ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆದರೆ ಸಾಲದು. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶಿಕ್ಷಣ ಶ್ರೇಣಿಯಲ್ಲಿ ಉತ್ತೀರ್ಣರಾದಾಗ ಮಾತ್ರ ಸರ್ಕಾರಿ ಹುದ್ದೆ ಪಡೆಯಲು ಸಾಧ್ಯ ಎಂದು ಮೈಸೂರು ನಿವೃತ್ತ ಜೆಡಿಪಿಆಯ್ ಹಾಗೂ ವಿಶ್ವವಿಕಾಸ ಟ್ರಸ್ಟ್ ಅಧ್ಯಕ್ಷ ಮಂಟಲಿಂಗಾಚಾರ್ಯ ಹೇಳಿದರು.
ರಾಣಿಬೆನ್ನೂರು: ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆದರೆ ಸಾಲದು. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶಿಕ್ಷಣ ಶ್ರೇಣಿಯಲ್ಲಿ ಉತ್ತೀರ್ಣರಾದಾಗ ಮಾತ್ರ ಸರ್ಕಾರಿ ಹುದ್ದೆ ಪಡೆಯಲು ಸಾಧ್ಯ ಎಂದು ಮೈಸೂರು ನಿವೃತ್ತ ಜೆಡಿಪಿಆಯ್ ಹಾಗೂ ವಿಶ್ವವಿಕಾಸ ಟ್ರಸ್ಟ್ ಅಧ್ಯಕ್ಷ ಮಂಟಲಿಂಗಾಚಾರ್ಯ ಹೇಳಿದರು. ಇಲ್ಲಿಯ ಉಮಾಶಂಕರ ನಗರದಲ್ಲಿರುವ ಶ್ರೀ ವಿಶ್ವವಿಭು ರೇಕಿ ಧ್ಯಾನಪೀಠದಲ್ಲಿ ವಿಶ್ವಕರ್ಮ ಬ್ರಾಹ್ಮಣ ಸಮಾಜದ 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗುರೂಜೀ ಶ್ರೀ ಮೌನೇಶ್ವರ ಆಚಾರ್ಯರ ಹಿಂದೂಸ್ಥಾನಿ ರಾಷ್ಟ್ರೀಯ ತಬಲಾವಾದನ ದರ್ಶನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆಚಾರ ವಿಚಾರಗಳನ್ನುನಿತ್ಯ ಜೀವನದಲ್ಲಿ ಆಚರಿಸಿಕೊಂಡಾಗ ಪರಸ್ಪರ ಪ್ರೀತಿ-ಗೌರವ ಭಾವನೆಗಳನ್ನು ಇಟ್ಟುಕೊಂಡಾಗ ಸಮಾಜದ ಸಾಮೂಹಿಕ ಪ್ರಗತಿಯಾಗಿ ಸಮಷ್ಟಿ ಸೃಷ್ಟಿಯಾಗುತ್ತದೆ. ನಮ್ಮ ಪ್ರಗತಿಯುಂಟಾಗುತ್ತದೆ. ಬ್ರಾಹ್ಮಣ್ಯ ಮತ್ತು ಶಿಲ್ಪ ಇವೆರಡನ್ನು ಹೊಂದಿದ ಪ್ರತಿಭಾವಂತರ ಪರಂಪರೆಯಾಗಿದೆ. ಪಂಚ ಶಿಲ್ಪಗಳ ಮೂಲಕ ಪ್ರಪಂಚಕ್ಕೆ ಅದ್ಭುತವಾದ ಕೊಡುಗೆಯನ್ನು ಕೊಟ್ಟ ಬುದ್ಧಿವಂತ ಸಮಾಜ ನಮ್ಮದಾಗಿದೆ. ಹಿಂದಿನ ನಮ್ಮ ಪರಂಪರೆಯ ಇತಿಹಾಸವನ್ನು ಅರಿತುಕೊಂಡು ಮುಂದೆ ನಡೆಯುವ ಆವಶ್ಯಕತೆ ಇದೆ ಎಂದರು. ಗದಗಿನ ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಾರಾಯಣಾಚಾರ್ಯ ಅರ್ಕಸಾಲಿ ಮಾತನಾಡಿ, ಮೌನೇಶ್ವರ ಆಚಾರ್ಯ ಅವರ ಹಿಂದೂಸ್ತಾನಿ ಶಾಸ್ತ್ರೀಯ ತಬಲಾ ವಾದನ ದರ್ಶನ ಎಂಬ ಗ್ರಂಥವು ತುಂಬಾ ಅನುಭವದಿಂದ ಬರೆದ ವಿದ್ವತ್‌ಪೂರ್ಣವಾಗಿದೆ. ತಬಲಾ ಕಲಿಯುವ ಮತ್ತು ಕಲಿಸುವ ಗುರುಗಳಿಗೆ ಮಾರ್ಗದರ್ಶನ ಮಾಡುವಂತಹ ಒಂದು ಅಮೂಲ್ಯವಾದ ಗ್ರಂಥವಾಗಿದೆ. ಇಂತಹ ಸಂಗೀತ ಗ್ರಂಥಗಳು ಮನೆಯಲ್ಲಿದ್ದರೆ ಸಕಾರಾತ್ಮಕ ಶಕ್ತಿಯ ದಿವ್ಯ ವಾತಾವರಣವನ್ನು ನಿರ್ಮಿಸುತ್ತವೆ. ಮತ್ತು ಕಲಿಯಲು ಪ್ರೇರಣೆ ಕೊಡುತ್ತವೆ ಎಂದರು. ಮೌನೇಶ್ವರ ಗುರೂಜೀ ಸಾನಿಧ್ಯ ವಹಿಸಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ವಿಜಯಕುಮಾರ ಪತ್ತಾರ, ಸ್ಫೂರ್ತಿ ಬಡಿಗೇರ, ತೇಜಶ್ವಿನಿ ಬಡಿಗೇರ, ಭರತ ಬಡಿಗೇರ, ಸೃಷ್ಟಿ ಮಾಯಾಚಾರಿ, ವೇದಶ್ರೀ ಕಮ್ಮಾರ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣಪ್ರೇಮಿ ಬಸವರಾಜ ಬೆಂತೂರು, ಹುಬ್ಬಳ್ಳಿ ವಿಶ್ವಮಯ ಸಾಹಿತ್ಯ ಸಮಿತಿ ಸಂಚಾಲಕ ಭೀಮಸೇನ ಬಡಿಗೇರ, ಡಾ. ಚಾಮರಾಜ ಕಮ್ಮಾರ, ನಾಗರಾಜಚಾರ್ಯ ಅರ್ಕಾಚಾರ, ಡಾ. ಉಮೇಶ ದೈವಜ್ಞ ಅವರು ಮಾತನಾಡಿದರು. ಡಾ. ಮಲ್ಲಿಕಾರ್ಜುನ ಆಚಾರ್ಯ, ಸುನೀತ, ನಾರಾಯಣಚಾರ್ಯ ಅರ್ಕಸಾಲಿ, ಶಿವಾನಂದ ಬಡಿಗೇರ, ಮಹೇಶ ಬಡಿಗೇರ, ಮಂಜಪ್ಪ ಬಡಿಗೇರ, ರಾಘವೇಂದ್ರ ಬಡಿಗೇರ, ಬಸವರಾಜ ಬಡಿಗೇರ, ಕೃಷ್ಣ ಬಡಿಗೇರ, ಸುರೇಶ ಬಡಿಗೇರ, ತಾರಾದೇವಿ ಬಡಿಗೇರ, ಕಾಳಮ್ಮ ಬಡಿಗೇರ, ವಿಶ್ವಮೂರ್ತಿ ಬಡಿಗೇರ, ಶ್ರೀಕಾಂತಾಚಾರ ಕಮ್ಮಾರ, ಪ್ರದೀಪ ಬಿ.ಜಿ., ಗಂಗಾಧರಾಚಾರ್ಯ ದಾವಣಗೆರೆ, ಜಯವ್ವ ಬಡಿಗೇರ, ಪುಷ್ಪ, ಪ್ರಸಾದ ತಾಂಬೆ, ಅಮೃತ ತಾಂಬೆ, ಅಶೋಕ ಪಾಟೀಲ, ಸ್ವರೂಪ ಆರ್.ಕೆ., ವಿಶ್ವಾಸ ಆರ್.ಕೆ., ಸಂಕೇತ ತಾಂಬೆ, ಪ್ರಕಾಶ ಕಮ್ಮಾರ, ಎಂ.ಜಿ. ಬಡಿಗೇರ, ಸೌಭಾಗ್ಯಮ್ಮ ಜಿ. ಸೇರಿದಂತೆ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.