ಕನ್ನಡಪ್ರಭ ವಾರ್ತೆ ಮೈಸೂರು
ದ್ವಿಚಕ್ರ ವಾಹನಗಳ ಕಳುವು ಪ್ರಕರಣಗಳ ಆರೋಪಿ ಮತ್ತು ಮಾಲುಗಳನ್ನು ಪತ್ತೆ ಮಾಡುವ ಸಂಬಂಧ ಕಳೆದ ಮಾ.28 ರಂದು ಬಿಎಂಎಚ್ ಆಸ್ಪತ್ರೆಯ ಬಳಿರುವ ಪಾರ್ಕ್ ಕಡೆ ಪೊಲೀಸರು ಗಸ್ತುನಲ್ಲಿದ್ದರು. ಈ ವೇಳೆ ಪಾರ್ಕ್ ನ ಬಳಿ ಪಾರ್ಕಿಂಗ್ ಮಾಡಿದ್ದ ವಾಹನಗಳನ್ನು ನೋಡಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ ಜಯಲಕ್ಷ್ಮೀಪುರಂ ಠಾಣೆಗೆ ಸೇರಿದ 2 ಹಾಗೂ ಮೈಸೂರು ದಕ್ಷಿಣ ಠಾಣೆಗೆ ಸೇರಿದ 1 ದ್ವಿಚಕ್ರವಾಹನ ಕಳವು ಪ್ರಕರಣಗಳು ಪತ್ತೆಯಾಗಿದೆ.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಎಸ್. ಜಾಹ್ನವಿ, ಎನ್.ಆರ್. ಉಪ ವಿಭಾಗದ ಎಸಿಪಿ ಅಶ್ವತ್ಥನಾರಾಯಣ ಅವರ ಮಾರ್ಗದರ್ಶನದಲ್ಲಿ ಜಯಲಕ್ಷ್ಮೀಪುರಂ ಠಾಣೆಯ ಇನ್ಸ್ ಪೆಕ್ಟರ್ ಕುಮಾರ್, ಎಸ್ಐ ಸ್ಮೀತಾ, ಎಎಸ್ಐ ರಾಜೇಗೌಡ ಮತ್ತು ಸಿಬ್ಬಂದಿ ಅಭಿಷೇಕ್ ಬೆಂಜಮಿನ್, ಎಂ.ಡಿ. ರವಿ, ಎಚ್.ಕೆ. ಶ್ರೀನಿವಾಸ್, ದೇವರಾಜು, ಎಸ್. ರಾಜೇಶ್, ಸೋಮಣ್ಣ, ಕುಮಾರ್, ಸಚಿನ್, ಬಿ.ಕೆ. ರವಿ, ಕೆ.ಎಂ. ಮಂಜುನಾಥ್, ತಾಂತ್ರಿಕ ವಿಭಾಗದ ಪಿ. ಕುಮಾರ್ ಈ ಪತ್ತೆ ಮಾಡಿದ್ದಾರೆ.