ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರಗಳು ಹಲವು ಆದೇಶಗಳನ್ನು ಹೊರಡಿಸಿವೆ. 2000 ವರ್ಷಗಳ ಇತಿಹಾಸ ಇರುವ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಭಾರತದಲ್ಲಿ 19519 ಮಾತೃ ಭಾಷೆಗಳು ಇವೆ. ಹಲವು ಭಾಷೆಗಳು ನಶಿಸಿ ಹೋಗುತ್ತಿವೆ. ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು ಕುವೆಂಪು. ಮೈಸೂರು ಸಾಹಿತಿಗಳ ತವರೂರು. ಬೇರೆ ಭಾಷೆಗಳನ್ನು ಕಲಿಯಿರಿ, ಆದರೆ ಕನ್ನಡವನ್ನು ಹೆಚ್ಚು ಬಳಕೆ ಮಾಡಬೇಕು. ಕನ್ನಡ ಬಳಕೆಗೆ 3000 ಆದೇಶಗಳನ್ನು ಮಾಡಲಾಗಿದೆ. ಕೇವಲ ಆದೇಶಗಳಿಂದ ಭಾಷೆ ಉಳಿಸಲು ಸಾಧ್ಯವಿಲ್ಲ. ಕನ್ನಡವನ್ನು ಬಳಕೆ ಮಾಡುವ ಮೂಲಕ ಉಳಿಸಬೇಕು ಎಂದು ಅವರು ಹೇಳಿದರು.ಕನ್ನಡ ಭಾಷೆಯ ಬೋಧನೆಯನ್ನು ಸುಲಭಗೊಳಿಸಿ ಬೋಧನೆ ಮಾಡಬೇಕು. ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಕನ್ನಡ ಬೋಧನೆಯನ್ನು ಹೆಚ್ಚು ಮಾಡಬೇಕು. ಬ್ಯಾಂಕ್ ಗಳಲ್ಲಿ ಹೆಚ್ಚಾಗಿ ಹೊರ ರಾಜ್ಯದವರು ಇರುತ್ತಾರೆ. ಆದರೆ ಅವರು 3 ತಿಂಗಳ ಒಳಗೆ ಕನ್ನಡವನ್ನು ಕಲಿತು ವ್ಯವಹಾರ ನಡೆಸಬೇಕು. ಇಲ್ಲದಿದ್ದಲ್ಲಿ ಸ್ಥಳೀಯರೊಂದಿಗೆ ವ್ಯವಹಾರ ಮಾಡಲು ಕಷ್ಟ ಆಗುತ್ತದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಟಿ. ಗುರುರಾಜ್ ಮಾತನಾಡಿ, ಹಲವು ಇಲಾಖೆಗಳ ಮೋಹರುಗಳು ಇಂಗ್ಲಿಷ್ ನಲ್ಲಿ ಇದ್ದು, ಕನ್ನಡದ ಮೋಹರುಗಳನ್ನು ಬಳಕೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಇರುವ ನಾಮಫಲಕಗಳು ಕನ್ನಡಲ್ಲಿ ಇವೆ. ಆದರೆ, ಕೆಲವು ಕಡೆ 60:40 ರೇಶಿಯೋ ಇಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪರವಾನಗಿ ನವೀಕರಣಕ್ಕೆ ಬಂದಾಗ ಈ ಬಗ್ಗೆ ಷರತ್ತನ್ನು ವಿಧಿಸಿ ಅನುಷ್ಠಾನ ಮಾಡಲಾಗುವುದು.