ಕನ್ನಡಪ್ರಭ ವಾರ್ತೆ ಮೈಸೂರುಬಸವ ಬಳಗಗಳ ಒಕ್ಕೂಟದ ವತಿಯಿಂದ 2026ನೇ ಸಾಲಿನ ಬಸವ ಜಯಂತಿ ಆಚರಣೆಯ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ. ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.ಸುತ್ತೂರು ಮಠದಲ್ಲಿ ನಡೆದ ಸಭೆಯಲ್ಲಿ ಮೈಸೂರು ಜಿಲ್ಲಾ ವೀರಶೈವ–ಶೈವ–ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಹಾಗೂ ಸಮನ್ವಯ ಸಮಿತಿಯ ಸದಸ್ಯರು ಸರ್ವಾನುಮತದಿಂದ ಈ ನಿರ್ಣಯ ಕೈಗೊಂಡರು.ಬಸವ ತತ್ತ್ವ, ಶರಣ ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಂ. ಚಂದ್ರಶೇಖರ್ ಅವರು ಸಲ್ಲಿಸಿರುವ ಮಹತ್ವದ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.ವೀರಶೈವ ಲಿಂಗಾಯತ ಮಹಾಸಭಾ ಅದ್ಯಕ್ಷ ಎಚ್.ವಿ. ಬಸವರಾಜು, ನಿಕಟ ಪೂರ್ವ ಅದ್ಯಕ್ಷ ಬಿ.ಕೆ. ನಾಗರಾಜು, ಮಾಜಿ ಅದ್ಯಕ್ಷರಾದ ಕೆ.ಎನ್. ಪುಟ್ಟಬುದ್ದಿ. ಕಾನ್ಯ ಶಿವಮೂರ್ತಿ, ದಕ್ಷಿಣಾ ಮೂರ್ತಿ, ಜಯಣ್ಣ, ಮೂಗೂರು ನಂಜಂಡಸ್ವಾಮಿ, ಕೆ.ಕೆ. ಖಂಡೇಶ್, ಟಿ. ಲಿಂಗರಾಜು, ಪ್ರದೀಪ್ ಕುಮಾರ್, ಸಿ. ಗುರುಸ್ವಾಮಿ, ದೂರ ಶಿವಕುಮಾರ್ ಪ್ರಸಾದ್ ಬಾಬು, ಜಿಲ್ಲಾ ನಿರ್ದೇಶಕ ದಾರಿಪುರ ಡಿ. ಚಂದ್ರಶೇಖರ್, ರೇಚಣ್ಣ, ದನ್ಯ ಸತ್ಯೇಂದ್ರ ಮೂರ್ತಿ, ಶಿವಸ್ವಾಮಿ, ಸಂಘಟನೆಯ ಪದಾಧಿಕಾರಿಗಳು ಇದ್ದರು.