ಮಹಿಳೆಯರು ಆರ್ಥಿಕವಾಗಿ ಬೆಳೆಯಲು ಪರಸ್ಪರ ಸಹಕಾರ ಅವಶ್ಯ: ರವಿಕುಮಾರ

KannadaprabhaNewsNetwork |  
Published : Mar 29, 2025, 12:34 AM IST
ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಗ್ರಾಪಂ ಉಪಾಧ್ಯಕ್ಷೆ ಶೈಲಾ ರಾಮಣ್ಣನವರ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿ ರಂಗದಲ್ಲಿಯೂ ಸಾಧನೆಗೆ ಮುಂದಾಗುತ್ತಿರುವ ಮಹಿಳೆಯರಿಗೆ ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯೂ ಉತ್ತಮ ಸಹಕಾರ ನೀಡಲು ಮುಂದಾಗುತ್ತಿದೆ.

ಸವಣೂರು: ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಬೆಳೆಯಲು ಪರಸ್ಪರ ಸಹಕಾರ ಅವಶ್ಯವಾಗಿದೆ ಎಂದು ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯ ರೀಜನಲ್ ಕೋ ಆಡಿನೇಟರ್ ರವಿಕುಮಾರ ಹೊಟ್ಟೂರ ತಿಳಿಸಿದರು.ತಾಲೂಕಿನ ಜಲ್ಲಾಪೂರ ಗ್ರಾಮದ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ, ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆ, ಬೆಲ್‌ಸ್ಟಾರ್ ಮೈಕ್ರೋ ಪೈನಾನ್ಸ್ ಸಂಸ್ಥೆ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಿ ಮಾತನಾಡಿದರು.ಪ್ರತಿ ರಂಗದಲ್ಲಿಯೂ ಸಾಧನೆಗೆ ಮುಂದಾಗುತ್ತಿರುವ ಮಹಿಳೆಯರಿಗೆ ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯೂ ಉತ್ತಮ ಸಹಕಾರ ನೀಡಲು ಮುಂದಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಸಂಸ್ಥೆ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುತ್ತಿದೆ. ಮಹಿಳೆಯರು ಯೋಜನೆಯ ಸದುಪಯೋಗವನ್ನು ಪಡೆದು ಉನ್ನತ ಸಾಧನೆಗೆ ಮುಂದಾಗಬೇಕು ಎಂದರು.ಬೆಲ್‌ಸ್ಟಾರ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಝೋಜನ್ ಹೆಡ್ ರಾಜಶೇಖರ ಮಾತನಾಡಿ, ಸಾಲ ಸೌಲಭ್ಯವನ್ನು ಪಡೆದುಕೊಳ್ಳುವ ನೂರಾರು ಮಹಿಳೆಯರು ಉತ್ತಮ ಜೀವನ ನಿರ್ವಹಣೆಯೊಂದಿಗೆ ಆದಾಯ ಉತ್ಪನ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎಂದರು.ಕವಿತಾ ಅರಳಿಹಳ್ಳಿ ಮಾತನಾಡಿ, ಸಾಧನೆಗೆ ಮುಂದಾಗುವ ಮಹಿಳೆಯರು ಆರೋಗ್ಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಅವಶ್ಯವಾಗಿದೆ ಎಂದರು.ಗೀತಾ ನಿಂಗನೌಡ್ರ ಮಾತನಾಡಿ, ಪ್ರಸ್ತುತ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಕುರಿತು ಆತ್ಮವಲೋಕನ ಅವಶ್ಯವಾಗಿದೆ ಎಂದರು. ಪಿಡಿಒ ವೀರೇಶ ಆವಾರಿ ಮಾತನಾಡಿ, ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳ ಕುರಿತು ವಿವರಿಸಿದರು. ಎಸ್‌ಐಆರ್‌ಡಿ ತರಬೇತಿದಾರ ಶಿವಕುಮಾರ ಹಿರೇಮಠ, ಸಂಸ್ಥೆಯ ಬಿಎಂ ಕೌಶಲ್ಯ ಉಪನ್ಯಾಸ ನೀಡಿದರು. ವಿವಿಧ ರಂಗದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಶೈಲಾ ರಾಮಣ್ಣನವರ ಸಮಾರಂಭ ಉದ್ಘಾಟಿಸಿದರು. ಗ್ರಾಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರತ್ನವ್ವ ಹರಿಜನ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಸದಸ್ಯರಾದ ಹುಲಿಗೆಮ್ಮ ಗೌಡಗೇರಿ, ಫಕ್ಕಿರಗೌಡ ಅರಳಿಹಳ್ಳಿ, ದೇವಪ್ಪ ಬಡಿಗೇರ, ತಾಪಂ ಟಿಪಿಎಂ ಬಸವರಾಜ ಎಚ್.ಎಂ., ಎಂಬಿಕೆ ಮಂಜುಳಾ, ಪ್ರಮುಖರಾದ ಮಂಜುನಾಥ ಬಿ.ಎಂ. ಹಾಗೂ ಇತರರು ಪಾಲ್ಗೊಂಡಿದ್ದರು. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ರಾಣಿಬೆನ್ನೂರು: ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ನಿವೃತ್ತ ದೈಹಿಕ ನಿರ್ದೇಶಕ ಎಸ್.ಎಚ್. ಹುಚ್ಚಗೊಂಡರ ತಿಳಿಸಿದರು.ನಗರದ ಹಲಗೇರಿ ರಸ್ತೆಯ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾ. ಡಾ. ಸುರೇಶ ಬಣಕಾರ ಮಾತನಾಡಿ, ದೇಶಿಯ ಕ್ರೀಡೆಗಳು ಮಾನವನ ಸಮಗ್ರ ಆರೋಗ್ಯದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾ. ಡಾ. ಸುರೇಶ ಬಣಕಾರ ಮಾತನಾಡಿ, ದೇಶಿಯ ಕ್ರೀಡೆಗಳು ಮಾನವನ ಸಮಗ್ರ ಆರೋಗ್ಯದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...