ಕನ್ನಡಪ್ರಭ ವಾರ್ತೆ ಮೈಸೂರು
ಅಶೋಕಪುರಂ ರೈಲ್ವೆ ನಿಲ್ದಾಾಣದಲ್ಲಿ ಮೈಸೂರು ಬೆಂಗಳೂರು ಮೆಮೊ ರೈಲುಗಾಡಿಗೆ ಹಸಿರು ನಿಶಾನೆ ತೋರಿದರು. ಎರಡು ಜೋಡಿ ಮೆಮು ರೈಲುಗಳು ಭಾನುವಾರದಿಂದ ಸೇವೆ ಆರಂಭಿಸಲಿದೆ. ಬೆಂಗಳೂರಿನ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಅಶೋಕಪುರಂ ರೈಲು ನಿಲ್ದಾಣದಲ್ಲಿ ಆರು ಪ್ಲಾಟ್ ಫಾರಂ, ಬುಕ್ಕಿಂಗ್ ಕಚೇರಿಯೊಂದಿಗೆ ಹೊಸ ನಿಲ್ದಾಣದ ಕಟ್ಟಡ, ಪ್ರವೇಶ 1, ಪ್ರವೇಶ 2ರ ಪ್ಲಾಟ್ ಫಾರ್ಮ್ ಗಳಿಗೆ ಪಾದಚಾರಿ ಮೇಲ್ಸುತುವೆ ನಿರ್ಮಿಸಿ, ವಿಸ್ತೃತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.ನವೀಕೃತ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ 11 ಪ್ಲಾಟ್ ಫಾರ್ಮ್ ಇರುವುದರಿಂದ ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಒತ್ತಡ ಕಡಿಮೆ ಆಗಲಿದೆ. ಪ್ರಯಾಣಿಕರ ದಟ್ಟಣೆ ನಿವಾರಿಸುವ ಪರ್ಯಾಯ ನಿಲ್ದಾಣವಾಗಿ ಮಾರ್ಪಟ್ಟಾಗಿದೆ. ಬೆಂಗಳೂರಿನಿಂದ ಬರುವ ರೈಲುಗಳ ಸೇವೆ ವಿಸ್ತರಣೆ ಆಗಲಿದ್ದು, 4, 5, 6ನೇ ಪ್ಲಾಟ್ ಫಾರ್ಮ್ ಪೂರ್ಣ ಪ್ರಮಾಣದ ಮೇಲ್ಛಾವಣಿಯೊಂದಿಗೆ ಪ್ರಯಾಣಿಕರಿಗೆ ಸುರಕ್ಷತೆ ನೀಡುತ್ತದೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, 2025-26ನೇ ಸಾಲಿನ ಕೇಂದ್ರ ಆಯವ್ಯಯವು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಜನರಿಗೆ ಅನುಕೂಲ ಕಲ್ಪಿಸಿದೆ. ರೈಲ್ವೆ ಸೇವೆ ವಿಸ್ತರಣೆ, ಪ್ರಾಚೀನ ಗ್ರಂಥಗಳ ಡಿಜಿಟಲೀಕರಣ, ಮೈಸೂರು- ಕುಶಾಲನಗರ ಚತುಷ್ಪಥ ಕಾಮಗಾರಿ, ಉಡಾನ್ ಯೋಜನೆಯಡಿ ವಿಮಾನ ಸೇವೆ, ಆಟಿಕೆ ತಯಾರಿಸುವ ಬೃಹತ್ ಕಂಪನಿ ಸ್ಥಾಪನೆ, ಹೋಂ ಸ್ಟೇಗೆ ಮುದ್ರಾ ಸಾಲ ಸೌಲಭ್ಯ, 50 ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಮೈಸೂರು ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಿ ಅಗರ್ವಾಲ್ ಇದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ 1,632 ಕಿ.ಮೀ.ಗಳಲ್ಲಿ 1,048 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ವಂದೇ ಭಾರತ್ ರೈಲ್ವೆ ಸೇವೆ ವಿಸ್ತರಣೆ ಆಗುತ್ತಿದೆ. 10 ಸಾವಿರ ಸಾಮಾನ್ಯ ಬೋಗಿಗಳ ಅಳವಡಿಕೆ ಮಾಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ರೈಲ್ವೆ ಸೇವೆ ನೀಡುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ. ಅವರು ಅಂಕಿ ಸಂಖ್ಯೆಯನ್ನು ಸರಿಯಾಗಿ ಗಮನಿಸಬೇಕು. ದೂರದೃಷ್ಟಿಯಿಂದ ಬಜೆಟ್ ಅಧ್ಯಯನ ಮಾಡಬೇಕು. ಜಲಜೀವನ್ ಮಿಷನ್ ಅನುದಾನದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. 16ನೇ ಬಜೆಟ್ ಮಂಡಿಸಲಿರುವ ಅವರ ಬಾಯಿಯಿಂದ ಸುಳ್ಳು ಬರುವುದು ಒಳ್ಳೇಯದಲ್ಲ ಎಂದು ಪ್ರತಿಕ್ರಿಯಿಸಿದರು.