ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಹಿರೇಕಲ್ಮಠದಲ್ಲಿ 10ನೇ ದಿನದ ದಸರಾ ಮತ್ತು ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದರು.
ಲಿಂ.ಶ್ರೀಗಳವರು ನಡೆದ ದಾರಿಯಲ್ಲೇ ಈಗಿನ ಶ್ರೀಗಳು ಅಕ್ಷರ, ಅನ್ನದಾಸೋಹದ ಜೊತೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿಯೂ ಈ ಭಾಗದ ಭಕ್ತರಿಗೆ ಸೇವೆ ನೀಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀಮಠಕ್ಕೆ ಸಹಕಾರ ನೀಡಬೇಕಾಗಿ ಮನವಿ ಮಾಡಿದರು.ಚನ್ನಕಿರಣ ಪ್ರಶಸ್ತಿಗೆ ಭಾಜನರಾದ ಹಿರೇಕಲ್ಮಠದ ಪ್ರಧಾನ ಧರ್ಮ ಕಾರ್ಯಕರ್ತ ಎಚ್.ಎಂ.ಅನ್ನದಾನಯ್ಯ ಶಾಸ್ತ್ರಿ ಮಾತನಾಡಿ, ತಾವು 1973ರಲ್ಲಿ ಲಿಂ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೂರ್ವಾಶ್ರಮದ ಸಹೋದರ ವಿಶ್ವನಾಥ್ ತಮ್ಮನ್ನು ಶ್ರೀಮಠಕ್ಕೆ ಕರೆದುಕೊಂಡು ಬಂದಿದ್ದು, ಅಂದಿನಿಂದ ಇಲ್ಲಿಯವರೆಗೂ ಸುದೀರ್ಘ 53 ವರ್ಷ ಶ್ರೀಮಠದಲ್ಲಿ ಧಾರ್ಮಿಕ ಸೇವೆ ಸಲ್ಲಿಸಲು ಅವಕಾಶ ಒದಗಿ ಬಂದದ್ದು ತಮ್ಮ ಪೂರ್ವ ಜನ್ಮದ ಪುಣ್ಯವೆಂದರು.
ಹಿರೇಕಲ್ಮಠಕ್ಕೆ ಶ್ರಧ್ಧಾ-ಭಕ್ತಿಯಿಂದ ಧಾರ್ಮಿಕವಾಗಿ, ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸಿರುವ ಮಠದ ಪ್ರಧಾನ ಧರ್ಮ ಕಾರ್ಯಕರ್ತ ಎಚ್.ಎಂ.ಅನ್ನದಾನಯ್ಯ ಶಾಶ್ತ್ರಿ, ಪಟ್ಟಣದ ಖ್ಯಾತ ವರ್ತಕ ಕೆ.ಜಿ.ರುದ್ರಪ್ಪ, ಚನ್ನಚೇತನ ಬೋರ್‌ವೆಲ್ ಏಜೆನ್ಸಿ ಮಾಲೀಕರಾದ ಕಡದಕಟ್ಟೆ ಮೀನಾಕ್ಷಮ್ಮ ದಾನಪ್ಪ ಇವರಿಗೆ ಹಿರೇಕಲ್ಮಠದ ವತಿಯಿಂದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳವರು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಚನ್ನಕಿರಣ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯ ಜತೆಗೆ ಬಿಳಿ ಸಮವಸ್ತ್ರ, ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲಾಯಿತು
ಮಂಜುನಾಥ ದೇವರು ಶ್ರೀ ದೇವಿ ಪುರಾಣ ಪ್ರವಚನ ನಡೆಸಿಕೊಟ್ಟರು. ಕೆ.ಆರ್.ಮ್ಯೂಸಿಕಲ್ ತಂಡದವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಠದ ಸೇವಾಕರ್ತರಿಗೆ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು. ಬಿ.ಜಿ.ಹಿರೇಮಠ ಸ್ವಾಗತಿಸಿ, ವಿದ್ಯಾಸಂತೋಷ್ ನಿರೂಪಿಸಿ-ವಂದಿಸಿದರು.