ಆರೋಗ್ಯ ಮುಂಜಾಗ್ರತೆ ಎಲ್ಲಾ ಕ್ಷೇತ್ರದಲ್ಲೂ ಬಹುಮುಖ್ಯ : . ಬಸವರಾಜ

KannadaprabhaNewsNetwork |  
Published : May 17, 2024, 12:31 AM IST
33 | Kannada Prabha

ಸಾರಾಂಶ

ಸಮಾಜದಲ್ಲಿ ಮಾನವೀಯತೆ ಮತ್ತು ಸಾಮರಸ್ಯದ ಬದುಕಿನ ನಿರ್ಮಾಣಕ್ಕಾಗಿ ಆರಂಭವಾದ ಹಾರ್ಟ್ ಸಂಸ್ಥೆಯು ನಮ್ಮ ಅರಣ್ಯವನ್ನು ಸಂರಕ್ಷಿಸುತ್ತಿರುವ ಅರಣ್ಯ ಸೈನಿಕರಿಗೆ ಆರೋಗ್ಯ ಕಾಳಜಿ ತೋರುವುದು ನಮ್ಮ ಆದ್ಯ ಕರ್ತವ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಆರೋಗ್ಯ ಮುಂಜಾಗ್ರತೆ ಎಲ್ಲಾ ಕ್ಷೇತ್ರದಲ್ಲೂ ಬಹುಮುಖ್ಯ ಎಂದು ಮೈಸೂರು ವಲಯ ಡಿಸಿಎಫ್ ಡಾ.ಕೆ.ಎನ್. ಬಸವರಾಜ ತಿಳಿಸಿದರು.

ಹಾರ್ಟ್ ಸಂಸ್ಥೆಯು ಅರಣ್ಯ ಇಲಾಖೆಯ ಸಿಬ್ಬಂದಿಗಾಗಿ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಹಾಗೂ ಅದಕ್ಕೆ ಪೂರಕವಾಗಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ ಎಂದರು.

ಈ ನಿಟ್ಟಿನಲ್ಲಿ ಹಾರ್ಟ್ ಸಂಸ್ಥೆಯು ಸಮುದಾಯದಲ್ಲಿ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಹಲವು ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು, ಈ ದಿನ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ತೊಂದರೆಗಳು ಹಾಗೂ ಕಣ್ಣಿನ ಸಮಸ್ಯೆಗಳ ಕುರಿತು ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನಿಯ ಹಾಗೂ ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ಅವರು ಶುಭ ಕೋರಿದರು.

ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಮಾತನಾಡಿ, ಸಮಾಜದಲ್ಲಿ ಮಾನವೀಯತೆ ಮತ್ತು ಸಾಮರಸ್ಯದ ಬದುಕಿನ ನಿರ್ಮಾಣಕ್ಕಾಗಿ ಆರಂಭವಾದ ಹಾರ್ಟ್ ಸಂಸ್ಥೆಯು ನಮ್ಮ ಅರಣ್ಯವನ್ನು ಸಂರಕ್ಷಿಸುತ್ತಿರುವ ಅರಣ್ಯ ಸೈನಿಕರಿಗೆ ಆರೋಗ್ಯ ಕಾಳಜಿ ತೋರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಅರಣ್ಯ ಸೈನಿಕರು ಸಾಮಾನ್ಯವಾಗಿ ಸದೃಢವಾಗಿದ್ದರೂ ವಂಶಪಾರಂಪರಿಕವಾಗಿ ಬರುವ ಹಾಗೂ ನಮ್ಮ ಜೀವನ ಶೈಲಿಯಿಂದ ಬರಬಹುದಾದ ತೊಂದರೆಗಳನ್ನು ಆರಂಭದಲ್ಲೆ ನಿಯಂತ್ರಿಸಲು ಈ ಆರೋಗ್ಯ ಶಿಬಿರ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ನ್ಯೂ ಡಯಾಕೇರ್ ಸೆಂಟರ್ ಅಂಡ್ ಪಾಲಿಕ್ಲಿನಿಕ್, ನಾರಾಯಣ ಹೃದಯಾಲಯ ಹಾಗೂ ಎ.ಎಸ್‌.ಜಿ ಕಣ್ಣಿನ ಆಸ್ಪತ್ರೆ ಸಹಯೋಗದಿಂದ ಆಯೋಜಿಸಿದ್ದ ಈ ಶಿಬಿರದಲ್ಲಿ 130 ಹೆಚ್ಚು ಅರಣ್ಯ ಸಿಬ್ಬಂದಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ತಪಾಸಣೆ ಮಾಡಲಾಯಿತು. 100 ಹೆಚ್ಚು ಸಿಬ್ಬಂದಿಯ ಕಣ್ಣಿನ ಪರೀಕ್ಷೆ ಮಾಡಲಾಯಿತು.

ವೈದ್ಯಾಧಿಕಾರಿ ಡಾ. ನಾರಾಯಣ್ ಹೆಗ್ಡೆ, ಹಾರ್ಟ್ ಸಂಸ್ಥೆಯ ಕಾರ್ಯದರ್ಶಿ ರಮೇಶ್, ಎಸಿಎಫ್ ಲಕ್ಷ್ಮಿಕಾಂತ್, ಐಶ್ವರ್ಯ, ಅಭಿಷೇಕ್, ಆರ್‌ಎಫ್‌ಒ ಕೆ. ಸುರೆಂದ್ರ ಮೊದಲಾದವರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ