ಮನೆ ಮನೆ ಮಾದೇಗೌಡ- ಅಭಿನಂದನಾ ಗ್ರಂಥ

KannadaprabhaNewsNetwork | Published : May 22, 2025 1:08 AM
ರೇಷ್ಮೆಯಲ್ಲಿ ವರ್ಷಕ್ಕೆ 9 ಬೆಳೆ ತೆಗೆದು, ಮೈಸೂರಿನಲ್ಲಿ ಮಾರಾಟ ಮಾಡುತ್ತಾರೆ. ಮೊದಲು ರೇಷ್ಮೆಗೂಡು ಮಾರಾಟಕ್ಕೆ ರಾಮನಗರ ಅಥವಾ ಕೊಳ್ಳೇಗಾಲದ ಮುಡಿಗುಂಡಕ್ಕೆ ಹೋಗಬೇಕಿತ್ತು.
Follow Us

ಕನ್ನಡಪ್ರಭ ವಾರ್ತೆ ಮೈಸೂರುಮನೆ ಮನೆ ಮಾದೇಗೌಡ- ಬೃಹತ್‌ ಸಂಪುಟವು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ ಸಿಐಟಿಬಿ ಮಾಜಿ ಅಧ್ಯಕ್ಷ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ. ಮಾದೇಗೌಡರ ಅಭಿನಂದನಾ ಗ್ರಂಥ.ಈ ಗ್ರಂಥ ಆರು ವಿಭಾಗಗಳಲ್ಲಿ ಇದೆ. ''''''''ಜೀವಣ ಚಿತ್ರಣ'''''''' ಭಾಗದಲ್ಲಿ ಮಾ.ವೆಂಕಟೇಶ್‌ ಅವರು ಡಿ. ಮಾದೇಗೌಡರ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದಾರೆ.''''''''ಬಲ್ಲವರು ಕಂಡಂತೆ'''''''' ಭಾಗದಲ್ಲಿ ಜಿ.ಟಿ. ದೇವೇಗೌಡ, ಕೆ. ಹರೀಶ್‌ ಗೌಡ, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ತನ್ವೀರ್‌ ಸೇಠ್‌, ಎಲ್‌. ನಾಗೇಂದ್ರ, ಪಿ. ಪ್ರಶಾಂತ್‌ ಗೌಡ, ಟಿ.ಎಸ್. ಶ್ರೀವತ್ಸ, ಸಿಪಿಕೆ, ಎನ್.ಎಸ್. ರಾಮೇಗೌಡ, ಕೆ. ಚಿದಾನಂದಗೌಡ, ಡಿ.ಕೆ. ರಾಜೇಂದ್ರ, ಸಿ. ನಾಗಣ್ಣ, ಕೆ.ಪಿ. ಬಸವೇಗೌಡ, ಕೆ.ಬಿ. ಪ್ರಭುಪ್ರಸಾದ್‌, ಕೆ.ಟಿ. ವೀರಪ್ಪ, ವೂಡೇ ಪಿ. ಕೃಷ್ಣ, ಬಿ.ಕೆ. ಚಂದ್ರಶೇಖರ ಗೌಡ, ಪದ್ಮಾ ಶೇಖರ್‌, ಶ್ರೀನಿವಾಸಮೂರ್ತಿ, ಎಂ.ವಿ. ದೇವಿಪ್ರಸಾದ್‌, ಎ. ರಂಗಸ್ವಾಮಿ, ನೀ. ಗಿರಿಗೌಡ, ಲಿಂಗಣ್ಣ ಬಂಧೂಕಾರ್‌, ಅಡ್ಡಂಡ ಸಿ. ಕಾರ್ಯಪ್ಪ, ಜಯಪ್ರಕಾಶ್‌ ಗೌಡ, ಅಂಚಿ ಸಣ್ಣಸ್ವಾಮಿಗೌಡ, ಶಿವಾಜಿರಾವ್‌, ಕೆ. ಕಾಳಚನ್ನೇಗೌಡ, ಕೆ.ವೈ. ಶ್ರೀನಿವಾಸ್‌, ಕೆ. ಕೆಂಪಲಿಂಗರಾಜು, ನಾ. ಮಹಾವೀರಪ್ರಸಾದ್‌, ಖದೀರ್‌, ಬಿ. ಶ್ರೀನಿವಾಸ್‌, ಸುಜಯ್‌ ಕುಮಾರ್‌, ಪಿ .ಬೆಟ್ಟೇಗೌಡ, ಪುನೀತ್‌ ಕುಮಾರ್‌, ಜಿ. ಬಸವರಾಜು, ಡಿ.ಆರ್‌. ಶೇಷಾಚಲ, ಕೆ.ಎಸ್‌. ಕೃಷ್ಣ, ಕೋಕಿಲಾ, ಜೆ. ಲೋಹಿತ್‌, ಎನ್‌.ಎಸ್‌. ದೇವಿಕಾ, ಎಂ.ಕೆ. ವೀಣಾ, ಎಚ್.ಎಲ್. ನಾಗರಾಜ್‌, ಎಸ್‌. ಪ್ರಕಾಶ್‌ ಬಾಬು, ಆರ್‌. ಎಸ್‌. ಪೂರ್ಣಾನಂದ, ದಿನೇಶ್‌ ಗಾವನಹಳ್ಳಿ, ಕೆ.ಎಂ. ಮಧುರಾದೇವಿ, ಕೆ.ಬಿ. ಲಿಂಗರಾಜು, ಎಸ್.ಪಿ. ಯೋಗಣ್ಣ, ಕೆ.ಎಸ್‌. ನಾಗರತ್ನ ಮಾದೇಗೌಡ, ಎಂಜಿಆರ್‌ ಅರಸು ಅವರು ಮಾದೇಗೌಡರ ಸೇವಾತತ್ಪರತೆ, ಪರಿಸರ ಪ್ರೇಮ, ರಾಜಕಾರಣ, ರೈತ ಪ್ರೇಮ, ದೂರದೃಷ್ಟಿಯ ಚಿಂತನೆ, ವಾಗ್ಮಿ, ಆಶಾಮಂದಿರ ಯೋಜನೆಯ ರೂವಾರಿ, ಲೋಕೋಪಕಾರಿ, ಸಂಘಟಕ, ಸೇವಾಚತುರ, ಸರ್ವೋದಯ ಚಿಂತಕ, ಸಮಾಜಮಖಿ ಜನಸೇವಕ, ಮತ್ತಿತರ ಅಂಶಗಳನ್ನು ಕುರಿತು ಬರೆದಿದ್ದಾರೆ.''''''''ಸಾಧನೆಯ ಹಾದಿಯಲ್ಲಿ'''''''' ಭಾಗದಲ್ಲಿ ಕೆ.ಪಿ. ಬಸವೇಗೌಡ, ಎನ್‌.ಕೆ. ರಾಮಚಂದ್ರಗೌಡ, ಬೆಳಗೊಳ ಸುಬ್ರಹ್ಮಣ್ಯ, ಎಂ.ವಿ. ಪರಶಿವಮೂರ್ತಿ, ಎನ್‌.ಸಿ. ಸುಮತಿ, ಶ್ಯಾಮೇಶ್‌ ಅತ್ತಿಗುಪ್ಪೆ, ಎನ್.ಸಿ. ಅನಿಲ್‌ಕುಮಾರ್‌, ಚಂದ್ರು, ಎಸ್. ಪ್ರಕಾಶ್‌ ಬಾಬು, ಬಸವರಾಜು ಎಂ. ಹಟ್ಟಿಗೌಡರ್‌, ರವಿಕುಮಾರ್‌ ಅವರು ಆಶಾಮಂದಿರ ಯೋಜನೆ, ಹೆಬ್ಬಾಳು ಕೆರೆಗೆ ಕಾಯಕಲ್ಪ, ಮಹದೇಶ್ವರ ಪ್ರಾಧಿಕಾರ ರಚನೆ, ಯೂತ್‌ ಹಾಸ್ಟೆಲ್‌ ಮತ್ತಿತರ ಸಾಧನೆಗಳನ್ನು ದಾಖಲಿಸಿದ್ದಾರೆ.''''''''ಜಾನಪದ ಅವಲೋಕನ'''''''' ಭಾಗದಲ್ಲಿ ಹಿ.ಚಿ. ಬೋರಲಿಂಗಯ್ಯ, ಹಿ.ಶಿ. ರಾಮಚಂದ್ರೇಗೌಡ, ಪಿ. ಮಹಾದೇವಯ್ಯ, ಮಹಾದೇವ ಶಂಕನಪುರ, ಎಸ್‌. ಪ್ರಕಾಶ್‌ ಬಾಬು, ಚಿಕ್ಕಣ್ಣ ಎಣ್ಣೆಕಟ್ಟೆ, ನಿಂಬೇಹಳ್ಳಿ ಚಂದ್ರಶೇಖರ್‌, ಎನ್‌. ತಮ್ಮಣ್ಣಗೌಡ, ಎಚ್.ಆರ್‌. ಚೇತನಾ, ನರಸಿಂಹೇಗೌಡ ನಾರಣಾಪುರ, ವೈ.ಸಿ. ಭಾನುಮತಿ, ಮೀರಾಸಾಬಿಹಳ್ಳಿ ಶಿವಣ್ಣ, ಕುರುವ ಬಸವರಾಜ್‌, ಕುಶಾಲ ಬರಗೂರು, ಚಂದ್ರು ಅವರು ಜನಪದ ಮಹಾಭಾರತ, ಮಲೆಯಮಾದೇಶ್ವರ, ರೇಣುಕ ಎಲ್ಲಮ್ಮ, ಅನ್ನದಾನಿ ಭೈರವ, ಮೈಲಾರಲಿಂಗ, ಕಾಳಿಂಗರಾಯ ಮತ್ತು ಬಾಲನಾಗಮ್ಮ, ಜುಂಜಪ್ಪನ ಕಾವ್ಯ, ಬಿಳಿಗಿರಿ ರಂಗಸ್ವಾಮಿ, ಪಿರಿಯಾಪಟ್ಟಣ ಕಾಳಗ, ಬೇಲೂರು ಬಿಷ್ಟಮ್ಮನ ಕೆರೆ, ಎತ್ತಪ್ಪನ ಸಂಪ್ರದಾಯ, ಬೊಮ್ಮೂರಮ್ಮ ದೇವಸ್ಥಾನ ಕುರಿತು ಬರೆದಿರುವ ಮೌಲ್ಯಯುತ ಲೇಖನಗಳಿವೆ. ''''''''ಇವು ಸಾಹಿತ್ಯ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ತುಂಬಾ ಉಪಯುಕ್ತವಾಗಿವೆ. ಅನುಬಂಧ'''''''' ಭಾಗದಲ್ಲಿ ಮಾದೇಗೌಡರೊಂದಿಗೆ ಶ್ಯಾಮೇಶ್‌ ಅತ್ತಿಗುಪ್ಪೆ ನಡೆಸಿರುವ ಮಾತುಕತೆ, ಸ್ವವಿವರ, ವಂಶವೃಕ್ಷ ಮತ್ತಿತರ ವಿವರಗಳಿವೆ. ಆರನೇ ಭಾಗದಲ್ಲಿ ಚತ್ರ ಸಂಪುಟವಿದೆ. ಮೈಸೂರಿನ ಸಮಕಾಲೀನ ಇತಿಹಾಸ ಇಲ್ಲಿ ದಾಖಲಾಗಿದೆ. ಮೈಸೂರಿನ ಚರಿತ್ರೆ ಬಗ್ಗೆ ಆಸಕ್ತಿ ಇರುವವರು ಓದಬಹುದು, ಸಂಶೋಧಕರಿಗೆ ಆಕರ ಗ್ರಂಥವಾಗಲಿದೆ.ಆರಂಭದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಗಣ್ಯರ ಸಂದೇಶಗಳಿವೆ. ಪ್ರೊ.ಜಯಪ್ರಕಾಶ್‌ ಗೌಡ ಅವರ ಪ್ರಧಾನ ಸಂಪಾದಕತ್ವ, ಪ್ರೊ.ನರಸಿಂಹೇಗೌಡ ನಾರಣಾಪುರ, ಪ್ರೊಎನ್‌. ತಮ್ಮಣ್ಣಗೌಡ, ಎ.ಎಂ. ಶ್ಯಾಮೇಶ್‌ ಅವರ ಸಂಪಾದಕತ್ವದಲ್ಲಿ ಈ ಗ್ರಂಥವನ್ನು ಹೊರತರಲಾಗಿದೆ. ಮಂಡ್ಯದ ಕರ್ನಾಟಕ ಸಂಘ ಈ ಗ್ರಂಥವನ್ನು ಪ್ರಕಟಿಸಿದ್ದು, ಡಾ.ಎ. ರಂಗಸ್ವಾಮಿ ಅವರ ನಾಂದಿನುಡಿ, ಆಸಕ್ತರು ಮೊ. 94481 944೫6 ಅಥವಾ ಎಂ.ವಿ. ದೇವಿಪ್ರಸಾದ್‌, ಮೊ. 98451 00877 ಸಂಪರ್ಕಿಸಬಹುದು.