ಮೈಸೂರು ದಸರಾ ಆಹಾರ ಮೇಳ ಫುಲ್‌ ರಶ್‌, ವ್ಯಾಪಾರಸ್ಥರು ಖುಷ್‌...!

KannadaprabhaNewsNetwork |  
Published : Oct 01, 2025, 01:00 AM IST
102 | Kannada Prabha

ಸಾರಾಂಶ

ಮಹಾರಾಜ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಹಾರ ಇಲಾಖೆಯಿಂದ ಆಯೋಜಿಸಿರುವ ಆಹಾರ ಮೇಳ ಕಳೆದ ದಿನಗಳಿಂದ ಪ್ರವಾಸಿಗರು, ತಾಲೂಕು, ಜಿಲ್ಲೆಗಳಿಂದ ಹಾಗೂ ಸ್ಥಳೀಯರು, ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭೇಟಿ ನೀಡಿ ತಮ್ಮ ಇಷ್ಟವಾದ ತಿಂಡಿಗಳನ್ನು ಆಸ್ವಾಧಿಸಿ ತೃಪ್ತಿಪಟ್ಟಿದ್ದಾರೆ.

ಎಲ್.ಎಸ್. ಶ್ರೀಕಾಂತ್‌

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಆಹಾರ ಮೇಳ ಫುಲ್‌ರಶ್‌, ವ್ಯಾಪಾರಸ್ಥ ಫುಲ್ ಖುಷ್‌.., ಹೌದು ಇದು ಅಕ್ಷರಶಃ ನಿಜ.

ನಗರದ ಮಹಾರಾಜ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಹಾರ ಇಲಾಖೆಯಿಂದ ಆಯೋಜಿಸಿರುವ ಆಹಾರ ಮೇಳ ಕಳೆದ ದಿನಗಳಿಂದ ಪ್ರವಾಸಿಗರು, ತಾಲೂಕು, ಜಿಲ್ಲೆಗಳಿಂದ ಹಾಗೂ ಸ್ಥಳೀಯರು, ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭೇಟಿ ನೀಡಿ ತಮ್ಮ ಇಷ್ಟವಾದ ತಿಂಡಿಗಳನ್ನು ಆಸ್ವಾಧಿಸಿ ತೃಪ್ತಿಪಟ್ಟಿದ್ದಾರೆ.

ದಸರಾ ಮಹೋತ್ಸವದಲ್ಲಿ ಮುಖ್ಯ ಆಕರ್ಷಣೆಯಾಗಿರುವ ಆಹಾರ ಮೇಳಕ್ಕೆ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೂ ಭಾರಿ ಜನಸಂಖ್ಯೆಯಲ್ಲಿ ಭೇಟಿ ನೀಡಿದ್ದು, ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಬೀರಿದೆ.

ಎತ್ತ ತಿರುಗಿದರೂ ವಿವಿಧ ಬಗೆಯ ಆಹಾರಗಳು ಕಣ್ಣಿಗೆ ಬೀಳುತ್ತಿದ್ದು, ತಿಂಡಿ ಪ್ರಿಯರಿಗೆ ಯಾವುದು ತಿನ್ನುವುದು, ಯಾವುದನ್ನು ಬಿಡುವುದು ಅನ್ನು ಮಟ್ಟಕ್ಕೆ ಆಹಾರ ಮಳಿಗೆಗಳಿದ್ದು, ಬಾಯಲ್ಲಿ ನೀರೂರಿಸುವ ಸಸ್ಯಹಾರ, ಮಾಂಸಹಾರ ತಿಂಡಿ ಪದಾರ್ಥಗಳು, ವಿವಿಧ ಬಗೆಯ ಚಾಟ್ಸ್‌ಗಳು, ಐಸ್‌ಕ್ರಿಮ್‌, ಬೇಕರಿಗಳು, ನಂದಿನಿ ಮಳಿಗೆ, ವಿವಿಧ ಜಿಲ್ಲೆಗಳ ಕಾಫಿ, ಟೀ ಮಳಿಗೆಗಳು ಜನರನ್ನು ಕೈ ಬೀಸಿ ಕರೆಯುತ್ತಿತ್ತು.

ವಿವಿಧ ಜಿಲ್ಲೆಗಳ ವಿಶಿಷ್ಟ ಶೈಲಿಯ ತಿಂಡಿ, ತಿನಿಸು:

ಕರ್ನಾಟಕದ ವಿವಿಧ ಜಿಲ್ಲೆಗಳ ವಿಶೇಷ ತಿನಿಸುಗಳ ಒಂದೆಡೆ ಸಿಗುವುದರಿಂದ ಅದರ ರುಚಿಯನ್ನು ಸವಿಯಲು ಸಾವಿರಾರು ತಿಂಡಿ ಪ್ರಿಯರು ಭೇಟಿ ನೀಡುತ್ತಿದ್ದಾರೆ.

ಜೋಳದ ರೊಟ್ಟಿ, ದಾವಣಗೆರೆ ದೋಸೆ:

ಆಹಾರ ಮೇಳದಲ್ಲಿ ಮೈಸೂರಿನ ಜನತೆ ಹೆಚ್ಚಾಗಿ ಜೋಳದ ರೊಟ್ಟಿ, ದಾವಣಗೆರೆ ದೋಸೆಗೆ ಗಿರ್ಮಿಟ್‌, ಮಿರ್ಚಿ, ಬಜ್ಜಿ, ಶೆಖೆ ಗಿಣ್ಣು ಹೆಚ್ಚು ಮೋರೆ ಹೋಗಿದ್ದಾರೆ.

ವಿವಿಧ ಬಗೆಯ ಬಿರಿಯಾನಿಗೆ ಮುಗಿದ ಮಾಂಸಪ್ರಿಯರು:

ಆಹಾರ ಮೇಳದಲ್ಲಿ ಮಾಂಸ ಪ್ರಿಯರನ್ನು ವಿವಿಧ ಬಗೆಯ ಬಿರಿಯಾನಿಗಳು ಕೈ ಬೀಸಿ ಕರೆಯುತ್ತಿತ್ತು, ಬೊಂಬು ಬಿರಿಯಾನಿ ಹಾಗೂ ಹೊಸಕೋಟೆ ಬಿರಿಯಾನಿಗಳ ರುಚಿ ನೋಡಲು ಮಾಂಸಪ್ರಿಯರು ಮುಗಿಬಿದ್ದಿದ್ದಾರೆ.

ಈ ಬಾರಿ ಅ. 5ರವರೆಗೆ ಆಹಾರ ಮೇಳ:

ಪ್ರತಿಬಾರಿ ಆಯುಧಪೂಜೆ ಕೊನೆಗೊಳ್ಳುತ್ತಿದ್ದ ಆಹಾರ ಮೇಳವನ್ನು ಈ ಭಾರಿ ಅ. 5ರವರೆಗೆ ವಿಸ್ತರಿಸಿದ್ದು, ತಿಂಡಿ ಪ್ರಿಯರು ಭಾರಿ ಸಂತೋಷ ವ್ಯಕ್ತಪಡಿಸಿದ್ದು, ವ್ಯಾಪಾರಸ್ಥರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ