ಅಧಿಕಾರಕ್ಕೆ ಬರುವವರೆಲ್ಲರೂ ಇಲ್ಲಿ ಹಣ ಹೇಗೆ ಲೂಟಿ ಹೊಡೆಯಬಹುದೆಂಬುದನ್ನು ಆಲೋಚನೆ ಇರುವವರೇ ಹೊರತು ಕಾರ್ಖಾನೆಯನ್ನು ಅಭಿವೃದ್ಧಿಪಥದತ್ತ ಮುನ್ನಡೆಸುವ ಇಚ್ಛಾಶಕ್ತಿ ಯಾರೊಬ್ಬರಿಗೂ ಇಲ್ಲ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಮಹಾರಾಜರು ರೈತರ ಹಿತದೃಷ್ಟಿಯಿಂದ ನಿರ್ಮಿಸಿದ ಮೈಸೂರು ಸಕ್ಕರೆ ಕಾರ್ಖಾನೆ ಪ್ರಸ್ತುತ ಕಳ್ಳರಿಗೆ ಕಾಮಧೇನುವಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಆರೋಪಿಸಿದರು.ಅಧಿಕಾರಕ್ಕೆ ಬರುವವರೆಲ್ಲರೂ ಇಲ್ಲಿ ಹಣ ಹೇಗೆ ಲೂಟಿ ಹೊಡೆಯಬಹುದೆಂಬುದನ್ನು ಆಲೋಚನೆ ಇರುವವರೇ ಹೊರತು ಕಾರ್ಖಾನೆಯನ್ನು ಅಭಿವೃದ್ಧಿಪಥದತ್ತ ಮುನ್ನಡೆಸುವ ಇಚ್ಛಾಶಕ್ತಿ ಯಾರೊಬ್ಬರಿಗೂ ಇಲ್ಲದಿರುವುದು ಕಾರ್ಖಾನೆ ಅಧೋಗತಿಗೆ ಕಾರಣವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.ಕಾರ್ಖಾನೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಅಪ್ಪಾಸಾಹೇಬ ಪಾಟೀಲ್ ಕಾರ್ಯನಿರ್ವಹಿಸುತ್ತಿದ್ದ ವೇಳೆ ಭ್ರಷ್ಟಾಚಾರವೆಸಗಿದ್ದು, ಈ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ತನಿಖೆಗೆ ಆಡಳಿತ ಮಂಡಳಿ ನಿರ್ಣಯದಂತೆ ತನಿಖಾ ತಂಡವನ್ನೂರಚಿಸಲಾಗಿದೆ. ಅಪ್ಪಾಸಾಹೇಬ್ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಕಾಖಾರ್ಆನೆಯಲ್ಲಿ ಹಲವು ದಾಖಲೆಗಳನ್ನು ನಾಶ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ವಾಣಿಜ್ಯ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದರೂ ಯಾವುದೇ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.2022-23ನೇ ಸಾಲಿನಲ್ಲಿ ಸಕ್ಕರೆ, ಕಾಕಂಬಿ, ವಿದ್ಯುತ್ ಆಮದಿನಿಂದ ಕಾರ್ಖಾನೆ ನಷ್ಟಕ್ಕೊಳಗಾಗಿತ್ತು. ಈ ವೇಳೆ ತಾಂತ್ರಿಕ ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ್ ಪಾಟೀಲ ಅವರಿಗೆ ನೋಟೀಸ್ ಜಾರಿಗೊಳಿಸಿ ವಿಚಾರಣೆ ನಡೆಸಿ ಪುಣೆಯ ವಸಂತದಾದ ಸಕ್ಕರೆ ಸಂಸ್‌ಥೆಗೆ ಜಂಟಿ ತಾಂತ್ರಿಕ ಸಲಹೆಗಾರ ಶಾಸ್ತ್ರಿ ಅವರಿಂದ ವರದಿ ಪಡೆದು ಪರಿಶೀಲಿಸಿ ಮಂಡಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮೇ ಮತ್ತು ಜೂನ್ 2023ರಲ್ಲಿ ಸಕ್ಕರೆ ಮಾರಾಟ ಮಾಡದೆ ವಿಳಂಬ ಮಾಡಿದ್ದರಿಂದ ನಷ್ಟ ಉಂಟಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ತನಿಖಾ ವರದಿ ನೀಡುವಂತೆ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರಿಗೆ ಆಡಳಿತಮಂಡಳಿ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಅಧ್ಯಕ್ಷರ ವಾಹನಕ್ಕೆ ಸರ್ಕಾರದಿಂದ 300 ಲೀಟರ್ ನಿಗದಿಪಡಿಸಿದ್ದರೂ ಅಧಿಕಾರ ದುರುಪಯೋಗಪಡಿಸಿಕೊಂಡು 300 ಲೀಟರ್‌ಗಿಂತ ಹೆಚ್ಚು ಬಳಕೆ ಮಾಡಿರುವುದು ಕಂಡುಬಂದಿದೆ. ಸಿಸಿಟಿವಿ ಅಳವಡಿಸಿರುವ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮ ಆಹಿತಿ ಕೇಳಿದರೆ ಅಧಿಕಾರಿಗಳು ಯಾವುದೇ ಹಹಣ ಪಾವತಿಸದಿಲ್ಲವೆಂದು ಮಾಹಿತಿ ನೀಡಿದ್ದು, ಸಿಸಿಟಿವಿ ಅಳವಡಿಸಿದ ಬಳಿಕ ಟೆಂಡರ್ ಕರೆದು ಅಕ್ರಮವೆಸಗಿದ್ದಾರೆ ಎಂದು ಆಪಾದಿಸಿದರು.ಕಾರ್ಖಾನೆ ವ್ಯಾಪ್ತಿಯಲ್ಲಿದ್ದ ಲಕ್ಷಾಂತರ ರು. ಬೆಲೆಬಾಳುವ ಭಾರೀ ಗಾತ್ರದ ಮರಗಳನ್ನು ಕಡಿದ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ಅರಣ್ಯಾಧಿಕಾರಿಗಳು ತಾಂತ್ರಿಕ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅರಣ್ಯಾಧಿಕಾರಿಗಳ ಅನುಮತಿ ಪಡೆಯದೆ ಅಧ್ಯಕ್ಷರು ಮತ್ತು ಅಧಿಕಾರಿಗಳು ಶಾಮೀಲಾಗಿ ಅಕ್ರಮವಾಗಿ ಕೇವಲ 73 ಸಾವಿರ ರು.ಗಳಿಗೆ ಟೆಂಡರ್ ಕರೆದು ಕಾರ್ಖಾನೆಗೆ ನಷ್ಟ ಉಂಟುಮಾಡಿದ್ದಾರೆ ಎಂದು ದೂಷಿಸಿದರು.ಗೋಷ್ಠಿಯಲ್ಲಿ ವಿನೋಬಾ, ದೀಪಕ್, ಸಚಿನ್, ಪ್ರಸನ್ನ, ಸುನಿಲ್ ಇದ್ದರು.
೩ಕೆಎಂಎನ್‌ಡಿ-೨
ಮೈಷುಗರ್ ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ನಗರಸಭೆ ಮಾಜಿ ಸದಸ್ಯಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.