಸಾರ್ವಜನಿಕರು ಚಿಕ್ಕಬಳ್ಳಾಪುರದಲ್ಲಿ ಹಿಂದೂ ಮುಸ್ಲಿಂ ಹುಡುಗ ಹುಡುಗಿಯರಯ ಓಡಾಡುವುದೆ ತಪ್ಪಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೈತಿಕ ಪೊಲೀಸ್​ಗಿರಿ ಮಾಡಿದ್ದಕ್ಕೆ ಬಾಲಕರು ಪೋಲಿಸರ ವಶಕ್ಕೆ:

ಈ ಹಿನ್ನೆಲೆ ಚಿಕ್ಕಬಳ್ಳಾಪುರ ನಗರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಕಿರುಕುಳ ನೀಡಿದ್ದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ನಗರ ನಿವಾಸಿಗಳು ಈ ರೀತಿಯ ನೈತಿಕ ಪೊಲೀಸ್‌ಗಿರಿಯಿಂದಾಗುವ ತೊಂದರೆಯನ್ನು ತಡೆಯಲು ಕಾನೂನು ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌
ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು