ಯಾರನ್ನೋ ಮಂತ್ರಿಯಾಗಿಸಲು ಮುಸ್ಲಿಮರು ವೋಟು ಹಾಕಿಲ್ಲ

KannadaprabhaNewsNetwork |  
Published : Apr 24, 2026, 03:30 AM IST
ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ಮುಸ್ಲಿಂ ಸಮಾಜ ಜಮೀರ್‌ ಅಹ್ಮದ್, ನಾಸೀರ್‌ ಅಹ್ಮದ್‌ರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರಿಕರಿಸಿ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಉಲೇಮಾಗಳ ನಿಲುವು ಸರಿಯಲ್ಲ. ಯಾರನ್ನೋ ಮಂತ್ರಿ ಮಾಡಲು ಮುಸ್ಲಿಮರು ವೋಟು ಹಾಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಸ್ಲಿಂ ಸಮಾಜ ಜಮೀರ್‌ ಅಹ್ಮದ್, ನಾಸೀರ್‌ ಅಹ್ಮದ್‌ರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರಿಕರಿಸಿ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಉಲೇಮಾಗಳ ನಿಲುವು ಸರಿಯಲ್ಲ. ಯಾರನ್ನೋ ಮಂತ್ರಿ ಮಾಡಲು ಮುಸ್ಲಿಮರು ವೋಟು ಹಾಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ರಕ್ಷಣೆ ಜಾತ್ಯತೀತ ಸರ್ಕಾರದ ಮನೋಭಾವನೆ ಉದ್ದೇಶಕ್ಕಾಗಿ ಮತ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ಮುಸ್ಲಿಮರ ನಡುವೆ ಬಾಂಧವ್ಯಕ್ಕೆ ಧಕ್ಕೆ ತರುವುದು ಬೇಡ. ಮುಸ್ಲಿಮರ ಬೇಡಿಕೆಗಳ ಬಗ್ಗೆ ಉಲೇಮಾಗಳು ಧ್ವನಿ ಎತ್ತಲಿಲ್ಲ. ಮತಪಟ್ಟಿ ಪರಿಷ್ಕರಣೆ ಅವೈಜ್ಞಾನಿಕತೆ, ಎಸ್‌ಐಆರ್‌ ಬಗ್ಗೆ ಉಲೇಮಾಗಳು ಮೌನ ವಹಿಸಿದ್ದೇಕೆ? ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿದ ಬಗ್ಗೆಯೂ ಧ್ವನಿ ಎತ್ತಲಿಲ್ಲವೇ? ಕೇವಲ ಕೆಲವು ನಾಯಕರ ತಲೆದಂಡವಾದರೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರೆ ಎಂದು ಪ್ರಶ್ನಿಸಿದರು. ಉಲೇಮಾಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಹಾಲಿ ಸದಸ್ಯರು ಅಕಾಲಿಕವಾಗಿ ಮರಣವನ್ನಪ್ಪಿದಾಗ ಆ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದು ಸಂಪ್ರದಾಯ ಎಂದರು.

ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಮುಖಂಡ ಎಂ.ಸಿ. ಮುಲ್ಲಾ, ಕಾಂಗ್ರೆಸ್ ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ, ವಸಂತ ಹೊನಮೋಡೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವಜಾತ ಶಿಶು ಕತ್ತು ಕುಯ್ದುಟಾಯ್ಲೆಟ್‌ಗೆ ಎಸೆದ ತಾಯಿ
ಸಾಲಗಾರರ ಕಾಟ: 17 ನೇಮಹಡಿಯಿಂದ ಹಾರಿ ಆತ್ಮಹತ್ಯೆ