ಮೈಸೂರಿನಲ್ಲಿ ನಡೆದ ದಸರಾ ಸಿಎಂ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾವಸತಿ ನಿಲಯದ ಪುರುಷ ಹಾಗೂ ಮಹಿಳಾ ಕುಸ್ತಿ ಪಟುಗಳು 9 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಪದಕಗಳನ್ನು ಹಾಗೂ ಖೇಲೋ ಇಂಡಿಯಾ ಹಳಿಯಾಳ ಕೇಂದ್ರದ ಕುಸ್ತಿ ಪಟುಗಳು 1ಚಿನ್ನ ಹಾಗೂ 1 ಬೆಳ್ಳಿ ಸೇರಿ ಒಟ್ಟು 19 ಪದಕ ಗೆದ್ದಿದ್ದು, ಇದರಲ್ಲಿ ಸಮಗ್ರ ಪ್ರಶಸ್ತಿಯನ್ನು ಮಹಿಳಾ ಕುಸ್ತಿ ಪಟುಗಳು ಬಾಚಿಕೊಂಡಿದ್ದಾರೆ.
10 ಚಿನ್ನ, 6 ಬೆಳ್ಳಿ, 3 ಕಂಚು ಸೇರಿ ಒಟ್ಟು 19 ಪದಕ । ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಕನ್ನಡಪ್ರಭ ವಾರ್ತೆ ಹಳಿಯಾಳ
ಮೈಸೂರಿನಲ್ಲಿ ನಡೆದ ದಸರಾ ಸಿಎಂ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾವಸತಿ ನಿಲಯದ ಪುರುಷ ಹಾಗೂ ಮಹಿಳಾ ಕುಸ್ತಿ ಪಟುಗಳು 9 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಪದಕಗಳನ್ನು ಹಾಗೂ ಖೇಲೋ ಇಂಡಿಯಾ ಹಳಿಯಾಳ ಕೇಂದ್ರದ ಕುಸ್ತಿ ಪಟುಗಳು 1ಚಿನ್ನ ಹಾಗೂ 1 ಬೆಳ್ಳಿ ಸೇರಿ ಒಟ್ಟು 19 ಪದಕ ಗೆದ್ದಿದ್ದು, ಇದರಲ್ಲಿ ಸಮಗ್ರ ಪ್ರಶಸ್ತಿಯನ್ನು ಮಹಿಳಾ ಕುಸ್ತಿ ಪಟುಗಳು ಬಾಚಿಕೊಂಡಿದ್ದಾರೆ.
ಮಹಿಳೆಯರ ವಿಭಾಗ:
ರಾಧಿಕಾ ಬಸ್ತವಾಡಕರ(50ಕೆಜಿ) ಪ್ರಥಮ, ಕಾವ್ಯ ದಾನವೆನ್ನವರ(55ಕೆಜಿ) ಪ್ರಥಮ, ಸವಿತಾ ಸಿದ್ದಿ59ಕೆಜಿ) ಪ್ರಥಮ, ಭುವನೇಶ್ವರಿ ಕೋಳಿವಾಡ(62ಕೆಜಿ) ಪ್ರಥಮ, ಪ್ರತಿಕ್ಷಾ ಭೋವಿ(72ಕೆಜಿ) ಪ್ರಥಮ, ಮನಿಷಾ ಸಿದ್ದಿ(76ಕೆಜಿ) ಪ್ರಥಮ, ಕಾವೇರಿ ತಳಗೇರಿ (53ಕೆಜಿ)ದ್ವಿತೀಯ, ಶಾಲಿನಾ ಸಿದ್ದಿ (57ಕೆಜಿ) ದ್ವಿತೀಯ, ವರ್ಷಾ ಯಮನಕ್ಕನವರ (65ಕೆಜಿ) ದ್ವಿತೀಯ, ಒಕ್ಸುಲಿಯಾ ಸಿದ್ಧಿ (8ಕೆಜಿ) ದ್ವಿತೀಯ, ವಿದ್ಯಾಶ್ರೀ ಗೆನ್ನನವರ(62ಕೆಜಿ) ತೃತೀಯ ಸ್ಥಾನ ಪಡೆದಿದ್ದಾರೆ.
ಖೇಲೋ ಇಂಡಿಯಾ ಕೇಂದ್ರದ ಮಹಿಳೆಯರ (68ಕೆಜಿ) ವಿಭಾಗದಲ್ಲಿ ಸುಜಾತಾ ಪಾಟೀಲ ಪ್ರಥಮ, ಪುರುಷರ ಗ್ರೀಕೋ ರೋಮನ್ (67ಕೆಜಿ) ಸೂರಜ್ ಗಂದೀಟ್ಕರ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ. ನಾಯಕ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.